ಮಂಗಳೂರು[ಜು. 16]  ಅಶ್ಲೀಲ ವಿಡೀಯೋ ತೋರಿಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದವನ ಬಂಧನವಾಗಿದೆ.

ಸಲೀಮ್ [40] ಎಂಬಾತನನನ್ನು ಬಂಧಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕೋಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಪಾಠ: ಶಿಕ್ಷಕನಿಗೆ ಆಳಿಗೊಂದೇಟು

ಸಲೀಮ್ ಮಾಲೀಕತ್ವದ ಫ್ಯಾನ್ಸಿ ಸ್ಟೋರ್ ಗೆ ನಿನ್ನೆ ಬಂದಿದ್ದ ವಿದ್ಯಾರ್ಥಿನಿಗೆ ಆರೋಪಿ ಅಶ್ಲೀಲ ವಿಡೀಯೋ ತೋರಿಸಿದ್ದ. ಇದಾದ ಮೇಲೆ ಕಿರುಕುಳ ನೀಡಲು  ಮುಂದಾಗಿದ್ದ ಎಂಬ ಆರೋಪದ ಮೇಲೆ ಕೊಣಾಜೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.