ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಒಂದೆಲ್ಲಾ ಒಂದು ಕಡೆ ಕೇಳುತ್ತಲೇ ಇರುತ್ತವೆ. ಆದರೆ ಸಂಪೂರ್ಣ ವಿವರ ನಮಗೆ ಗೊತ್ತಿರುವುದಿಲ್ಲ. ಇಲ್ಲೊಂದು ಕಾರ್ಯಕ್ರಮ ಭಾರತದ ವೈಜ್ಞಾನಿಕ ಸಾಧನೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲುವ ಕೆಲಸ ಮಾಡಲಿದೆ. ಸಂಸ್ಕೃತ ಭಾಷೆಯ ಅರಿವಿನಲ್ಲಿ ಗೊತ್ತಿರದ ಅನೇಕ ವಿಚಾರಗಳನ್ನು ನಮ್ಮ ಮುಂದೆ ಇಡಲಿದೆ.

ಬೆಂಗಳೂರು(ಸೆ.14) ಕೆಂಗೇರಿಯ ಸಾಧನಾ ಡಿಗ್ರಿ ಕಾಲೇಜು ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಸೆ.15ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.

ಬೆಂಗಳೂರಿನ ಜ್ಞಾನ-ವಿಜ್ಞಾನ ಸ್ಟಡಿ ಸೆಂಟರ್ ನ ನಿರ್ದೇಶಕ, ಸಂಸ್ಕೃತ ವಿದ್ವಾಂಸ ವಿದ್ವಾನ್ ಜಗದೀಶ್ ಶರ್ಮಾ 'ಪುರಾತನ ಭಾರತದಲ್ಲಿ ವೈಜ್ಞಾನಿಕ ಸಾಧನೆಗಳು' ವಿಚಾರದ ಮೇಲೆ ಮಾತನಾಡಲಿದ್ದಾರೆ.

ಕಾರ್ಯಕ್ರಮವನ್ನು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುವರ್ಣ್ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಸಿರಾಜ್ ರೆಹಮಾನ್ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಾರ್ಗದ ನಕಾಶೆ ಇಲ್ಲಿದೆ