ಶಿವಮೊಗ್ಗ [ಸೆ.30]:  ರಾಜಕೀಯವಾಗಿ ಯಾವುದೇ ಪಕ್ಷಗಳಿದ್ದರೂ ಸಹ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟಾಗಿ ದಸರಾ ಮಹೋತ್ಸವ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಶಿವಮೊಗ್ಗದ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದರು.

ಐತಿಹಾಸಿಕ ದಸರಾವನ್ನು ಆಚರಣೆ ಮಾಡಿಕೊಂಡು ಬಂದಿದ್ದು, ನಮ್ಮಲ್ಲಿರುವ ದುಷ್ಟಗುಣಗಳನ್ನು ದೂರ ಮಾಡುವ ಮೂಲಕ ಉತ್ತಮವಾದ ಚೌಕಟ್ಟನ್ನು ಹಾಕಿಕೊಂಡು ಜೀವನ ಸಾಗಿಸೋಣ ಎಂದು ಸಂಸದ ಬಿ.ವೈ. ರಾಘ​ವೇಂದ್ರ ಹೇಳಿ​ದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಮೊಗ್ಗ ಕ್ಷೇತ್ರವು ನಾಡಿಗೆ ಅನೇಕ ರಾಜಕೀಯ ಗಣ್ಯರನ್ನು ನೀಡಿದೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಆಧ್ಯಾತ್ಮಿಕ ಕ್ಷೇತ್ರ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಅನುದಾನ ನೀಡುವ ಮೂಲಕ ಹಾಗೂ ವಿಮಾನ ನಿಲ್ದಾಣ, ರೈಲ್ವೇ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.