Asianet Suvarna News Asianet Suvarna News

ಮೈಸೂರು ದಸರಾ : ಎರಡನೇ ಗಜಪಡೆ ಕಾಡಿನಿಂದ ನಾಡಿಗೆ

ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಸಲುವಾಗಿ ಕಾಡಿನಿಂದ ನಾಡಿಗೆ ಆಗಮಿಸಲು ಗಜಪಡೆಯ ಎರಡನೇ ತಂಡದಲ್ಲಿ ಏಳು ಆನೆಗಳು ಸಜ್ಜಾಗಿವೆ.

second batch of dasara elephants To arrives on september 9
Author
Bengaluru, First Published Sep 8, 2019, 10:03 AM IST

ಮೈಸೂರು [ಸೆ.08]:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಸಲುವಾಗಿ ಕಾಡಿನಿಂದ ನಾಡಿಗೆ ಆಗಮಿಸಲು ಗಜಪಡೆಯ ಎರಡನೇ ತಂಡದಲ್ಲಿ ಏಳು ಆನೆಗಳು ಸಜ್ಜಾಗಿದ್ದು, ಸೋಮವಾರ(ಸೆ.9) ಸಂಜೆಯ ಹೊತ್ತಿಗೆ ಮೈಸೂರು ಅರಮನೆ ಪ್ರವೇಶಿಸಲಿವೆ.

ಅರಣ್ಯ ಇಲಾಖೆ ಎರಡನೇ ತಂಡದಲ್ಲಿ ಒಟ್ಟು 6 ಆನೆಗಳನ್ನು ಮಾತ್ರ ತರಲು ನಿರ್ಧರಿಸಿತ್ತು. ಆದರೆ, ಈಗ 7 ಆನೆಗಳನ್ನು ತರಲು ಮುಂದಾಗಿದ್ದು, ಇದರೊಂದಿಗೆ ದಸರಾ ಗಜಪಡೆಯ ಸಂಖ್ಯೆಯು 13ಕ್ಕೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ ಆಯ್ಕೆಯಾದ ರೋಹಿತ್‌ ಮತ್ತು ಲಕ್ಷ್ಮಿ ಆನೆಗಳ ಪೈಕಿ ಲಕ್ಷ್ಮಿ ಆನೆಯನ್ನು ಮಾತ್ರ ಕರೆ ತರಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಅಂಬಾರಿ ಆನೆ ಬಲರಾಮ, ವಿಕ್ರಮ, ಗೋಪಿ, ಜಯಪ್ರಕಾಶ್‌, ಕಾವೇರಿ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳು ಎರಡನೇ ತಂಡದಲ್ಲಿ ಆಗಮಿಸಲಿವೆ. ಮತ್ತಿಗೋಡು ಆನೆ ಶಿಬಿರದಿಂದ ಬಲರಾಮ, ದುಬಾರೆ ಆನೆ ಶಿಬಿರದಿಂದ ಕಾವೇರಿ, ವಿಕ್ರಮ, ಗೋಪಿ, ಕೆ. ಗುಡಿ ಆನೆ ಶಿಬಿರದಿಂದ ದುರ್ಗಾಪರಮೇಶ್ವರಿ, ರಾಂಪುರ ಆನೆ ಶಿಬಿರದಿಂದ ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆ ಆಗಮಿಸಿಲಿವೆ. ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆಗಳು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಮೊದಲ ತಂಡದಲ್ಲಿ ಅಂಬಾರಿ ಆನೆ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಮತ್ತು ವರಲಕ್ಷ್ಮಿ ಆನೆಗಳು ಆಗಮಿಸಿ ಈಗಾಗಲೇ ನಡಿಗೆ ತಾಲೀಮು ಆರಂಭಿಸಿವೆ. ಎರಡನೇ ತಂಡದಲ್ಲಿ 7 ಆನೆಗಳು ಸೋಮವಾರ ಆಗಮಿಸಿ ಮೊದಲ ತಂಡಕ್ಕೆ ಸೇರಿಕೊಂಡು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು ತಿಳಿಸಿದರು.

Follow Us:
Download App:
  • android
  • ios