ಚಿತ್ರದುರ್ಗ (ಆ.24):  ಗೌರಿ ಹಾಗೂ ಗಣೇಶ ಹಬ್ಬದ ಅಂಗವಾಗಿ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಕೊರೋನಾ ವಾರಿಯರ್ಸ್‌ಗೆ ಸೀರೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಚಿತ್ರದುರ್ಗದ ಕೋವಿಡ್‌ ಆಸ್ಪತ್ರೆಗೆ ಜೂನ್‌ 30 ಹಾಗೂ ಆಗಸ್ಟ್‌ 15 ರಂದು ಭೇಟಿ ನೀಡಿದ್ದ ರಘು ಆಚಾರ್‌ ಅಲ್ಲಿನ ವಾರಿಯರ್ಸ್‌ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಗೌರವಿಸುವ ಸಂಬಂಧ ಸೀರೆಗಳ ಉಡುಗೊರೆ ನೀಡಿದ್ದಾರೆ.

ಸಮಾಜದ ಸ್ವಾಸ್ಥ್ಯ ಕಾಪಾಡಲು ಹಾಗೂ ಕೊರೋನಾ ಮಹಾಮಾರಿ ನಾಶ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಕರೋನಾÜ ವಾರಿಯರ್ಸ್‌ ಪೋ›ತ್ಸಾಹಿಸುವ ಸಲುವಾಗಿ ತಮ್ಮದೊಂದು ಉಡುಗೊರೆ ಎಂದು ರಘು ಆಚಾರ್‌ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಶೀಘ್ರದಲ್ಲಿ ಕರೋನ ಮುಕ್ತವಾಗಲಿ ಎಂದು ಹಾರೈಸಿದ್ದಾರೆ.

ಹತೋಟಿಗೆ ಬಾರದ ಕೊರೋನಾ: ಹಿರಿಯ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ

ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಿಗೆ ಸೀರೆಗಳ ವಿತರಣೆ ಮಾಡಿದರು. ಜಿಲ್ಲಾ ಸರ್ಜನ್‌ ಡಾ.ಬಸವರಾಜ್‌ ಉಪಸ್ಥಿತರಿದ್ದರು.