Asianet Suvarna News Asianet Suvarna News

ಶಿರಾ ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಶಿರಾ ನಗರದ ೯ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ ಗೆಲುವು ಸಾಧಿಸಿದ್ದಾರೆ. 812 ಮತಗಳನ್ನು ಪಡೆಯುವುದರ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಗ್ ಅವರನ್ನು 443 ಮತಗಳ ಅಂತರದಿಂದ ಸೋಲಿಸಿರುತ್ತಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಳಿನಿ ರವಿಶಂಕರ್ 294 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿರುತ್ತಾರೆ.

Shira Municipal Council by-election: Congress candidate wins snr
Author
First Published Dec 31, 2023, 10:09 AM IST

  ಶಿರಾ :  ಶಿರಾ ನಗರದ ೯ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ ಗೆಲುವು ಸಾಧಿಸಿದ್ದಾರೆ. 812 ಮತಗಳನ್ನು ಪಡೆಯುವುದರ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಗ್ ಅವರನ್ನು 443 ಮತಗಳ ಅಂತರದಿಂದ ಸೋಲಿಸಿರುತ್ತಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಳಿನಿ ರವಿಶಂಕರ್ 294 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿರುತ್ತಾರೆ.

ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಚುನಾವಣೆಯಾಗಿದ್ದರಿಂದ, ಎಲ್ಲಾ ಕಾಂಗ್ರೆಸ್ ನಗರಸಭೆ ಸದಸ್ಯರುಗಳು, ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆ ನಡೆಸಿ ಅಭ್ಯರ್ಥಿಯ ಅಬೂತಪೂರ್ವ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ವಿಜೇತ ಅಭ್ಯರ್ಥಿ ಎಂ.ಕೃಷ್ಣಪ್ಪ ಮಾತನಾಡಿ, ಮೊದಲು ಈ ವಾರ್ಡಿನಿಂದ ಮಹಿಳಾ ಅಭ್ಯರ್ಥಿಯ ಮೀಸಲಾತಿ ಇದ್ದುದರಿಂದ ನನ್ನ ಪತ್ನಿ ಪುಷ್ಪ ಕೃಷ್ಣಪ್ಪ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಗರಸಭೆಯ ಕಾನೂನಾತ್ಮಕ ಚಟುವಟಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲು ಅವರಿಗೆ ತೊಂದರೆಯಾಗುತ್ತಿದ್ದ ಕಾರಣ ಈ ಮೀಸಲಾತಿಯನ್ನು ಬದಲಿಸಿ ಪುರುಷ ಮೀಸಲಾತಿಯನ್ನು ತರಬೇಕೆಂದು ಕಾನೂನಾತ್ಮಕ ಹೋರಾಟ ನಡೆಸಿ ಅದರಲ್ಲಿ ಗೆಲುವು ಸಾಧಿಸಿದ್ದೇನೆ. ತದನಂತರ ಇತ್ತೀಚಿಗೆ ನಡೆದ ನಗರಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸುಳ್ಳು ದಾಖಲಾತಿ ನೀಡಿ ವಿಜೇತರಾದ ಅಭ್ಯರ್ಥಿಯ ವಿರುದ್ಧ ನ್ಯಾಯಲಯಕ್ಕೆ ಮೊರೆ ಹೋಗಿ ಅಲ್ಲಿಯೂ ಸಹ ಅಭ್ಯರ್ಥಿಯ ಆಯ್ಕೆಯನ್ನು ಅನುರ್ಜಿತಗೊಳಿಸುವುದರಲ್ಲಿ ಯಶಸ್ವಿಯಾಗಿದ್ದೇನೆ.

ನಗರಸಭೆಯ ಆಡಳಿತದಲ್ಲಿ ಬದಲಾವಣೆಯನ್ನು ತಂದು ನನ್ನ ಕೈಲಾದಷ್ಟು ಸುಧಾರಣೆ ಮಾಡುತ್ತೇನೆ, ನನ್ನ ಗೆಲುವಿಗೆ ಹಗಲಿರಲು ಶ್ರಮಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ವಂದನೆಗಳು ಎಂದು ತಿಳಿಸುತ್ತಾ ಭಾವುಕರಾದರು.

ಶಾಸಕ ಹಾಗೂ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ವಿಜೇತ ಅಭ್ಯರ್ಥಿ ಕೃಷ್ಣಪ್ಪ ನಗರಸಭೆಯ ಆಡಳಿತದ ಬಗ್ಗೆ ತುಂಬಾ ಪರಿಣಿತಿ ಹೊಂದಿದ್ದು, ಉತ್ತಮ ಆಡಳಿತ ನೀಡುತ್ತಾರೆ ಎಂಬ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು, ಈಗ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಸಂತೋಷ ಉಂಟು ಮಾಡಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ವಿಶ್ವಾಸ ತೋರಿಸಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಮಿನಿ ವಿಧಾನಸೌಧದಲ್ಲಿ ಬೆಳಗ್ಗೆ ೮ ಗಂಟೆಗೆ ಪ್ರಾರಂಭವಾದ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ, ಭದ್ರತಾ ಕೊಠಡಿಯಿಂದ ಮತಪಟ್ಟೆಗಳನ್ನು ಸಭಾಂಗಣಕ್ಕೆ ಪೊಲೀಸ್ ಭದ್ರತೆಯಲ್ಲಿ ತರಲಾಯಿತು. ಮೂರು ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತದಾನ ಎಣಿಕೆ ಪ್ರಕ್ರಿಯೆ ಪ್ರಾರಂಭವಾಯಿತು. ವಿಜೇತ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರಿಗೆ ಚುನಾವಣಾ ಅಧಿಕಾರಿ ಕೃಷ್ಣಪ್ಪ ಅವರು ಪ್ರಮಾಣ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೇಯಗಾದ, ಚುನಾವಣೆ ಅಧಿಕಾರಿ ಸಿ.ಎನ್. ಕೃಷ್ಣಪ್ಪ, ಸಹಾಯಕ ಚುನಾವಣೆ ಅಧಿಕಾರಿ ಈಶ್ವರ್ ಎಂ ಮೆಣಸಿಗಿ, ನಗರಸಭೆ ಆಯುಕ್ತ ರುದ್ರೇಶ್, ಕಂದಾಯ ನಿರೀಕ್ಷಕರಾದ ಮಂಜುನಾಥ್, ಸುದರ್ಶನ್ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios