ಬೆಳಗಾವಿ [ನ.17]: ರಮೇಶ್ ಜಾರಕಿಹೊಳಿ ತಲೆ ಖಾಲಿ ಇದೆ. ಅವರ ತಲೆಯಲ್ಲಿರುವ ಮೆದುಳು ಕೆಲಸವನ್ನೇ ಮಾಡುತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಮೊಬೈಲ್ ಹ್ಯಾಂಗ್ ಆದಾಗ ಹೇಗೆ ಇರುತ್ತದೆಯೋ ಹಾಗೆ ರಮೇಶ್ ಮಾಡ್ತಾನೆ ಎಂದಿದ್ದಾರೆ. 

ಲಕ್ಷ್ಮೀ ಹೆಬ್ಬಾಳ್ಕರ್ 100 % ಪ್ರಭಾವಿ ನಾಯಕಿ, ಅವರ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದ. ಇದೀಗ ಗೋಕಾಕ್ ನಲ್ಲಿ ಸ್ಪರ್ಧೆ ಮಾಡುತ್ತಿರುವ ಲಖನ್ ಪರವಾಗಿ ಪ್ರಚಾರ ಮಾಡಲು ಲಕ್ಷ್ಮೀ, ಡಿಕೆಶಿ ಇಬ್ಬರನ್ನೂ ಕರೆಸುತ್ತೇವೆ ಎಂದು ಹೇಳಿದರು. 

ಇನ್ನು ರಮೇಶ್ ಜೊತೆಗೆ ಹೋದರೆ ಅರ್ಧ ತಲೆ ಬೋಳಿಸಿ ಕೂರಿಸುತ್ತಾನೆ. ಇದರಿಂದ ಬೇಸತ್ತುಲಖನ್ ಅವನ ಜೊತೆ ಬಿಟ್ಟು ಬಂದಿದ್ದಾರೆ. ನಾಳೆ [ನ.18] ರಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಹಲವು ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ ಎಂದು ಜಾರಕಿಹೊಳಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಮೇಶ್ ಜಾರಕಿಹೊಳಿ‌ ಸುಳ್ಳು ಹೇಳುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾರೆ. ಈ ಹುಚ್ಚನನ್ನು ಮಂತ್ರಿ ಮಾಡಿದರಲ್ಲ ಅಂತಾ ನಾನು ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ಜೊತೆ ಜಗಳವಾಡಿದ್ದೆ . ಆದರೆ ಇದು ಬಿಟ್ಟು ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ಜೊತೆ ನನ್ನದ್ಯಾವುದೇ ಜಗಳ ಇಲ್ಲ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.