ನೀರಾವರಿಯಿಂದ ಶಿರಾ ಸಮೃದ್ಧಿ ಮಾಡುವುದೇ ನನ್ನ ಗುರಿ

ಶಿರಾ ಕ್ಷೇತ್ರವನ್ನು ನೀರಿನಿಂದ ಸಮೃದ್ಧಿ ಮಾಡಬೇಕೆಂಬ ಗುರಿಯೊಂದಿಗೆ ಮಹತ್ವಾಕಾಂಕ್ಷೆಯ ಅಪ್ಪರ್‌ ಭದ್ರ ನೀರಾವರಿ ಯೋಜನೆಯನ್ನು 1125 ಕೋಟಿ ರುಪಾಯಿ ವೆಚ್ಚದ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು, 2023ರಲ್ಲಿ ತಾಲೂಕಿನ 65 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಡಾ.ಸಿ.ಎ.ರಾಜೇಶ್‌ ಗೌಡ ಹೇಳಿದರು.

Shira Development Is My First Aime Says Rajesh Gowda snr

 ಶಿರಾ :  ಶಿರಾ ಕ್ಷೇತ್ರವನ್ನು ನೀರಿನಿಂದ ಸಮೃದ್ಧಿ ಮಾಡಬೇಕೆಂಬ ಗುರಿಯೊಂದಿಗೆ ಮಹತ್ವಾಕಾಂಕ್ಷೆಯ ಅಪ್ಪರ್‌ ಭದ್ರ ನೀರಾವರಿ ಯೋಜನೆಯನ್ನು 1125 ಕೋಟಿ ರುಪಾಯಿ ವೆಚ್ಚದ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು, 2023ರಲ್ಲಿ ತಾಲೂಕಿನ 65 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಡಾ.ಸಿ.ಎ.ರಾಜೇಶ್‌ ಗೌಡ ಹೇಳಿದರು.

ತಾಲೂಕಿನ ಕುರುಡನಹಳ್ಳಿ ಗ್ರಾಮದಲ್ಲಿ ಸಂಪರ್ಕ ರಸ್ತೆ (Road) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಶಾಸಕನಾಗಿ (MLA) ಆಯ್ಕೆಯಾದ ಎರಡು ವರ್ಷದಲ್ಲಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿದಿರುವುದು ಹರ್ಷ ತಂದಿದೆ. ಒಬ್ಬ ಸಾಮಾನ್ಯ ಸೇವಕರಾಗಿ ಕ್ಷೇತ್ರದಲ್ಲಿ ಬಡ ಜನರ ಸೇವೆ ಮಾಡಿದ ತೃಪ್ತಿ ನನಗಿದ್ದು, ಶಿರಾ ಕ್ಷೇತ್ರದ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡುತ್ತಾರೆ ಎಂಬ ನಂಬಿಕೆ ದೃಢವಾಗಿದ್ದು, ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಸಂಕಲ್ಪ ಮತ್ತು ಗುರಿಯೊಂದಿಗೆ ಮುನ್ನಡೆದಿದ್ದೇನೆ ಎಂದರು.

ಶಿರಾ ತಾಲೂಕಿನಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಗೆ ತೆರಳುವ ಮಾರ್ಗದಲ್ಲಿ ಬರುವ ಎಲ್ಲಾ ಗ್ರಾಮಗಳನ್ನು ಖುದ್ದು ಭೇಟಿ ಮಾಡುತ್ತಿದ್ದು, ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹರಿಸುವ ಕಾರ್ಯ ಮಾಡುತ್ತಿದ್ದೇವೆ. ಕಳೆದ ಎರಡು ದಿನಗಳಿಂದ 45 ಗ್ರಾಮಗಳ ಭೇಟಿ ಮಾಡಿದ್ದೇವೆ. ಜನರ ಸ್ಥಳೀಯ ಸಮಸ್ಯೆಗಳನ್ನು ತುರ್ತಾಗಿ ನಿವಾರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

3.20 ಕೋಟಿ ವೆಚ್ಚದ ರಸ್ತೆ ಕಾಮಗಾರಿ: ಶಿರಾ ತಾಲೂಕಿನಲ್ಲಿ ಭಾನುವಾರ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಿದ್ದು, ಸುಮಾರು 1 ಕೋಟಿ ರು. ವೆಚ್ಚದ ಇಕನಹಳ್ಳಿ-ಕುರುಡನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ, ಹುಳಿಗೆರೆ ಮತ್ತು ಗೊಲ್ಲರಹಟ್ಟಿಯಲ್ಲಿ 30 ಲಕ್ಷ ರು. ವೆಚ್ಚದ ಸಿಸಿ ರಸ್ತೆ, ಮಾರಪ್ಪನಹಳ್ಳಿಯಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ, ಯಲಪೇನಹಳ್ಳಿ ಗೊಲ್ಲರಹಟ್ಟಿಯಲ್ಲಿ 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಬರಗೂರು ರಂಗಾಪುರದಲ್ಲಿ 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, ಹೊಸಹಳ್ಳಿ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಕಾಮಗಾರಿ, ಗೋಪಿಕುಂಟೆ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಕಾಮಗಾರಿ, ವೀರಗಾನಹಳ್ಳಿಯಲ್ಲಿ 15 ಲಕ್ಷದ ಸಿಸಿ ರಸ್ತೆ ಕಾಮಗಾರಿ ಮತ್ತು ಭೂತಪ್ಪನಗುಡಿ ಮೆಳೇಕೋಟೆ ಗ್ರಾಮದಲ್ಲಿ 80 ಲಕ್ಷ ವೆಚ್ಚದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಒಟ್ಟು 3.20 ಕೋಟಿ ರು.ಗಳಿಗೆ ಹೆಚ್ಚಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

1500 ವಸತಿ ಸೌಲಭ್ಯ: ಕ್ಷೇತ್ರದ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ವಿಶೇಷ ಆದ್ಯತೆ ನೀಡಿ ಸರ್ಕಾರ 1500 ಮನೆಗಳನ್ನು ನೀಡಿದ್ದು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿ ಅತಿ ಶೀಘ್ರದಲ್ಲಿ ನೀಡಲಾಗುವುದು ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ ಗೌಡ ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್‌, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಿಂಗಪ್ಪ, ಗ್ರಾಪಂ ಮಾಜಿ ಸದಸ್ಯ ಮಹಾದೇವಪ್ಪ, ಲಕ್ಷ್ಮಣಪ್ಪ, ಗೊಲ್ಲಹಳ್ಳಿ ರಂಗನಾಥ್‌, ಸಹಾಯಕ ಎಂಜಿನಿಯರ್‌ ಗೋವಿಂದರಾಜು ಸೇರಿದಂತೆ ಹಲವರು ಹಾಜರಿದ್ದರು.

ಕುಂಚಿಟಿಗ ಜನಾಂಗ ಶೀಘ್ರ ಕೇಂದ್ರ ಓಬಿಸಿ ಪಟ್ಟಿಗೆ

ಕುಂಚಿಟಿಗ ಜನಾಂಗವನ್ನು ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಶೇಷವಾಗಿ ಪರಿಗಣಿಸಿ ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ಕುಂಚಿಟಿಗ ಸಮುದಾಯಕ್ಕೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಮೀಸಲಾತಿ ದೊರಕದ ಕಾರಣ ಕುಂಚಿಟಿಗ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದರೂ ಐಎಎಸ್‌, ಐಪಿಎಸ್‌ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಉದ್ಯೋಗದಲ್ಲಿ ಹಿಂದುಳಿಯುವಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸು ಮಾಡಿದ ತಕ್ಷಣ ಕೇಂದ್ರ ಓಬಿಸಿ ಮೀಸಲಾತಿಯಲ್ಲಿ ಕುಂಚಿಟಿಗ ಜನಾಂಗವನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಬಂಟ ಒಕ್ಕಲಿಗ ಮತ್ತು ರೆಡ್ಡಿ ಒಕ್ಕಲಿಗ ಸಮುದಾಯವನ್ನೂ ಸಹ ಕೇಂದ್ರ ಓಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ರಾಜೇಶ್‌ಗೌಡ ಹೇಳಿದರು.

Latest Videos
Follow Us:
Download App:
  • android
  • ios