Asianet Suvarna News Asianet Suvarna News

ಬೈಕ್‌ಗೆ ಓಮ್ನಿ ಕಾರು ಡಿಕ್ಕಿ: ಬೈಕ್ ಸವಾರ ಶಿಕ್ಷಕ ಸಾವು

ರಸ್ತೆ ಅಪಘಾತದಲ್ಲಿ ಮುಖ್ಯ ಶಿಕ್ಷಕರೊಬ್ಬರು ಸಾವಿಗೀಡಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಬಳಿ ಈ ಘಟನೆ ನಡೆದಿದೆ.

school teacher died in accident at thirthahalli akb
Author
Thirthahalli, First Published Aug 7, 2022, 11:58 AM IST

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಮುಖ್ಯ ಶಿಕ್ಷಕರೊಬ್ಬರು ಸಾವಿಗೀಡಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಬಳಿ ಈ ಘಟನೆ ನಡೆದಿದೆ. 51 ವರ್ಷ ಪ್ರಾಯದ ವೆಂಕಟೇಶ್ ಮೃತ ಶಿಕ್ಷಕರು. ಇವರು ಬೈಕ್‌ನಲ್ಲಿ ಬರುತ್ತಿದ್ದಾಗ ತಿರುವೊಂದರಲ್ಲಿ ಓಮ್ನಿ ಕಾರೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್​, ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವರ್ಷ ಪ್ರಮೋಶನ್​ ಪಡೆದು ಹೆಡ್‌ ಮಾಸ್ಟರ್ ಆಗಿ ಕಟ್ಲೆ ಹಕ್ಲು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಅಪಘಾತಗಳು ಹೆಚ್ಚೆಚ್ಚು ಸಂಭವಿಸುತ್ತಲೇ ಇರುತ್ತವೆ. ಪ್ರತಿವರ್ಷ ರಸ್ತೆ ಅಪಘಾತಕ್ಕೆ ದೇಶದಲ್ಲಿ ಸಾವನ್ನಪ್ಪುವವರ ಅಂಕಿ ಅಂಶಗಳನ್ನು ನೋಡಿದರೆ ಗಾಬರಿಯಾಗುವುದು ಗ್ಯಾರಂಟಿ. 2020ರಲ್ಲಿ ಭಾರತದಲ್ಲಿ ಒಟ್ಟು 366,138 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 131,714 ಜನ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಹೇಳಿದ್ದರು.

ಜಾಲಿ ರೈಡ್‌ನಲ್ಲಿ ಗೆಳತಿ ಇಂಪ್ರೆಸ್ ಮಾಡಲು ಕಾರು ನೀಡಿದ ಯುವಕ, ಅಪಘಾತಕ್ಕೆ ಬೈಕ್ ಸವಾರರು ಬಲಿ!

ಎಪ್ರಿಲ್‌ನಲ್ಲಿ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ, ಗಡ್ಕರಿ ಅವರು ಜಿನೀವಾದ ಇಂಟರ್‌ ನ್ಯಾಷನಲ್ ರೋಡ್ ಫೆಡರೇಶನ್ ಹೊರತಂದಿರುವ ವಿಶ್ವ ರಸ್ತೆ ಅಪಘಾತಗಳ ಅಂಕಿಅಂಶಗಳು (ಡಬ್ಲ್ಯುಆರ್ಎಸ್) 2018 ರ ಇತ್ತೀಚಿನ ಸಂಚಿಕೆಯನ್ನು ಆಧರಿಸಿ, ಅಪಘಾತಗಳ ಸಂಖ್ಯೆಗೆ ಅನುಗುಣವಾಗಿ ಭಾರತವು 3 ನೇ ಸ್ಥಾನದಲ್ಲಿದೆ ಎಂದು ಹೇಳಿದರು ಹಾಗೂ ಭಾರತವು ಸತ್ತವರ ಸಂಖ್ಯೆಯ ಪ್ರಕಾರ ಮೊದಲ ಸ್ಥಾನದಲ್ಲಿದೆ ಮತ್ತು ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಗೆ ಅನುಗುಣವಾಗಿ 3ನೇ ಸ್ಥಾನದಲ್ಲಿದೆ ಎಂದು ಗಡ್ಕರಿ ಹೇಳಿದರು.ಇದಲ್ಲದೆ, 18 ರಿಂದ 45 ವರ್ಷಗಳ ನಡುವಿನ ರಸ್ತೆ ಬಳಕೆದಾರರ ಸಾವಿನ ಶೇಕಡಾವಾರು ಪ್ರಮಾಣವು 2020 ರಲ್ಲಿ 69.80 ಪ್ರತಿಶತದಷ್ಟಿದೆ ಎಂದು ಸಂಸತ್ತಿಗೆ ಅವರು ತಿಳಿಸಿದ್ದರು.

ಒಟ್ಟಿನಲ್ಲಿ ಯುವ ಸಮೂಹ ರಸ್ತೆ ಅಪಘಾತಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದು, ಬಿಸಿ ರಕ್ತದ ಜೊತೆ ಮಿತಿಮೀರಿದ ವೇಗ ಅಜಾಗರೂಕ ಚಾಲನೆ ಇದಕ್ಕೆ ಕಾರಣವಾಗಿದೆ. 

ಯಾದಗಿರಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ದಾರುಣ ಸಾವು

Follow Us:
Download App:
  • android
  • ios