ಬೇಲೂರು [ಮಾ.07]:  ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬಳಿಕ ಕೈಕೊಟ್ಟ ಶಿಕ್ಷಕಿಯ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎನ್ನಲಾದ ವಿವಾಹಿತ  ಶಿಕ್ಷಕನನ್ನು ಬೇಲೂರಿನ ಪೊಲೀಸರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಾಗರದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಲ್ಲಂದೂರಿನ ಶಿಕ್ಷಕ ಧನಂಜಯ್‌ ಬಂಧಿತ ಆರೋಪಿ. ಜ.9ರಂದು ಬಿಕ್ಕೋಡಿನ ಶಿಕ್ಷಕಿ ರಾಣಿ  ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಶಿಕ್ಷಕ ಕಣ್ಮರೆಯಾಗಿದ್ದನು.

ರಾಣಿ ಆತ್ಮಹತ್ಯೆ ಮಾಡಿಕೊಂಡ ನಂತರ ತಲೆ ಮರೆಸಿಕೊಂಡಿದ್ದ ಧನಂಜಯನನ್ನು ಎಸ್ಪಿ ಆರ್‌. ಶ್ರೀನಿವಾಸಗೌಡ ಆದೇಶದಂತೆ ಅರಸೀಕೆರೆ ಡಿವೈಎಸ್‌ಪಿ ನೇತೃತ್ವದಲ್ಲಿ ಬೇಲೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ್‌ ಹಾಗೂ ಪಿಎಸ್‌ಐ ಅಜೇಯ್‌ಕುಮಾರ್‌ ಸಿಬ್ಬಂದಿ ತಂಡ ಖಚಿತ ಮಾಹಿತಿ ಆಧರಿಸಿ ಸಾಗರದ ವಸತಿ ಗೃಹವೊಂದರಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು: ಮಹಿಳೆಯ ಗುಪ್ತಾಂಗದಲ್ಲಿತ್ತು 8.30 ಕೋಟಿ ರಹಸ್ಯ!...

ಈ ಬಗ್ಗೆ ಮೃತರ ಸಹೋದರ ರಾಕೇಶ್‌ ಮಾತನಾಡಿ, ಮಲ್ಲಂದೂರಿಲ್ಲಿ ಶಿಕ್ಷಕನಾಗಿದ್ದ ಧನಂಜಯ ನಮ್ಮ ಸಹೋದರಿಯ ಸಾವಿಗೆ ನೇರ ಕಾರಣ. ಅವನ ಮೇಲೆ ಅನುಮಾನಗೊಂಡು ಪ್ರಕರಣ ದಾಖಲಿಸಿದ್ದೆವು. ತನ್ನ ಸಹೋದರಿಯ ಸಾವಿಗೆ ಕಾರಣಕರ್ತನಾದ ಧನಂಜಯನಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.