Asianet Suvarna News Asianet Suvarna News

ಬಿಜೆಪಿಯಲ್ಲಿ ಟಿಕೆಟ್ ಫೈಟ್ : ಯಾರಿಗೆ ಅವಕಾಶ?

ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು ಶಿರಾದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ

Shira By Election Ticket Fight in BJP snr
Author
Bengaluru, First Published Oct 8, 2020, 8:23 AM IST

 ತುಮಕೂರು (ಅ.08):  ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಅವರಿಗೆ ಟಿಕೆಟ್‌ ಕೊಡುವುದಕ್ಕೆ ವಿರೋಧ ವ್ಯಕ್ತವಾಗಿ ಗದ್ದಲ ಉಂಟಾದ ಘಟನೆ ಶಿರಾ ಗುಮ್ಮನಹಳ್ಳಿ ಗೇಟ್‌ ಬಳಿ ನಡೆದಿದೆ.

ಅಲ್ಲಿನ ಕರಿಯಮ್ಮನ ದೇವಾಲಯದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರಾಜೇಶಗೌಡರಿಗೆ ಟಿಕೆಟ್‌ ಕೊಡುವುದು ಬೇಡ ಎಂದು ಹೇಳಿದಾಗ ಆತನ ಕೈಯಿಂದ ಮೈಕ್‌ ಕಿತ್ತುಕೊಂಡ ಘಟನೆ ನಡೆಯಿತು.

RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ

ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದೆವು. ಆದರೆ ಅವರು ನಮ್ಮ ಕೈಗೆ ಸಿಗುವುದಿಲ್ಲ. ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕಾಗಿದೆ. ರಾಜೇಶಗೌಡರು ಕೂಡ ಬೆಂಗಳೂರಿನಲ್ಲೇ ಇರುತ್ತಾರೆ. ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಶಿರಾದಲ್ಲೇ ನೆಲೆಸಿರುವವರಿಗೆ ಟಿಕೆಟ್‌ ನೀಡಿ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ಲೋಕಸಭಾ ಚುನಾವಣೆಯಲ್ಲಿ ಶಿರಾದಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತ ನೀಡಿದ್ದೇವೆ. ಆದರೆ ಚಿತ್ರದುರ್ಗ ಸಂಸದರ ಕೊಡುಗೆ ಏನು ಎಂದು ಪ್ರಶ್ನಿಸಿದರು. ನಾವು ಮೋದಿಯನ್ನಾಗಲಿ,ಯಡಿಯೂರಪ್ಪನವರನ್ನಾಗಲಿ ಕಂಡಿಲ್ಲ. ಶಿರಾದಲ್ಲಿ ಕಾರ್ಯಕರ್ತರೇ ಪಕ್ಷದ ಬೇರು ಇದ್ದಂತೆ. ಆದರೆ ಇಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರು ಅಮಾಯಕರು, ಹೆಬ್ಬೆಟ್ಟುಗಳೆಂದು ಭಾವಿಸಿ ಹೇಗೆ ಬೇಕೋ ಹಾಗೆಯೇ ನಡೆಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

Follow Us:
Download App:
  • android
  • ios