ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯದ ‘ಶಕ್ತಿ’ ಯೋಜನೆಯಡಿಯಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್‌ ವಿತರಿಸುವ, ಮಹಿಳಾ ಪ್ರಯಾಣಿಕರ ಜೊತೆ ವರ್ತನೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಖುದ್ದಾಗಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಪರಿಶೀಲಿಸಿದರು. 

ಬೆಂಗಳೂರು (ಜೂ.22): ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯದ ‘ಶಕ್ತಿ’ ಯೋಜನೆಯಡಿಯಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್‌ ವಿತರಿಸುವ, ಮಹಿಳಾ ಪ್ರಯಾಣಿಕರ ಜೊತೆ ವರ್ತನೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಖುದ್ದಾಗಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಪರಿಶೀಲಿಸಿದರು. ಬುಧವಾರ ಶಾಂತಿನಗರದಿಂದ ಲಾಲ್‌ಬಾಗ್‌, ರಾಮಕೃಷ್ಣ ಆಶ್ರಮ, ಗಣೇಶ್‌ಭವನ, ಸೀತಾ ಸರ್ಕಲ್‌, ಹೊಸಕೆರೆಹಳ್ಳಿ ಕ್ರಾಸ್‌, ನಾಯಂಡಹಳ್ಳಿ ಮಾರ್ಗವಾಗಿ ದೀಪಾಂಜಲಿ ನಗರದವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಸತ್ಯವತಿ ಅವರು ಸಂಚರಿಸಿದರು.

ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ನೀಡುವುದು, ಪ್ರಯಾಣಿಕರೊಂದಿಗೆ ಹೇಗೆ ವರ್ತಿಸುತ್ತೇರೆ ಎಂಬುದನ್ನು ಪರಿಶೀಲಿಸಿದರು. ಯೋಜನೆ ಅಡಿಯಲ್ಲಿ ನಿರ್ವಾಹಕರು ಪ್ರಯಾಣಿಕರ ದಾಖಲಾತಿಗಳ ಪರಿಶೀಲನೆ, ಬಸ್‌ಗಳ ಸ್ವಚ್ಛತೆ ಮತ್ತು ಎಲ್ಲ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಿದರು. ಸಮರ್ಪಕವಾಗಿ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿದರು. ಚಾಲಕರು, ನಿರ್ವಾಹಕರಿಗೆ ಶಕ್ತಿ ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅಗತ್ಯ ದಾಖಲೆಗಳನ್ನು ತೋರಿಸುವಂತೆ ಪ್ರೇರೇಪಿಸಬೇಕು. 

ಬ್ರ್ಯಾಂಡ್‌ ಬೆಂಗಳೂರು ಸಲಹೆಗೆ ವೆಬ್‌ಸೈಟ್‌ ಶುರು: ಡಿ.ಕೆ.ಶಿವಕುಮಾರ್‌

ಯಾವುದೇ ಕಾರಣಕ್ಕೂ ಗೊಂದಲ, ಗಲಾಟೆಗಳಿಗೆ ಅವಕಾಶ ನೀಡಬಾರದು. ಮುಖ್ಯವಾಗಿ ನಿರ್ವಾಹಕರು, ವಾಹನ ಚಾಲನೆ ಸಂದರ್ಭದಲ್ಲಿ ಬಾಗಿಲು ತೆರೆಯಬಾರದು. ಬಸ್‌ನಿಲ್ದಾಣ ಅಥವಾ ನಿಗದಿತ ಜಾಗಕ್ಕೆ ಬಂದು ತಲುಪಿದ ನಂತರವೇ ಬಾಗಿಲು ತೆರೆದು ಪ್ರಯಾಣಿಕರು ಹೊರಗೆ ಹೋಗಲು ಅನುಕೂಲ ಮಾಡಿಕೊಡಬೇಕು. ವಾಹನದ ಬಾಗಿಲು ಮುಚ್ಚಿದ ಬಳಿಕವೇ ಚಾಲಕರು ವಾಹನ ಚಾಲನೆ ಮಾಡಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಖುದ್ದಾಗಿ ಬಸ್‌ಗಳಲ್ಲಿ ಸಂಚರಿಸಿ, ಚಾಲನಾ ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಿ, ಮಾರ್ಗದರ್ಶನ ನೀಡಿದ್ದು ಪ್ರಯಾಣಿಕರ ಪ್ರಶಂಸೆಗೂ ಪಾತ್ರವಾಯಿತು.

ಕಾರ್ಮಿಕರ ಉಚಿತ ಬಸ್‌ಪಾಸ್‌ಗೆ ಗ್ರಹಣ: ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ನೀಡುವ ಯೋಜನೆಗೆ ಹಿಡಿದಿರುವ ಗ್ರಹಣಕ್ಕೆ ತಕ್ಷಣ ಮೋಕ್ಷ ಸಿಗುವಂತೆ ಕಾಣಿಸುತ್ತಿಲ್ಲ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವಾದರೂ ಪಾಸ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಶ್ರಮಜೀವಿಗಳಿಗೆ ನಿರಾಸೆ ಕಾಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 44,28,004 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಹಲವರಿಗೆ ಅನುಕೂಲವಾಗಲಿ ಎಂದು ಹಿಂದಿನ ಬಿಜೆಪಿ ಸರ್ಕಾರ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಜಾರಿಗೆ ತಂದಿತ್ತು. 

Bengaluru: ಪುತ್ರ, ಸೊಸೆ ವಿರುದ್ಧ ದೂರು ಕೊಟ್ಟ 'ಬಂಗಾರದ ಮನುಷ್ಯ' ನಿರ್ದೇಶಕನ ಪತ್ನಿ

ಆದರೆ ಮಾಚ್‌ರ್‍ನಲ್ಲೇ ಪಾಸ್‌ಗಳ ಅವಧಿ ಮುಗಿದಿದ್ದರೂ ನವೀಕರಣವಾಗಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಈಗಲಾದರೂ ಪಾಸ್‌ ಸಿಗಬಹುದೇನೋ ಎಂಬ ನಿರೀಕ್ಷೆ ಹುಸಿಯಾಗಿದೆ. ಬಿಲ್ಡರ್‌ಗಳಿಂದ ಸಂಗ್ರಹಿಸುತ್ತಿದ್ದ ಕೋಟ್ಯಂತರ ರುಪಾಯಿ ಸೆಸ್‌ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿದ್ದು, ಕಾರ್ಮಿಕರಿಗೆ ಅನುಕೂಲವಾಗಲಿ ಎಂದು 2019ರಲ್ಲಿ ಮೊದಲು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ವಿತರಿಸಲಾಗಿತ್ತು. ಸಾರಿಗೆ ಇಲಾಖೆಗೆ ಈ ಮೊತ್ತವನ್ನು ಮಂಡಳಿ ಪಾವತಿಸುತ್ತಿತ್ತು. ಇದಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಪರಿಗಣಿಸಿ 2022ರಲ್ಲಿ ಉಳಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೂ 40 ಕಿ.ಮೀ.ವ್ಯಾಪ್ತಿಗೆ ಸೀಮಿತಗೊಳಿಸಿ ಮೂರು ತಿಂಗಳ ಅವಧಿಗೆ ಪಾಸ್‌ ವಿತರಿಸಲಾಗಿತ್ತು.