'ಎಸ್‌ಎಫ್‌ಐ ಕಾಂಗ್ರೆಸ್‌ನ ಒಂದು ಅಂಗ ಸಂಸ್ಥೆ'

ಕಾಂಗ್ರೆಸ್‌ ಅಥವಾ ಎಸ್‌ಎಫ್‌ಐಗೆ ದೇಶಪ್ರೇಮ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಕಳೆದ 70-75 ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ಎಸ್‌ಎಫ್‌ಐ ಸಹ ಕಾಂಗ್ರೆಸ್‌ನ ಒಂದು ಅಂಗ ಸಂಸ್ಥೆ. ಅವರಿಗೆ ದೇಶದ ಪರವಾಗಿ ಮಾತನಾಡಲು ಯೋಗ್ಯತೆಯಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದರು.

SFI is an affiliate of Congress says Muniswamy snr

 ಕೋಲಾರ (ಆ.12): ಕಾಂಗ್ರೆಸ್‌ ಅಥವಾ ಎಸ್‌ಎಫ್‌ಐಗೆ ದೇಶಪ್ರೇಮ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಕಳೆದ 70-75 ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ಎಸ್‌ಎಫ್‌ಐ ಸಹ ಕಾಂಗ್ರೆಸ್‌ನ ಒಂದು ಅಂಗ ಸಂಸ್ಥೆ. ಅವರಿಗೆ ದೇಶದ ಪರವಾಗಿ ಮಾತನಾಡಲು ಯೋಗ್ಯತೆಯಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ (school)  ಆರ್‌ಎಸ್‌ಎಸ್‌ (Rss) ತರಬೇತಿ ಶಿಬಿರ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿರುವುದಕ್ಕೆ ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಆರೆಸ್ಸೆಸ್‌ ಟೀಕಿಸಲು ನಾಚಿಕೆಯಾಗಬೇಕು

ದೇಶದಲ್ಲಿ ಪಿಎಫ್‌ಐ (PFI), ಎಸ್‌ಡಿಪಿಐ ನವರು ದೇಶದ್ರೋಹಿ ಚಟುವಟಿಕೆಗಳನ್ನು ಮಾಡಿದಾಗ ದೇಶದ ಯಾವುದೇ ಜನಾಂಗದ ವ್ಯಕ್ತಿಗಳನ್ನು ಕೊಲೆ ಮಾಡಿದಾಗ, ಉಗ್ರಗಾಮಿ ಚಟುವಟಿಕೆಗಳನ್ನು ಮಾಡಿದಾಗ ಮಾತನಾಡುವುದಕ್ಕೆ ಬಾಯಿ ಇರಲಿಲ್ಲ. ಪಿಎಫ್‌ಐ, ಎಸ್‌ಡಿಪಿಐ ವಿಚಾರವಾಗಿ ಶಾಸಕ ಹ್ಯಾರಿಸ್‌ ಅವರ ಪುತ್ರ ನಲಪಾಡ್‌, ಕೆಲಸ ಕಾರ್ಯ ಇಲ್ಲದ ನಿರುದ್ಯೋಗಿಗಳು ಉಗ್ರಗಾಮಿ ಚಟುವಟಿಕೆಗಳನ್ನು ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಾಗ ಈ ಎಸ್‌ಎಫ್‌ಐ ನವರು ಎಲ್ಲಿ ಹೋಗಿದ್ದರು. ಅಂದು ಮೌನವಾಗಿದ್ದವರು ಇವತ್ತು ಆರ್‌ಎಸ್‌ಎಸ್‌ ವಿಚಾರವಾಗಿ ಯಾವ ಮುಖ ಇಟ್ಟುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ, ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಸುಮಾರು 70 ವರ್ಷ ದೇಶವನ್ನು ಆಳಿರುವ ಕಾಂಗ್ರೆಸ್‌ನವರು ದೇಶದ ವಿವಿಧ ಭಾಗಗಳನ್ನು ಪಾಕಿಸ್ತಾನ, ಚೀನಾಗೆ ಬಿಟ್ಟುಕೊಡುವುದಕ್ಕೆ ಅಲ್ಲದೆ ಜಮ್ಮು ಕಾಶ್ಮೀರ ವಿಚಾರವಾಗಿ ಏನೇನು ಮಾಡಿದ್ದರು ಎನ್ನುವುದು ಗೊತ್ತಿದೆ. ಆರ್‌ಎಸ್‌ಎಸ್‌ನಲ್ಲಿರುವವರು ಶಸ್ತಾ್ರಸ್ತ್ರ ಸಮೇತ ಐಟಿಸಿ ತರಬೇತಿ ನೀಡಲಾಗುತ್ತಿದ್ದು, ದೇಶದ ಬಗ್ಗೆ ಅಭಿಮಾನ ಮೂಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆರ್‌ಎಸ್‌ಎಸ್‌ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತು. ಆದರೆ ಇವರಿಗೆ ಏನು ಗೊತ್ತು ಎಂದು ವ್ಯಂಗ್ಯವಾಡಿದರು.

ದೇಶಪ್ರೇಮದ ಪಾಠ ಕಲಿಯಬೇಕಿಲ್ಲ

ಆರ್‌ಎಸ್‌ಎಸ್‌ನವರು ಈ ದೇಶಕ್ಕಾಗಿ ಪ್ರಾಣ ಕೊಡುವಂತಹವರು. ಭಾರತಮಾತೆಯ ಮಕ್ಕಳು ನಾವೆಲ್ಲ. ವಿದ್ಯಾವಂತ ಮಕ್ಕಳನ್ನು ಸರಿದಾರಿಗೆ ಕರೆದುಕೊಂಡು ಹೋಗುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಹೊರತು, ಇವರ ರೀತಿ ಉಗ್ರಗಾಮಿ, ದೇಶದ್ರೋಹಿ ಚಟುವಟಿಕೆಗಳನ್ನು ಮಾಡಿ ದೇಶ ಒಡೆಯುವ ಕೆಲಸ ನಾವು ಮಾಡುವುದಿಲ್ಲ. ಶಿಬಿರವನ್ನು ವಿರೋಧಿಸುತ್ತಿರುವ ಎಡಪಂಥೀಯರು, ಕೇರಳದಲ್ಲಿ ನಕ್ಸಲರನ್ನು ಹುಟ್ಟು ಹಾಕಿ ಹೋರಾಟಗಳನ್ನು ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಅಂತÖವರಿಂದ ನಾವು ಬುದ್ದಿ ಹೇಳಿಸಿಕೊಂಡು ದೇಶಪ್ರೇಮದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಒಂದರಡು ರಾಜ್ಯಗಳನ್ನು ಉಳಿಸಿಕೊಳ್ಳಲಿ 

ಕಾಂಗ್ರೆಸ್ ಭಾರತ್ ಜೋಡೋ ನಡುವೆ ಕಾಂಗ್ರೆಸ್ ಚೋಡೋ ನಡೆಯುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ಡಾ. ಸುಧಾಕರ್ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸಿನವರದ್ದು ಭಾರತ್ ಚೋಡೋ ಆಗೋಗಿದೆ.‌ 1947ರಲ್ಲೇ ಕಾಂಗ್ರೆಸಿನವರು ಭಾರತ್ ತೋಡೋ ಕಾರ್ಯಕ್ರಮ ಕೂಡಾ ಮಾಡಿದ್ದಾರೆ. ಕಾಂಗ್ರೆಸ್ಸಿನವರು ಈಗ ಜೋಡೋ ಕಾರ್ಯಕ್ರಮ ಮಾಡಿಕೊಳ್ಳಲಿ. ಸದ್ಯ ಅವರ ಕೈಯಲ್ಲಿ ಒಂದೆರಡು ರಾಜ್ಯಗಳು ಮಾತ್ರ ಉಳಿದುಕೊಂಡಿದೆ. ಕಾರ್ಯಕ್ರಮ‌ ಮಾಡಿದ್ರೆ ಅದಾದ್ರೂ ಉಳಿದುಕೊಳ್ಳುತ್ತದೆ, ಇಲ್ಲಾಂದ್ರೂ ಅದೂ ಇರಲ್ಲ ಎಂದು ಸಚಿವರು ಕುಹಕವಾಡಿದ್ದಾರೆ. ಇದರೊಂದಿಗೆ ಬಿಜೆಪಿಯ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಿರುವ ಬಗ್ಗೆ ಪ್ರತಿಕ್ರಯಿಸಿರುವ ಆರೋಗ್ಯ ಸಚಿವರು,‌ ಜನಜೀವನದ ಸ್ಥಿತಿಗತಿ ಒಳ್ಳೆಯ ರೀತಿಗೆ ಬದಲಾಯಿಸಲು ಯಶಸ್ವಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಸಾಮಾಜಿಕ, ನೀರಾವರಿ, ಬಲಹೀನ ವರ್ಗಗಳ ಸಬಲೀಕರಣ ಮುಂತಾದಕ್ಕೆ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ‌ ಮೀಸಲಾತಿಯನ್ನು ಹೆಚ್ಚಿಗೆ ಮಾಡಲಾಗಿದೆ. ಕಾಂಗ್ರೆಸ್ ಅನೇಕ ವರ್ಷಗಳ ಕಾಲ ದಲಿತರನ್ನು ಉದ್ಧಾರ ಮಾಡ್ತೇವೆ ಅಂತಿದ್ರು. ಆದರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಹೆಚ್ಚಳ, ಕಾರ್ಯಕ್ರಮ ರೂಪಿಸಲು ಅವರು ಎಡವಿದ್ದಾರೆ. ರಚನಾತ್ಮಕ ಹಾಗೂ ತರ್ಕಬದ್ಧ ಕಾರ್ಯಕ್ರಮಗಳ ಮೂಲಕ ಬಲಹೀನರಿಗೆ ಬಿಜೆಪಿ ಸರಕಾರ ಶಕ್ತಿ ತುಂಬಿಸುತ್ತಿದೆ. ಮುಖ್ಯಮಂತ್ರಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸೇರಿ ತಂಡವಾಗಿ ರಾಯಚೂರಿನಲ್ಲಿ ಜನಸಂಕಲ್ಪ‌ ಯಾತ್ರೆ ಪ್ರಾರಂಭಿಸಿದ್ದಾರೆ. ಇದು ಜಿಲ್ಲಾವಾರು ನಿರಂತರವಾಗಿ ನಡೆಯಲಿದ್ದು, 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಮೇಲೆ ನಂಬಿಕೆಯಿಟ್ಟಿದ್ದಾರೆ. ಇಂದು ಅತ್ಯಂತ ಎತ್ತರದಲ್ಲಿರುವ ಅಹಿಂದ ನಾಯಕರಂದ್ರೆ ನರೇಂದ್ರ ಮೋದಿಯವರು.‌ ಆದರೆ, ಅವರೆಂದೂ ತಾನು ಹಿಂದುಳಿದ ನಾಯಕನೆಂದು ಹೇಳಿಕೊಳ್ಳದೇ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸ್ತಿದ್ದಾರೆ. ಪ್ರಧಾನಿಯವರ ದಾರಿಯನ್ನೇ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ಹಿಡಿದಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾವ ಪಕ್ಷ ಆಡಳಿತದಲ್ಲಿದ್ದಾಗ ಏನು ಮಾಡಿದ್ದಾರೆ ಎಂದು ಜನರು ನೆನಪು ಮಾಡಿಕೊಳ್ತಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ನಾವು ಮತ್ತೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ ಎಂದು ಸಚಿವ ಡಾ.‌ಕೆ.‌ಸುಧಾಕರ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios