ಮೈಸೂರು: ಬಾಲರಾಮನನ್ನು ಕೆತ್ತಲು ಬಳಸಿದ್ದ ಸುತ್ತಿಗೆ, ಪೀಠ, ಚಾಣ ಪ್ರದರ್ಶನ

ರಾಮಲಲ್ಲಾ ಮೂರ್ತಿ ಕೆತ್ತಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅರುಣ್‌ ಯೋಗಿರಾಜ್‌ ಅವರ ಕಲಾಶಾಲೆಯಲ್ಲಿ ಮೂರ್ತಿ ಕೆತ್ತನೆಗೆ ಬಳಸಿದ್ದ ಉಳಿ, ಸುತ್ತಿಗೆ, ಪೀಠ ಪ್ರದರ್ಶನ ಆಯೋಜಿಸಲಾಗಿದೆ. ಮೂರ್ತಿಯ ನೇತ್ರೋನ್ ಮಿಲನಕ್ಕೆ ಬಳಸಿದ್ದ ಚಿನ್ನದ ಉಳಿ, ಬೆಳ್ಳಿ ಸುತ್ತಿಗೆ, ಹಾಗೂ ರಾಮಲಲ್ಲಾ ಇಡಲು ತಯಾರಿಸಿದ್ದ ಪೀಠ ಹಾಗೂ ವಿವಿಧ ಕಲಾಕೃತಿಗಳು ಪ್ರದರ್ಶನದಲ್ಲಿವೆ. 

Sculptor Arun Yogiraj disply of who Used Hammer used to Carve Balarama in Ram Mandir

ಮೈಸೂರು(ಜ.11):  ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ಜ.10ಕ್ಕೆ ಒಂದು ವರ್ಷವಾದ ಸಂದರ್ಭದಲ್ಲಿ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಸುತ್ತಿಗೆ, ಪೀಠ, ಚಾಣ ಮುಂತಾದ ವಸ್ತುಗಳನ್ನು ಪ್ರದರ್ಶಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಕೆತ್ತಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅರುಣ್‌ ಯೋಗಿರಾಜ್‌ ಅವರ ಕಲಾಶಾಲೆಯಲ್ಲಿ ಮೂರ್ತಿ ಕೆತ್ತನೆಗೆ ಬಳಸಿದ್ದ ಉಳಿ, ಸುತ್ತಿಗೆ, ಪೀಠ ಪ್ರದರ್ಶನ ಆಯೋಜಿಸಲಾಗಿದೆ.

ಮೂರ್ತಿಯ ನೇತ್ರೋನ್ ಮಿಲನಕ್ಕೆ ಬಳಸಿದ್ದ ಚಿನ್ನದ ಉಳಿ, ಬೆಳ್ಳಿ ಸುತ್ತಿಗೆ, ಹಾಗೂ ರಾಮಲಲ್ಲಾ ಇಡಲು ತಯಾರಿಸಿದ್ದ ಪೀಠ ಹಾಗೂ ವಿವಿಧ ಕಲಾಕೃತಿಗಳು ಪ್ರದರ್ಶನದಲ್ಲಿವೆ. ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ ಇಡಿ ತಂಡದ ಸದಸ್ಯರೆಲ್ಲರೂ ಕೂಡ ಪ್ರದರ್ಶನದ ವೇಳೆ ಹಾಜರಿದ್ದರು.

ಬಾಲರಾಮನ ಮೂರ್ತಿ ಕೆತ್ತಿದ್ದ ಅರುಣ್‌ ಯೋಗಿರಾಜ್‌ಗೆ ಶಿವಾಜಿ ಮಹಾರಾಜ್‌ ಮೂರ್ತಿ ಕೆತ್ತುವ ಆಫರ್‌!

ಈ ವೇಳೆ ಮಾತನಾಡಿದ ಅರುಣ್‌ ಯೋಗಿರಾಜ್‌, ರಾಮಲಲ್ಲಾ ಮೂರ್ತಿ ಕೆತ್ತಿದ ಬಳಿಕ ಸಾಕಷ್ಟು ಹೆಸರ ಬಂದಿದೆ. ಸಾಕಷ್ಟು ಮಂದಿ ಗುರುತಿಸುತ್ತಿದ್ದಾರೆ, ಹಲವರು ಬಂದು ಭೇಟಿ ಆಗುತ್ತಿದ್ದಾರೆ. ಇದು ಶಿಲ್ಪಿಗೆ ಸಿಕ್ಕ ಬಹುದೊಡ್ಡ ಗೌರವ. ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷವಾಗಿದೆ. ಈ ವೇಳೆ ಸಾಕಷ್ಟು ಸಂತೋಷವಾಗುತ್ತಿದೆ ಎಂದರು.

ಅಯೋಧ್ಯೆ ಟ್ರಸ್ಟ್ ಮುಖ್ಯಸ್ಥರು ಮತ್ತಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಎಲ್ಲವೂ ಆರಂಭಿಕ ಹಂತದಲ್ಲಿ ಇವೆ. ಅದರ ಹೊರತಾಗಿ ಕೆಲಸದ ಬಗ್ಗೆ ಕೊಂಡಾಡುವ ಕೆಲಸ ಆಗುತ್ತಿದೆ‌ ಎಂದು ಅವರು ಹೇಳಿದರು.

ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ

ಅಯೋಧ್ಯೆ:  ಅಯೋಧ್ಯೆ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರಘುಕುಲ ತಿಲಕ, ದಶರಥ ನಂದನ, ಮರ್ಯಾದಾ ಪುರುಷೋತ್ತಮ ಪ್ರಭು ರಾಮಚಂದ್ರನ ಜನ್ಮಸ್ಥಳ. ಕಳೆದ ಒಂದು ವರ್ಷದಿಂದ ಅಯೋಧ್ಯೆ ದೇಶದ ಗಮನ ಸೆಳೆಯುತ್ತಿದೆ. ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ರಾಜಧಾನಿಯಂತಿರುವ ಉತ್ತರ ಪ್ರದೇಶದಲ್ಲಿ ಇದೀಗ ಅಯೋಧ್ಯೆಯೇ ದೇಶದ ಗಮನ ಸೆಳೆಯುತ್ತಿರುವುದು. ಅದಕ್ಕೆಲ್ಲ ಕಾರಣ ರಾಮಲಲ್ಲಾನ ಭವ್ಯ ಮಂದಿರ. ಭವ್ಯ ಮಂದಿರ ಆರಂಭವಾಗಿ ಇದೀಗ ಒಂದು ವರ್ಷ ತುಂಬಿದೆ. 

ವರ್ಷ ತುಂಬಿದ ಖುಷಿಯಲ್ಲಿ ಅದ್ಧೂರಿ ಕಾರ್ಯಕ್ರಮ

2023 ಜ.22ರಂದು ಭವ್ಯವಾದ ಮಂದಿರ ಉದ್ಘಾಟನೆಯಾಗಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಈ ಸಂಭ್ರಮಕ್ಕೆ ಜ.11ರಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜ.11ರಿಂದ 13ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ (ಪ್ರತಿಷ್ಠಾ ದ್ವಾದಶಿ) ಹಮ್ಮಿಕೊಳ್ಳಳಲಾಗಿದೆ. ಮೊದಲ ದಿನ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಮಂದಿರದ ಸಮೀಪವಿರುವ ಅಂಗದ ಟೀಲಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ. ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್‌ ಆಮಂತ್ರಣ ಕಳಿಸಿದೆ.

ಅಯೋಧ್ಯೆ ದೇಶದ ನಂ.1 ಪ್ರವಾಸಿ ತಾಣ

ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹೊರಹೊಮ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ. ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಿತು. ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ.

ಶಿಲ್ಪಿ ಅರುಣ್‌ ಯೋಗಿರಾಜ್‌, ಮೊಯ್ಲಿ ಸೇರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಈ ವರ್ಷ ಪೂರ್ಣವಾಗಲಿದೆ ಮಂದಿರ

ಹಾಲಿ ಉದ್ಘಾಟನೆಗೊಂಡಿರುವ ರಾಮಮಂದಿರ ಇನ್ನೂ ಪೂರ್ಣ ಪ್ರಮಾಣವಾಗಿದ್ದಲ್ಲ. ರಾಮಮಂದಿರ ಸಂಕೀರ್ಣದ ಒಟ್ಟು ವಿಸ್ತಾರ 72 ಎಕರೆ. ಈ ಪೈಕಿ ಮೊದಲಿಗೆ ನಿರ್ಮಾಣವಾಗಿದ್ದು ಅಂದಾಜು 3 ಎಕರೆ ಪ್ರದೇಶದಲ್ಲಿನ ರಾಮಮಂದಿರ ಮಾತ್ರ. ಇದನ್ನು 1800 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೇಗುಲ 250 ಅಡಿ ಅಗಲ ಹಾಗೂ 161 ಅಡಿ ಎತ್ತರವಿದೆ. ಅಯೋಧ್ಯೆ ರಾಮ ಮಂದಿರದ ಮುಖ್ಯ ಆಲಯವೇ 2.67 ಎಕರೆ ಪ್ರದೇಶದಷ್ಟಿದೆ. ಭಕ್ತರು 32 ಮೆಟ್ಟಿಲುಗಳನ್ನು ಹತ್ತಿ ದೇಗುಲ ಪ್ರವೇಶ ಮಾಡಬೇಕಿದೆ. ನೆಲ ಮಟ್ಟದಿಂದ ಸಿಂಹ ದ್ವಾರವು 16.11 ಅಡಿ ಎತ್ತರದಲ್ಲಿದೆ. ಅಯೋಧ್ಯೆ ನಾಗರಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. 5 ಮಂಟಪಗಳ ರಚನೆಯನ್ನು ಹೊಂದಿದ್ದು, ಗರ್ಭಗುಡಿಯ ಮೇಲೆ ಬೃಹತ್‌ಗೋಪುರವನ್ನು ನಿರ್ಮಿಸಲಾಗಿದೆ. 3 ಅಂತಸ್ತಿನಲ್ಲಿ ಭವ್ಯವಾಗಿ ತಲೆ ಎತ್ತಿದೆ. ದೇವಾಲಯದಲ್ಲಿ ಗರ್ಭಗುಡಿ, ಜಗುಲಿ ಅಥವಾ ಮಂಟಪ, ಶಿಖರ ಹಾಗೂ ಗರ್ಭಗುಡಿಯ ನೇರಕ್ಕೆ ದೇಗುಲದ ಎದುರಿನಲ್ಲಿ ದೇವರ ವಾಹನವಿದೆ.

ಇಡೀ ಸಂಕೀರ್ಣವನ್ನು ಹಲವು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಶ್ರೀರಾಮ ಕುಂಡ ಯಜ್ಞಶಾಲೆ, ಪೂಜಾ ಕೈಂಕರ‍್ಯಕ್ಕೆ ಕರ್ಮ ಕ್ಷೇತ್ರ, ರಾಮಾಂಗಣ ಚಿತ್ರಮಂದಿರ, ಬೃಹತ್‌ ಹನುಮ ಪ್ರತಿಮೆ, ವಸ್ತು ಸಂಗ್ರಹಾಲಯ, ರಾಮಾಯಣ ಗ್ರಂಥಾಲಯ, ಸಪ್ತಋುಷಿಗಳ 7 ದೇವಾಲಯ, ಸೀತೆ, ವಾಲ್ಮೀಕಿ ಸೇರಿ ಅನೇಕ ದೇವಸ್ಥಾನ , ಶ್ರೀರಾಮನ ಪತ್ನಿ, ಸೀತಾ ಮಾತೆಗಾಗಿ ರಾಮ ಪುಷ್ಕರಣಿ, ಸಭಾಂಗಣ ಮತ್ತು ಕಲ್ಯಾಣ ಮಂಟಪ,ಪಶುವೈದ್ಯಕೀಯ ಸೌಲಭ್ಯ, ಲವಕುಶ ಮೈದಾನ, ಲಕ್ಷ್ಮಣ ವಾಟಿಕಾ ಕಾರಂಜಿ ಸೇರಿದಂತೆ ಇನ್ನು ಹಲವು ಯೋಜನೆಗಳ ಕಾಯಕಲ್ಪ ಪ್ರಗತಿಯಲ್ಲಿದೆ. ಅದೆಲ್ಲವೂ ಪೂರ್ಣಗೊಂಡು ವರ್ಷದ ಅಂತ್ಯಕ್ಕೆ ಹೊಸ ರೂಪ ಸಿಗಲಿದೆ.

Latest Videos
Follow Us:
Download App:
  • android
  • ios