Asianet Suvarna News Asianet Suvarna News

ಗೆದ್ದ ಶರತ್ ಬಣ ಬಿಟ್ಟು ಎಂಟಿಬಿ ಜೊತೆ ನಡೆದ ಮುಖಂಡರು

ಹೊಸಕೋಟೆ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋಲು ಕಂಡಿದ್ದು ಈ ವೇಳೆ ಜಯಗಳಿಸಿದ್ದ ಶರತ್ ಬಚ್ಚೇಗೌಡ ಬಣ ಬಿಟ್ಟು ಹಲವು ಮುಖಂಡರು ಇದೀಗ ಎಮಟಿಬಿ ಹಿಂದೆಯೇ ಹೊರಟಿದ್ದಾರೆ.

sharath bachegowda supporters join bjp in hoskote
Author
Bengaluru, First Published Aug 31, 2020, 8:55 AM IST

ಹೊಸಕೋಟೆ (ಆ.31):  ತಾಲೂಕಿನ ಬಹುತೇಕ ಕಾರ‍್ಯಕರ್ತರು ಬಿಜೆಪಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು, ಬಿಜೆಪಿ ಬೆಂಬಲಿಗರು ಗ್ರಾಪಂ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಹೆಚ್ಚಿನ ಬಹುಮತದಿಂದ ಗೆಲ್ಲುವದು ಖಚಿತ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಮದಲ್ಲಿ ಶರತ್‌ ಬಚ್ಚೇಗೌಡ ಬೆಂಬಲಿಗರು ಸ್ವಾಭಿಮಾನಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಭಾರತವನ್ನು ಇಡೀ ವಿಶ್ವವೇ ನೋಡುವಂತಹ ಅನೇಕ ಕಾರ‍್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿನ ಯಡಿಯೂರಪ್ಪ ಅವರ ಸಾಧನೆಯನ್ನು ಮೆಚ್ಚಿ ಅನೇಕ ಕಾರ‍್ಯಕರ್ತರು ಈಗಾಗಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಪಕ್ಷ ಸಂಘಟನೆಗೆ ಮುಂದಾಗಿ

ಬಿಜೆಪಿ ಪಕ್ಷ ತನ್ನದೇ ಆದಂತಹ ತತ್ವ ಸಿದ್ಧಾಂತವನ್ನು ಹೊಂದಿದ್ದು, ಎಲ್ಲಾ ಕಾರ‍್ಯಕರ್ತರಿಗೂ ಉತ್ತಮ ಅವಕಾಶವನ್ನು ಪಕ್ಷ ಕಲ್ಪಿಸಿಕೊಡುತ್ತಿದೆ. ಮೋದಿ ಪ್ರೇರಣೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವೇ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುತ್ತಿದ್ದು, ಭಾರತೀಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಬಿಜೆಪಿಗೆ ಸೇರ್ಪಡೆಯಾದ ಕಾರ‍್ಯಕರ್ತರು ಸಹ ಪಕ್ಷದ ಸಿದ್ಧಾಂತಗಳನ್ನು ಅರಿತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಎಂದರು.

ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್..

ಬಿಜೆಪಿ ನಗರ ಅಧ್ಯಕ್ಷ ಡಾ.ಸಿ.ಜಯರಾಜ್‌ ಮಾತನಾಡಿ ತಾಲೂಕಿನ ಟೌನ್‌ ಬ್ಯಾಂಕ್‌ ಹಾಗೂ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಪ್ರಾಬಲ್ಯ ಮೆರೆದಿದೆ. ಇದರಂತೆ ಮುಂದಿನ ದಿನಗಳಲ್ಲಿಯೂ ಗ್ರಾ.ಪಂ ಚುನಾವಣೆ ಎದುರಾಗುತ್ತಿದ್ದು, ಕಾರ್ಯಕರ್ತರು ಸೂಕ್ತ ಅಭ್ಯರ್ಥಿಗಳನ್ನು ಅಯ್ಕೆ ಮಾಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಹಳ್ಳಿಯಲ್ಲಿ ಪಕ್ಷ ಸಂಘಟೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ...

ಇದೇ ಸಂದರ್ಭದಲ್ಲಿ ಹೆತ್ತಕ್ಕಿ ಗ್ರಾಮದ ಟೈಲರ್‌ ಶಿವಣ್ಣ, ಗ್ಯಾಸ್‌ ಬಸವರಾಜು, ಮನು ಚಕ್ರವರ್ತಿ, ಅಭಿಷೇಕ್‌ ಆರಾಧ್ಯ ಸೇರಿದಂತೆ ಅನೇಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ನಂದಗುಡಿ ಜಿಪಂ. ಸದಸ್ಯ ಸಿ. ನಾಗರಾಜ್‌, ತಾ. ಬಿಜೆಪಿ ಘಟಕದ ಅಧ್ಯಕ್ಷ ಕೆ. ಸತೀಶ್‌, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಪ್ರಧಾನ ಕಾರ್ಯದರ್ಶಿ ಟಿ.ಜಿ. ಶ್ರೀಕಾಂತ್‌ ಮತ್ತಿತರರು ಇದ್ದರು.

Follow Us:
Download App:
  • android
  • ios