Asianet Suvarna News Asianet Suvarna News

ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಶಾಲಾ ಕೊಠಡಿ ಕುಸಿತ

ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಾರವಾರದ  ನಂದನಗದ್ದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೊಠಡಿಯೊಂದರ ಚಾವಣಿ ಏಕಾಏಕಿ ಕುಸಿದು ಬಿದ್ದಿದೆ. ಆದರೆ ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

School Roof Collapsed Due To Heavy Rain In Karwar
Author
Bengaluru, First Published Aug 26, 2019, 10:34 AM IST

ಕಾರವಾರ [ಆ.26]:  ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಾರವಾರದ  ನಂದನಗದ್ದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೊಠಡಿಯೊಂದರ ಚಾವಣಿ ಭಾನುವಾರ ದಿಢೀರ್‌ ಕುಸಿದು ಬಿದ್ದಿದೆ. 

ರಜೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. 1993-94ರಲ್ಲಿ ನಿರ್ಮಿಸಲಾಗಿರುವ ಈ ಶಾಲಾ ಕಟ್ಟಡದ ಹೆಂಚಿನ ಚಾವಣಿ ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. 

ಹೆಂಚು ಕೂರಿಸಲು ಅಡ್ಡಲಾಗಿ ಹಾಕಲಾಗಿರುವ ಮರದ ಅಡ್ಡ ಪಟ್ಟಿ(ರೀಪು), ಪಕಾಸು ಕೆಲ ವರ್ಷಗಳಿಂದ ಗೆದ್ದಲು ಹಿಡಿದಿತ್ತು. ಭಾನುವಾರ ಮಧ್ಯಾಹ್ನ 12ಕ್ಕೆ ಕುಸಿದುಬಿದ್ದಿದೆ. ಈ ಕೊಠಡಿಯಲ್ಲಿ ತರಗತಿ ನಡೆಯುತ್ತಿರಲಿಲ್ಲ. ಯೋಗ ತರಬೇತಿಯಿಂದ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಜಿಲ್ಲೆಯಲ್ಲಿ 10 ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಚಾವಣಿ ಶಿಥಿಲಗೊಂಡಿದ್ದು, ಮಧ್ಯಾಹ್ನ 12ರ ವೇಳೆಗೆ ಏಕಾಏಕಿ ಕುಸಿದು ಬಿದ್ದಿದೆ. 1993-94ರಲ್ಲಿ ನಿರ್ಮಿಸಲಾಗಿರುವ ಈ ಶಾಲಾ ಕಟ್ಟಡದ ಹೆಂಚಿನ ಚಾವಣಿ ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಹೆಂಚು ಕೂರಿಸಲು ಅಡ್ಡಲಾಗಿ ಹಾಕಲಾಗಿರುವ ಮರದ ಅಡ್ಡ ಪಟ್ಟಿ(ರೀಪು), ಪಕಾಸು ಕೆಲ ವರ್ಷಗಳಿಂದ ಗೆದ್ದಲು ಹಿಡಿದಿತ್ತು. ಇದರ ಮಧ್ಯೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೆಂಚಿನ ಭಾರ ಹೆಚ್ಚಿ ಛಾವಣಿ ದಿಢೀರ್‌ ಕುಸಿದು ಬಿದ್ದಿದೆ. 

Follow Us:
Download App:
  • android
  • ios