ದಾವಣಗೆರೆ [ಡಿ.10]: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ರಾಜೀನಾಮೆ ಪ್ರಹಸನಕ್ಕೆ ಕಾಂಗ್ರೆಸ್‌ ಹಿರಿಯ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿರುವುದರಿಂದ ಉಭಯ ನಾಯಕರು ಸುಮ್ಮನೆ ರಾಜೀನಾಮೆ ಕೊಟ್ಟಂತೆ ಮಾಡಿದ್ದಾರೆ. ಕೆಲ ದಿನಗಳ ನಂತರ ಮತ್ತೆ ವಾಪಾಸ್ಸು ಪಡೆಯುತ್ತಾರೆ. ರಾಹುಲ್‌ ಗಾಂಧಿಗೆ ಮಾಡಿದಂತೆ ರಾಜಿನಾಮೆ ಹಿಂಪಡೆಯಲು ಎಲ್ಲರೂ ಒತ್ತಾಯಿಸಲಿ ಎಂದು ಹೀಗೆ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಆಡಳಿತಾರೂಢ ಪಕ್ಷವೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸಹಜ. ಇದರಲ್ಲಿ ಹೊಸದೇನೂ ಇಲ್ಲ. ಹಿಂದೆಯೂ ಅನೇಕ ಬಾರಿ ಇದೇ ರೀತಿಯ ಫಲಿತಾಂಶ ಬಂದಿರುವುದನ್ನು ನೋಡಿದ್ದೇವೆ. ಆಳುವ ಸರ್ಕಾರಕ್ಕೆ ಅದರದ್ದೇ ಆದ ಸಂಪನ್ಮೂಲ ಇರುವುದರಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭ ಎಂದು ಅವರು ವಿಶ್ಲೇಷಿಸಿದರು.

ನನ್ನ ಮಂತ್ರಿ ಮಾಡಿದ್ರು ಮಾಡದೇ ಇದ್ರೂ ಸಂತೋಷ ಎಂದ ನೂತನ ಶಾಸಕ.

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ 15 ಕ್ಷೇತ್ರಗಳಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದೆ. ಅಲ್ಲದೇ ಇದೀಗ ಸಚಿವ ಸಂಪುಟ ವಿಸ್ತರಣೆ ತಯಾರಿಗಳು ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು.