ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರು. ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಪ್ರವೇಶಿಸಿತ್ತು. ಆದರೆ ಅದು ಬಹಿರಂಗ ಪಡಿಸಿರುವ ಮಾಹಿತಿ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ.

ಬೆಳಗಾವಿ ಮೂಲದ ಬಹುಕೋಟಿ ವಂಚನೆ ಆಧಾರದ ಮೇಲೆ ಇಂದು ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದೆ. ಅದು ಸಣ್ಣ-ಪುಟ್ಟ ಅಲ್ಲ ಸುಮಾರು 35 ಸಾವಿರ ಜನರಿಗೆ ವಂಚಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಅಲ್ಲಿ ಕಂಡಿದ್ದು ಸಣ್ಣದಲ್ಲ, ದೊಡ್ಡ ಮಟ್ಟದ ವಂಚನೆ ನಡೆದಿದೆ. ಈ ಕುರಿತು ಜಾರಿ ನಿರ್ದೇಶನಾಲಯದ ವರದಿ ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಹಿಂದೆ ಏನಾಗಿತ್ತು?

ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರು. ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಪ್ರವೇಶಿಸಿತ್ತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನೀಲಣ್ಣವರ ಅವರ ಬೆಳಗಾವಿಯ ಶಿವಬಸವ ನಗರದ ಎಂಎಚ್‌ ಟವರ್‌ ಅಪಾರ್ಟ್‌ಮೆಂಟ್‌ನಲ್ಲಿರುವ ನಿವಾಸದ ಮೇಲೆ ಇ.ಡಿ. ದಾಳಿ ನಡೆಸಿತ್ತು. ಹಲವು ಗಂಟೆಗಳ ಕಾಲ ದಾಖಲೆಗಳು, ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಹಣಕಾಸು ದಾಖಲೆಗಳನ್ನು ಅಂದೇ ಪರಿಶೀಲಿಸಿತ್ತು. ದಾಳಿ ವೇಳೆ ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಹಾಗೂ ಅಳಿಯ ಸಂಜು ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದು ತಿಳಿದುಬಂದಿದೆ. ಆಪ್ತರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ಶೋಧ ನಡೆಸಿ, ಅವನ ಬಂಧನವನ್ನು ಮಾಡಿತ್ತು ಇಂದು ರೀಲೀಸ್ ಆದ ದೋಷಾರೋಪ ಪಟ್ಟಿಯಿಂದ ದಂಗಾಗುವಂತ ಮಾಹಿತಯೊಂದು ಹೊರಬಂದಿದೆ.

ದೊಡ್ಡ ಮಟ್ಟದ ವಂಚನೆ!

ಆರೋಪಿ ಶಿವಾನಂದ ನೀಲಣ್ಣನವರ ಸುಮಾರು 35 ಸಾವಿರ ಜನರಿಗೆ ಬರೋಬ್ಬರಿ 2,165 ಕೋಟಿ ರೂಪಾಯಿ ಮೋಸ ಮಾಡಿದ್ದಾನೆ ಎನ್ನುವ ಸಾಕ್ಷ್ಯವನ್ನು ಇಡಿ ದಾಖಲಿಸಿದೆ. ಅಲ್ಲದೇ ಶಿವಾನಂದ ನೀಲಣ್ಣನವರ್ ಬ್ಯಾಂಕ್ ಖಾತೆಯಲ್ಲಿದ್ದ 2.02 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಇಡಿ (ED) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಉಂಟಾದ ನಷ್ಟ ಏಷ್ಟು?

ಈ ಇಡೀ ಹಗರಣದಿಂದ ಒಟ್ಟು 185.95 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣದ ಪೈಕಿ 25 ಕೋಟಿ ರೂ.ಗಳನ್ನು 'ಶ್ರೀಮತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್' ಮತ್ತು 'ಧನಶ್ರೀ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ಲಿಮಿಟೆಡ್' ಎಂಬ ಸಹಕಾರಿ ಸಾಲ ಸಂಘಗಳಲ್ಲಿ ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಇದೇ ಹಣ ಇಟ್ಟುಕೊಂಡು, ತನ್ನ ಆಪ್ತರ ಹೆಸರಲ್ಲಿ ಸಾಲ ಪಡೆದು ಭೂಮಿಯನ್ನು ಖರೀದಿಸಲಾಗಿದೆ ಎನ್ನಲಾಗಿದೆ.

ಕುಟುಂಬದ ಖಾತೆಗಳಿಗೆ ಹಣ ವರ್ಗಾವಣೆ!

ಈ ರಿಯಲ್ ಎಸ್ಟೇಟ್ ಹೂಡಿಕೆಗಳಷ್ಟೇ ಅಲ್ಲದೆ, ವಂಚನೆ ಹಣವನ್ನು ಆತನ ಪತ್ನಿ ಶ್ರೀಮತಿ ಸಂಗೀತಾ ಮತ್ತು ಅಪ್ರಾಪ್ತ ಮಗ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎನ್ನುವ ಮಾಹಿತಿಯನ್ನು ಇಡಿ ದಾಖಲಿಸಿದೆ. ಇಷ್ಟಕ್ಕೆ ನಿಲ್ಲದ ವಹಿವಾಟು ಇದೇ ಸಾರ್ವಜನಿಕರ ಠೇವಣಿ ಹಣ ಆತನದೇ ಆದ 'ಶಿವಂ ಸೇವಾ (OPC) ಪ್ರೈವೇಟ್ ಲಿಮಿಟೆಡ್' (19 ಕೋಟಿ ರೂ.), 'ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್' ಮತ್ತು 'ಶಿವಂ ಫುಡ್ಸ್' ನಂತಹ ಸಂಬಂಧಿತ ವ್ಯಾಪಾರ ಉದ್ಯಮಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎನ್ನುವುದನ್ನು ಇಂದು ಇಡಿ ತಿಳಿಸಿದೆ.

ಚಲನಚಿತ್ರಕ್ಕೂ ಹೂಡಿಕೆ!

ಹೌದು ಇಷ್ಟೆಲ್ಲ ಮಾಡಿದ್ದು ಅಲ್ಲದೇ, ಚಲನಚಿತ್ರ ಉದ್ಯಮಗಳಿಗೂ ಹಣ ಹೂಡಿಕೆ ಮಾಡಿದ್ದು ಸಹ ಇದೀಗ ಬೆಳಕಿಗೆ ಬಂದಿದೆ. ಚಾಂಪಿಯನ್‌ ಸಿನೆಮಾಗೆ ಸಾರ್ವಜನಿಕರಿಂದ ಸಂಗ್ರಹಿಸಲಾದ ಠೇವಣಿಗಳ ಪೈಕಿ 5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ. ಜಾರಿ ನಿರ್ದೇಶನಾಲಯವಂತು ತನ್ನ ದೋಷಾರೋಪನೆ ಪಟ್ಟಿ ಸಲ್ಲಿದೆ. ಆದರೆ, ಮುಂದಿನ ಬೆಳವಣಿಗೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.