‘ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡ್ಬೇಡಿ ಈಶ್ವರಪ್ಪನವರೇ’
ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ವಾಗ್ದಾಳಿ/ ಈಶ್ವರಪ್ಪ ಮತ್ತು ಮಾಧುಸ್ವಾಮಿ ಟೀಕಿಸಿದ ಮಾಜಿ ಸಚಿವ/ ನೆರೆ ಸಂತ್ರಸ್ತರ ಕಣ್ಣೀರು ಒರೆಸಲು ಎಲ್ಲರೂ ಒಂದಾಗೋಣ
ವಿಜಯಪುರ[ಸೆ. 08] ಸಂತ್ರಸ್ತರಿಗೆ 10 ಸಾವಿರ ರೂ. ಹೆಚ್ಚು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಎಂಬಿಪಿ ಖಂಡಿಸಿದ್ದಾರೆ.
ಸಚಿವ ಈಶ್ವರಪ್ಪ ವಿರುದ್ಧ ಎಂಬಿಪಿ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ನಾವು ಕಣ್ಣೀರು ಒರೆಸುವ ಕೆಲಸ ಮಾಡಬೇಕು, ಗಾಯದ ಮೇಲೆ ಬರೆ ಎಳೆಯುವ ಕೆಲಸ ಈಶ್ವರಪ್ಪ ಮಾಡಬಾರದು ಎಂದು ಹೇಳಿದ್ದಾರೆ.
ಈ ರೀತಿಯ ಕೆಳಮಟ್ಟದ ಹೇಳಿಕೆ ನೀಡಿ ಸಂತ್ರಸ್ತರಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದು ಹೇಳುತ್ತಲೇ ಮಾಧುಸ್ವಾಮಿ ವಿರುದ್ಧ ಕೂಡ ಎಂಬಿಪಿ ಗರಂ ಆದರು.
ರಾಜ್ಯಕ್ಕೆ ಶೇ. 25 ಅನುದಾನ ಬರುವುದಿಲ್ಲ ಎಂದು ಮಾಧುಸ್ವಾಮಿ ಹೇಳುತ್ತಾರೆ. ಹಾಗಾದರೆ 40 ಸಾವಿರ ಕೋಟಿ ನಷ್ಟ ಆಗಿದೆ ಎಂದು ಲೆಕ್ಕ ಯಾಕೇ ಮಾಡಿದ್ದು? ಇದೇಲ್ಲ ಆಗಬಾರದು.. ಸಂತ್ರಸ್ತರ ಕಣ್ಣೀರು ಎಲ್ಲರೂ ಸೇರಿ ಒರೆಸುವ ಕೆಲಸ ಮಾಡಬೇಕು. ಸಂತ್ರಸ್ತರು ಬದುಕು ಕಳೆದುಕೊಂಡಿದ್ದಾರೆ. ಅದನ್ನು ಕಟ್ಟಿಕೊಡುವ ಕೆಲಸ ಮಾಡೋಣ ಎಂದರು.