ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿ: ರಾಯಪ್ಪ
ಕನ್ನಡನಾಡಿನಲ್ಲಿ ಬದುಕು ಕಟ್ಟಿಕೊಂಡವರೆಲ್ಲರೂ ಕನ್ನಡ ಭಾಷೆ, ನಾಡು, ನುಡಿಗೆ ಸೇವೆ ಸಲ್ಲಿಸಿರಬೇಕು ಎಂದು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾದರ್ ರಾಯಪ್ಪ ಅಭಿಪ್ರಾಯಪಟ್ಟರು.
ಸೋಮವಾರಪೇಟೆ (ಜು.30) : ಕನ್ನಡನಾಡಿನಲ್ಲಿ ಬದುಕು ಕಟ್ಟಿಕೊಂಡವರೆಲ್ಲರೂ ಕನ್ನಡ ಭಾಷೆ, ನಾಡು, ನುಡಿಗೆ ಸೇವೆ ಸಲ್ಲಿಸಿರಬೇಕು ಎಂದು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾದರ್ ರಾಯಪ್ಪ ಅಭಿಪ್ರಾಯಪಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತ ಜೋಸೆಫರ ಶಾಲಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ದಿ.ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊ.ಅ.ಉಡುಪರ ಸಾಹಿತ್ಯಿಕ ಸೇವೆ ಶ್ಲಾಘನೀಯ: ಕೋಟ ಶ್ರೀನಿವಾಸ ಪೂಜಾರಿ
ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬರು ಓದಬೇಕು. ಕಥೆ, ಕವನ ಬರೆಯಲು ಒಂದಷ್ಟುಸಮಯವನ್ನು ಮೀಸಲಿಡಬೇಕು ಎಂದು ಹೇಳಿದರು.
ಕನ್ನಡ ಲೇಖಕಿ ಜಲಕಾಳಪ್ಪ(Jalakalappa) ಮಾತನಾಡಿ, ಮಕ್ಕಳು ಕನ್ನಡ ಪುಸ್ತಕ(Kannada Books)ಗಳನ್ನು ಹೆಚ್ಚಾಗಿ ಓದುವ ಅಭ್ಯಾಸ ಮಾಡಿಕೊಂಡರೆ, ಅನೇಕ ಲೇಖಕರ, ಮಹಾನ್ ಕವಿಗಳ ಪರಿಚಯವಾಗುತ್ತದೆ. ನಂತರ ಕನ್ನಡ ಸಾಹಿತ್ಯ ಶ್ರೀಮಂತಿಕೆ ಬಗ್ಗೆ ಅರಿವಾಗುತ್ತದೆ ಎಂದು ಹೇಳಿದರು.
ಕನ್ನಡ ಶಿಕ್ಷಕ ಜೇಮ್ಸ್ ಮ್ಯಾಥ್ಯು, ಕೊಡಗಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ವಿಷಯದಲ್ಲಿ ಉಪನ್ಯಾಸ ನೀಡಿ, ಐದು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷಾ ಬೆಳೆವಣಿಗೆಗೆ ಕೊಡಗನ್ನು ಆಳಿದ ಅರಸರು ಹಾಗೂ ಸ್ವಾತಂತ್ರ್ಯದ ನಂತರದ ಕವಿಗಳು ಮತ್ತು ಸಾಹಿತಿಗಳ ಸೇವೆ ಅವಿಸ್ಮರಣೀಯವಾದದು ಎಂದು ಹೇಳಿದರು.
ಬಂಡಾಯ ಸಾಹಿತ್ಯದಲ್ಲಿ ಹೊಸ ದಾರಿ ಅವಶ್ಯವಿದೆ: ಹನುಮಂತಯ್ಯ
ಪಂಜೆ ಮಂಗೇಶರಾಯರ ಹುತ್ತರಿ ಹಬ್ಬದ ಸಾಹಿತ್ಯ, ಹರದಾಸ ಅಪ್ಪಚ್ಚು ಕವಿಯ ನಾಟಕಗಳು, ಕೊಡಗಿನ ಗೌರಮ್ಮ ಅವರ ಮಹಿಳೆಯರ ಭಾವನೆಗಳ ಮೇಲೆ ಬೆಳಕುಚೆಲ್ಲುವ ಕಾದಂಬರಿಗಳು, ಭಾರತೀಸುತರ ಕನ್ನಡಪರ ಹೋರಾಟಗಳು ಹಾಗೂ ಜರ್ಮನಿಯ ಪಾದ್ರಿ ಕಿಟಲ್ ಅವರ ಕನ್ನಡ ಇಂಗ್ಲೀಷ್ ನಿಘಂಟು ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಎಸ್.ಡಿ. ವಿಜೇತ, ಶಾಲೆಯ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್, ಕನ್ನಡ ಶಿಕ್ಷಕ ಜಿ.ಸನತ್ ಇದ್ದರು.
27ಎಸ್‌ಪಿಟಿ02: ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ದಿ.ಕೆ.ಟಿ. ಸುಬ್ಬರಾವ್ ದತ್ತಿನಿಧಿ ಕಾರ್ಯಕ್ರಮವನ್ನು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಎಂ.ರಾಯಪ್ಪ ಉದ್ಘಾಟಿಸಿದರು. ಎಸ್.ಡಿ. ವಿಜೇತ್, ಹ್ಯಾರಿ ಮೋರಸ್, ಜಲಕಾಳಪ್ಪ ಇದ್ದರು.