Asianet Suvarna News Asianet Suvarna News

ಪ್ರಜಾಪ್ರಭುತ್ವದ ಉಳಿವಿಗೆ ಪ್ರತಿಯೊಬ್ಬರ ಹೋರಾಟ ಅಗತ್ಯ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಆರ್‌ಸಿ ಮತ್ತು ಸಿಎಎ ಅಸಾಂವಿಧಾನಿಕವಾದ ಕ್ರಮ. ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರೂ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

 

seminar on media and related issues in mysore
Author
Bangalore, First Published Dec 23, 2019, 3:08 PM IST
  • Facebook
  • Twitter
  • Whatsapp

ಮೈಸೂರು(ಡಿ.23): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಆರ್‌ಸಿ ಮತ್ತು ಸಿಎಎ ಅಸಾಂವಿಧಾನಿಕವಾದ ಕ್ರಮ. ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರೂ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

ಗಾಂಧಿ ವಿಚಾರ ಪರಿಷತ್ತು, ಮೈಸೂರು ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಮಾಧ್ಯಮ- ಪ್ರಜಾಸತ್ತೆ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸೌಹಾರ್ದತೆ ನೆಲೆಸಲು ಮಾಧ್ಯಮದ ಜವಾಬ್ದಾರಿ ಮುಖ್ಯ. ನಮ್ಮ ದೇಶದ ಪ್ರಧಾನಿಗಳು ಇಲ್ಲಿದ್ದರೆ ಯುದ್ಧ ಮತ್ತು ಹೊರದೇಶದಲ್ಲಿ ಬುದ್ಧ ಎನ್ನುತ್ತಾರೆ. ಅವರಲ್ಲಿಯೇ ಜಾತ್ಯತೀತೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಆರೋಪಿಸಿದ್ದಾರೆ.

ಮಂಡ್ಯ: 40 ಗ್ರಾಮಗಳಿಗೆ ‘ಕರುಣಾಳು’ ಬೆಳಕು, ಬೀದಿದೀಪಗಳಿಗೆ ಟೈಮರ್‌ ಸ್ವಿಚ್‌

ಹಿರಿಯ ಪತ್ರಕರ್ತ ಡಿ. ಉಮಾಪತಿ ಮಾತನಾಡಿ, ಬಂಡವಾಳವನ್ನು ಮಾತನಾಡಿಸದೇ ಬೆವರನ್ನು ಮಾತಾಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಕೂಲಿಯವರೊಂದಿಗೆ ಸಂವಾದ ನಡೆಸಿದರೆ ಏನು ಫಲ? ಮಾಲೀಕರೊಂದಿಗೆ ಚರ್ಚೆ ನಡೆಸಬೇಕಿದೆ. ಹೆಚ್ಚು ಆಧುನಿಕವಾದ ಆದಷ್ಟುಅಧಮದತ್ತ ಹೋಗುತ್ತಿದ್ದೇವೆ. ಬಹುತೇಕ ದೃಶ್ಯವಾಹಿನಿಗಳ ನಿರೂಪಕರು ಒಂದು ಪಕ್ಷಕ್ಕೆ ಸೀಮಿತವಾಗಿರುವಂತೆ ಮಾತನಾಡುತ್ತಾರೆ. ಆ ಸುದ್ದಿವಾಹಿನಿಗಳು ಅದೇ ಪಕ್ಷಕ್ಕೆ ಅನುಕೂಲವಾಗುವ ಚರ್ಚೆಗಳನ್ನೇ ಮತ್ತೆ ಮತ್ತೆ ಚರ್ಚಿಸಿ ಜನರಲ್ಲಿ ಬೇರೂರುವಂತೆ ಮಾಡುತ್ತಿದ್ದಾರೆ. ಮಾಧ್ಯಮ ನಾಯಿ ಮಾತ್ರವಲ್ಲ, ಮಡಿಲಲ್ಲಾಡುವ ಮುದ್ದಿನ ನಾಯಿಯೂ ಆಗಿದೆ ಎಂದಿದ್ದಾರೆ.

ಹಿರಿಯ ಪತ್ರಕರ್ತೆ ಡಾ.ಆರ್‌. ಪೂರ್ಣಿಮಾ ಮಾತನಾಡಿ, ಪತ್ರಿಕೋದ್ಯಮ ಇಂದು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದು ಅನರ್ಹವಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮ ಹೋಗಿ ಮಾಲೀಕರ ಅಭಿವೃದ್ಧಿಗೆ ಕಾರ್ಯನಿರ್ವಹಿಸುವಂತಾಗಿದೆ ಎಂದಿದ್ದಾರೆ.

ಕುಶಾಲನಗರದಲ್ಲಿ ಮಿನಿ ವಿಮಾನ ನಿಲ್ದಾಣ..!

ಟಿವಿ ನಿರೂಪಕ ಎ. ಹರಿಪ್ರಸಾದ್‌ ಮಾತನಾಡಿ, 1977ರಲ್ಲಿ ಅರಸು ಅವರು ಉದ್ಯಮಿಗೆ ಚುನಾವಣಾ ಟಿಕೆಟ್‌ ಕೊಡುವುದನ್ನು ನಿರಾಕರಿಸಿದ್ದರು. ಆದ್ದರೆ ಇಂದು ಎಷ್ಟೋ ರಾಜಕಾರಣಿಗಳು ಉದ್ಯಮಿಗಳಾಗಿದ್ದಾರೆ ಮತ್ತು ಉದ್ಯಮಿಗಳು ರಾಜಕಾರಣಿಗಳಾಗಿದ್ದಾರೆ? ಕೆಲವು ಮಾಧ್ಯಮಗಳಲ್ಲಿ ಆ್ಯಂಕರ್‌ಗಳು ಒಂದು ಪಕ್ಷಕ್ಕೆ ಸೀಮಿತವಾಗುವಂತೆ ಮಾತನಾಡುತ್ತಿರುವುದು ಸತ್ಯ. ನಾನಂತು ವಿಪಕ್ಷವಾಗಿಯೇ ಮಾತನಾಡಿದ್ದೇನೆ ಎಂದಿದ್ದಾರೆ

ಹಿರಿಯ ಚಿಂತಕ ಡಾ.ಜಿ. ರಾಮಕೃಷ್ಣ ಮಾತನಾಡಿದರು. ಮೈಸೂರು ಕುಲಸಚಿವ ಪ್ರೊ.ಆರ್‌. ಶಿವಪ್ಪ, ಗಾಂಧಿ ವಿಚಾರ ಪರಿಷತ್ತಿನ ಅಧ್ಯಕ್ಷ ಪ. ಮಲ್ಲೇಶ್‌ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವ್ಯಾಪಾರದ ಸರಕಾದ ಬ್ರೇಕಿಂಗ್‌ ನ್ಯೂಸ್‌

ಬ್ರೇಕಿಂಗ್‌ ನ್ಯೂಸ್‌ ಎನ್ನುವುದೇ ದೊಡ್ಡ ಜೋಕ್‌ ಆಗಿದೆ. ಜತೆಗೆ ವ್ಯಾಪಾರದ ಸರಕೂ ಆಗಿದೆ. ಸುದ್ದಿ ಎಂದರೆ ಹಿಂದೆ ಗೌರವದಿಂದ ನೋಡುವ ಕಾಲ ಇತ್ತು. ಆದ್ದರಿಂದ ಬ್ರೇಕಿಂಗ್‌ ನ್ಯೂಸ್‌ನಿಂದಾಗಿ ಎಲ್ಲರೂ ದೃಶ್ಯ ಮಾಧ್ಯಮದವರನ್ನು ಟೀಕಿಸುವುದು ಹೆಚ್ಚಾಗಿದೆ ಎಂದು ಕನ್ನಡಪ್ರಭ, ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

ಬ್ರೇಕಿಂಗ್‌ ನ್ಯೂಸ್‌ ಎಂಬುದು ಮಾಯದಂತೆ ಆಗಿದ್ದು, ನೀವೇ ಬೇಡವೆಂದರೂ ನಿಮ್ಮ ಸುತ್ತಲೂ ಬಂದು ಬಿಡುತ್ತದೆ. ಮಹಾಭಾರತದಲ್ಲಿ ವಸ್ತ್ರಾಪಹರಣ ನಡೆಯುವುದು ತಪ್ಪೆಂದು ಎಲ್ಲರಿಗೂ ಗೊತ್ತಿತ್ತು. ಆದರೂ ಎಲ್ಲರ ನಡುವೆ ನಡೆದು ಹೋಯಿತು. ಅದೇ ಸ್ಥಿತಿಯಲ್ಲಿ ಬ್ರೇಕಿಂಗ್‌ ನ್ಯೂಸ್‌ ತಪ್ಪೆಂದು ಗೊತ್ತಿದ್ದರೂ ಸುಮ್ಮನಿರುವ ಸ್ಥಿತಿ ಎಲ್ಲ ಮಾಧ್ಯಮ ಮುಖ್ಯಸ್ಥರಿಗಿದೆ ಎಂದಿದ್ದಾರೆ.

ಜ.3ರಂದು ತುಮಕೂರಿಗೆ ಪ್ರಧಾನಿ ನಮೋ

ಸಮಾಜದಲ್ಲಿ ಸಂಕಷ್ಟಬಂದಾಗ ನಾವು ಬದುಕಿಬಿಡೋಣ ಉಳಿದದ್ದು ಅಮೇಲೆ ನೋಡೋಣ ಎಂಬ ಸ್ಥಿತಿಯಲ್ಲಿ ಮಾಧ್ಯಮಗಳಿವೆ. ಇಂದು ಮಾಧ್ಯಮಗಳ ಧಾವಂತ ಸ್ಥಿತಿಗೆ ಟಿಆರ್‌ಪಿ ರೇಟಿಂಗ್‌ ಕಾರಣ. ಟಿಆರ್‌ಪಿ ತೆಗೆದರೆ ಯಾವ ಮಾನದಂಡದಲ್ಲಿ ನ್ಯೂಸ್‌ ಚಾನಲ್‌ನಲ್ಲಿ ಸುದ್ದಿ ಪ್ರಸರಣೆ ಅಳೆಯಬೇಕೆಂಬುದು ಗೊತ್ತಿಲ್ಲ. ಕೆಲವೊಮ್ಮೆ ಮಾಧ್ಯಮಗಳು ತೋರಿಸುವ ನಕರಾತ್ಮಕ ಸುದ್ದಿ ಕೂಡ ಸಕರಾತ್ಮಕ ಯೋಜನೆಗಳಿಗೆ ಅನುಕೂಲವಾಗಿದೆ ಎಂದಿದ್ದಾರೆ.

Follow Us:
Download App:
  • android
  • ios