ಸಾವರ್ಕರ್ ದ್ವಿರಾಷ್ಟ್ರ ನೀತಿ ಪರವಾಗಿದ್ದರು: ವಿವಾದಾತ್ಮಕ ಹೇಳಿಕೆ ನೀಡಿದ ಸುಧೀಂದ್ರ ಕುಲಕರ್ಣಿ

ಗಾಂಧಿ ಅಪಪ್ರಚಾರದಂತೆ ನೆಹರೂ ಅಪಪ್ರಚಾರವನ್ನೂ ತಡೆಯಬೇಕು. ಗಾಂಧಿ ಅಪಪ್ರಚಾರ ಮಾಡೋರು ನೆಹರು ಅವರನ್ನು ಖಳನಾಯಕನನ್ನ ಮಾಡಿದ್ದಾರೆ. ನೆಹರೂ ಸೇವೆ, ತ್ಯಾಗ ಸಂಘರ್ಷವನ್ನು ಈ ದೇಶ ಮರೆಯಬಾರದು: ಸುಧೀಂದ್ರ ಕುಲಕರ್ಣಿ 

Savarkar Was in Favor of Two Nation Policy Says Sudheendra Kulkarni grg

ಮಂಗಳೂರು(ಜ.15):  ಸಾವರ್ಕರ್ ದ್ವಿರಾಷ್ಟ್ರ ನೀತಿ ಪರವಾಗಿದ್ದರು. ದೇಶ ವಿಭಜನೆಗೆ ಗಾಂಧಿ ಕಾರಣ, ಹಿಂದೂ ವಿರೋಧಿ ಅಂತಾರೆ. ದ್ವಿರಾಷ್ಟ್ರ ಪರವಾಗಿದ್ದ ಸಾವರ್ಕರ್ ದೇಶ ಭಕ್ತರಾಗಿದ್ದಾರೆ ಅಂತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಗಾಂಧೀಜಿ ಕುರಿತ ಪರ‌ವಿರೋಧ ಪ್ರಶ್ನೆಗಳಿಗೆ ಉತ್ತರ ಪುಸ್ತಕ "ಮಿನುಗು ನೋಟ" ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ವಿಭಜನೆಗೆ ಕಾರಣ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್. ಗಾಂಧಿ ಅಲ್ಲ, ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಗಾಂಧೀಜಿ ಅವರನ್ನು ಹೊಗಳ್ತಾರೆ. ಆದರೆ‌ ಅವರ ಸ್ವಯಂ ಸೇವಕರು ಗಾಂಧೀಜಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಿಮ್ಮ ಪ್ರಾಮಾಣಿಕ ನಿಲುವು ಏನು?. ಮೋಹನ್ ಭಾಗವತ್ ಪ್ರಾಮಾಣಿಕರೇ ಹಾಗಿದ್ದರೆ ಗಾಂಧೀಜಿ ಅಪಪ್ರಚಾರ ನಿಲ್ಲಿಸಿ ಅಂತ ಕಾರ್ಯಕರ್ತರಿಗೆ ಹೇಳಲಿ ಅಂತ ಪ್ರಶ್ನೆ ಮಾಡಿದ್ದಾರೆ. 

Chamarajanagara: ಸಾವರ್ಕರ್‌ ಫೋಟೋ ಅಳವಡಿಕೆ ಕಾಂಗ್ರೆಸ್‌ ಟೀಕೆಗೆ ಕಟೀಲ್‌ ಕೆಂಡಾಮಂಡಲ

ಗಾಂಧಿ ಅಪಪ್ರಚಾರದಂತೆ ನೆಹರೂ ಅಪಪ್ರಚಾರವನ್ನೂ ತಡೆಯಬೇಕು. ಗಾಂಧಿ ಅಪಪ್ರಚಾರ ಮಾಡೋರು ನೆಹರು ಅವರನ್ನು ಖಳನಾಯಕನನ್ನ ಮಾಡಿದ್ದಾರೆ. ನೆಹರೂ ಸೇವೆ, ತ್ಯಾಗ ಸಂಘರ್ಷವನ್ನು ಈ ದೇಶ ಮರೆಯಬಾರದು. ಇಲ್ಲದಿದ್ದರೆ ನಾವು ಕೃತಘ್ನರಾಗ್ತೇವೆ. ಜಿಹಾದ್ ಅಪಾರ್ಥ ಆಗ್ತಿದೆ.‌ ಸತ್ಯಾಗ್ರಹದ ಕಲ್ಪನೆ ಗಾಂಧಿಗೆ ಸಿಕ್ಕಿದ್ದು ಇಸ್ಲಾಂನಿಂದ. ಹಲವು ವರ್ಷಗಳಿಂದ ಗಾಂಧೀಜಿ ಅಪಪ್ರಚಾರ ನಡೀತಿದೆ. ಇದನ್ನು ನಿಲ್ಲಿಸಬೇಕು ಅಂತ ಆಗ್ರಹಿಸಿದ್ದಾರೆ. 

ಕೊಲೆ, ಭ್ರಷ್ಟ ಒಡೆದಾಳುವ ಹಿಂಸೆಯ ರಾಜಕಾರಣವನ್ನ ಬದಲಿಸಬೇಕಿದೆ. ಕೋಮು, ಹಿಂಸೆ ರಾಜಕಾರಣ ನಿಲ್ಲಬೇಕು. ಈ ನಿಟ್ಟಿನಲ್ಲಿ ಮಂಗಳೂರು ದೇಶಕ್ಕೆ ಮಾದರಿಯಾಗಬೇಕು. ಗಾಂಧೀಜಿ ಟೀಕೆಗೆ ಅಭ್ಯಂತರ ಇಲ್ಲ. ಆದರೆ ದುರುದ್ದೇಶಪೂರ್ವಕವಾಗಿ ವಿಷ ಕಾರುವ ಪರಿಸ್ಥಿತಿ ಇದೆ. ಗಾಂಧಿ ಆದರ್ಶ ಬದ್ಧತೆ ಪ್ರಶ್ನಾತೀತ. ಅಪಪ್ರಚಾರಗಳಿಗೆ ಅಧ್ಯಯನ ಮಾಡಿ ತಾಳ್ಮೆಯಿಂದ ಉತ್ತರ ನೀಡಬೇಕು. ಗಾಂಧಿ ಅಪರೂಪದ ಲೀಡರ್. ಅವರು ಸ್ವಾತಂತ್ರ್ಯ ಚಳವಳಿಯ ಮುಖ್ಯ ನಾಯಕರಷ್ಟೇ ಆಗಿರಲಿಲ್ಲ. ವಿಶ್ವ ಶಾಂತಿಗಾಗಿ, ಸಹ ಬಂಧುತ್ವಕ್ಕಾಗಿ, ಧರ್ಮ ಸೌಹಾರ್ದತೆಗಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರಾಗಿದ್ದವರು. ಇಂದು ಪ್ರತಿಯೊಂದು ಪಕ್ಷವೂ ವಿರೋಧಿಗಳನ್ನು ಶತ್ರುಗಳಂತೆ ನೋಡ್ತಿದಾರೆ. ಆದರೆ ಗಾಂಧಿ ಎಷ್ಟೇ ವಿರೋಧ ಇದ್ದರೂ ಶತ್ರುವಿನಂತೆ ಟ್ರೀಟ್ ಮಾಡಿದವರಲ್ಲ. ಗಾಂಧೀಜಿ ಕಲ್ಪನೆಯ ಆದರ್ಶ ರಾಜಕೀಯಕ್ಕೆ ಅಗತ್ಯವಿದೆ. ಗಾಂಧಿ ಮುಸ್ಲಿಂ ಸಮಾಜದ ತಪ್ಪುಗಳನ್ನು ಎಂದೂ ಸಹಿಸಿದವರಲ್ಲ.‌ ಹಿಂದೂ, ಮುಸ್ಲಿಂ ಎರಡೂ ಕಡೆಯ ಹಿಂಸೆಯನ್ನು ವಿರೋಧಿಸಿದವರು. ಈಗ ಗಾಂಧಿ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕರಿಯರ ವಿರುದ್ಧ ಗಾಂಧಿ ಇದ್ದರು ಎಂಬ ಅಪಪ್ರಚಾರ ಇದು. ಅವರಿಗೆ ಭಾರತದ‌ ಕೆಲವು ದಲಿತ ಸಂಘಟನೆಗಳು ಕುಮ್ಮಕ್ಕು ನೀಡುತ್ತಿವೆ ಅಂತ ಕಿಡಿ ಕಾರಿದ್ದಾರೆ. 

Latest Videos
Follow Us:
Download App:
  • android
  • ios