Ramanagara ; ಜಾನ​ಪದ ಲೋಕ​ದಲ್ಲಿ‘ಸಂಜೀ​ವಿನಿ ಗ್ರಾಮೀಣ ಸಂತೆ’

ಜಾನ​ಪದ ಲೋಕ​ದಲ್ಲಿ‘ಸಂಜೀ​ವಿನಿ ಗ್ರಾಮೀಣ ಸಂತೆ’ ಜಿಪಂ ಸಿಇಒಯಿಂದ ಸಂತೆಗೆ ಚಾಲ​ನೆ. ಪ್ರತೀ ಭಾನು​ವಾರ ತಪ್ಪದೆ ನಡೆ​ಯ​ಲಿದೆ ಸಂತೆ. ಕೃಷಿ ಉತ್ಪನ್ನ ಮತ್ತು ಮೌಲ್ಯವರ್ಧಿತ ಉತ್ಪ​ನ್ನ​ಗಳ ಮಾರಾ​ಟ.

Sanjeevini Grameena Santhe  in janapada loka Ramanagara gow

ಎಂ.ಅ​ಫ್ರೆಜ್ ಖಾನ್‌

 ರಾಮ​ನ​ಗರ (ಆ.20): ರೈತರು ಕೃಷಿ ಉತ್ಪನ್ನ ಹಾಗೂ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನ ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಜಿ.ಪಂ. ‘ಸಂಜೀ​ವಿನ ಗ್ರಾಮೀಣ ಸಂತೆ‘ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಸಂಜೀವಿನಿ- ಕೆಎಸ್‌ಆರ್‌ಎಲ್‌ಪಿಎಸ್‌ ಯ ಯೋಜನೆಯಡಿ ರಚ​ನೆ​ಗೊಂಡಿ​ರುವ ಮಹಿಳಾ ಸ್ವ ಸಹಾಯ ಸಂಘ​ಗಳು ತಯಾ​ರಿ​ಸಿ​ರುವ ಉತ್ಪ​ನ್ನ​ಗಳ ಪ್ರದ​ರ್ಶನ - ಮಾರಾಟ ​ಹಾಗೂ ತೆನೆ ರೈತ ಉತ್ಪಾ​ದ​ಕರ ಕಂಪ​ನಿ​ಯಲ್ಲಿ ನೋಂದಾ​ವ​ಣೆ​ಯಾ​ದ ರೈತರ ಕೃಷಿ ಉತ್ಪನ್ನಗಳ ಮಾರಾ​ಟ​ಕ್ಕಾಗಿ ಸಂಜೀವಿನಿ ಗ್ರಾಮೀಣ (ಲೋ​ಕ​) ಸಂತೆ​ಯನ್ನು ಆಯೋ​ಜಿ​ಸ​ಲಾ​ಗು​ತ್ತಿ​ದೆ. ಜಿ.ಪಂ., ಕರ್ನಾ​ಟಕ ಜಾನ​ಪದ ಪರಿಷತ್ತು, ಜಾನ​ಪದ ಲೋಕ, ರಾಮ​ನ​ಗರ ತಾಲೂ​ಕಿನ ಸಂಜೀ​ವಿನಿ ಒಕ್ಕೂ​ಟ​ಗಳು ಹಾಗೂ ತೆನೆ ರೈತ ಉತ್ಪಾ​ದ​ಕರ ಕಂಪನಿ ಸಹ​ಯೋ​ಗ​ದಲ್ಲಿ ಜಾನ​ಪದ ಕಲಾ​ವಿ​ದರ ಕಾಶಿ ಎಂದೇ ಕರೆ​ಯ​ಲ್ಪ​ಡುವ ಜಾನ​ಪದ ಲೋಕ​ದ ಬಯ​ಲಲ್ಲಿ ಪ್ರತೀ ಭಾನು​ವಾರ ​ಬೆಳ​ಗ್ಗೆ​ಯಿಂದ ಸಂಜೆ​ವ​ರೆಗೆ ಸಂಜೀ​ವಿನಿ ಗ್ರಾಮೀಣ ಸಂತೆ ನಡೆ​ಯ​ಲಿ​ದೆ. ರೈತರು, ಮಹಿಳಾ ಸ್ವ ಸಹಾಯ ಸಂಘ​ಗಳು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ಸಂಜೀ​ವಿನ ಗ್ರಾಮೀಣ ಸಂತೆಯ ಮುಖ್ಯ ಉದ್ದೇಶ. ಎರಡು ಮೂರು ತಿಂಗಳ ಹಿಂದೆಯೇ ಸಂತೆ ಆರಂಭಿ​ಸುವ ಕುರಿತು ಜಿ.ಪಂ. ಪ್ರಾಯೋ​ಜ​ಕ​ತ್ವದ ಜವಾ​ಬ್ದಾರಿ ಹೊತ್ತಿರುವ ಸಂಸ್ಥೆ​ಗ​ಳೊಂದಿಗೆ ಚರ್ಚೆ ನಡೆ​ಸಿತ್ತು. ಆದರೆ, ಮಳೆಯ ಕಾರ​ಣ​ದಿಂದ ಕಾರ್ಯ​ಕ್ರಮಕ್ಕೆ ಚಾಲನೆ ನೀಡಲು ಸಾಧ್ಯ​ವಾ​ಗಿ​ರ​ಲಿ​ಲ್ಲ.

ಬಯ​ಲ​ಲ್ಲಿಯೇ ಮಾರಾ​ಟ: ಸುಂಕ ನಿಗದಿ

ಜಾನ​ಪದ ಲೋಕ ಆವ​ರ​ಣ​ದ​ ಬಯ​ಲಲ್ಲಿ ಸಂತೆ ನಡೆ​ಯ​ಲಿದ್ದು, ಉದ್ಘಾ​ಟ​ನೆಯ ದಿನ​ವಾದ ಶನಿ​ವಾರ 10 ರಿಂದ 12 ಟೇಬಲ್‌ ಗಳನ್ನು ಹಾಕಿ ಮಾರಾಟ ವ್ಯವಸ್ಥೆ ಮಾಡ​ಲಾ​ಗು​ತ್ತಿದೆ. ಮುಂದಿನ ಭಾನು​ವಾ​ರ​ದಿಂದ ನೆಲದ ಮೇಲೆ ಟಾರ್ಪಲ್‌ ಹಾಕಿ, ನೆರ​ಳಿಗಾಗಿ ಟಾರ್ಪಲ್‌ ಕಟ್ಟಿ​ಕೊಂಡು ಸಾಂಪ್ರ​ದಾ​ಯಿಕ ಸಂತೆಯಂತೆ ನಡೆ​ಯ​ಲಿದೆ.

ಉತ್ಪ​ನ್ನ​ಗಳ ಮಾರಾ​ಟಕ್ಕೆ ಸಂತೆ​ಯಲ್ಲಿ ಭಾಗಿ​ಯಾ​ಗುವ ರೈತ ಮತ್ತು ಮಹಿಳಾ ಸ್ವ ಸಹಾಯ ಗುಂಪು​ಗ​ಳ ಪ್ರತಿ ಅಂಗ​ಡಿ​ಯಿಂದ ನೆಲ ಬಾಡಿಗೆ 50 ರು. ಮತ್ತು ಸ್ವಚ್ಛ​ತೆ​ಗಾಗಿ 50 ರು. ಸೇರಿ ಒಟ್ಟು 100 ರು. ಸುಂಕ ನಿಗದಿಪಡಿ​ಸಲು ಚಿಂತನೆ ನಡೆ​ದಿದೆ.

ಸಂತೆ​ಯ ಮೊದಲ ದಿನ 5 ರಿಂದ 6 ಮಹಿಳಾ ಸಂಘ ಸಂಸ್ಥೆ​ಗಳು ಹಾಗೂ 4 ರಿಂದ 5 ಮಂದಿ ರೈತರು ಉತ್ಪ​ನ್ನ​ಗಳ ಮಾರಾಟ ಮಾಡ​ಲಿದ್ದು, ಮುಂದಿನ ಭಾನು​ವಾ​ರ​ದಿಂದ ಮಾರಾ​ಟ​ಗಾ​ರರ ಸಂಖ್ಯೆ ಹೆಚ್ಚ​ಳ​ವಾ​ಗ​ಲಿದೆ. ಉತ್ಪ​ನ್ನ​ಗ​ಳ ಸಾಗಾ​ಣಿಕೆ ವೆಚ್ಚ​ವನ್ನು ಸಂಪೂ​ರ್ಣ​ ರೈತರು ಮತ್ತು ಗುಂಪು​ಗಳೇ ಭರಿಸಿ​ಕೊ​ಳ್ಳು​ತ್ತ​ವೆ.

ಏನೇನು ಮಾರಾ​ಟ: ರೈತರು ತರ​ಕಾರಿ, ಸೊಪ್ಪು ಮಾರಾಟ ಮಾಡು​ವರು. ಇನ್ನು ಸ್ವ ಸಹಾಯ ಸಂಘ​ಗಳು ತಯಾ​ರಿ​ಸಿ​ರುವ ಮಸಾಲೆ ಪದಾರ್ಥ, ಜೇನು ತುಪ್ಪ, ಮೌಲ್ಯ​ವ​ರ್ಧಿತ ಉತ್ಪ​ನ್ನ​ಗಳು, ಟೆರಕೋಟ (ಮಣ್ಣಿನಿಂದ ಮಾಡಿದ ಕಲಾಕೃತಿಗಳು), ಅಡುಗೆ ಎಣ್ಣೆ ಉತ್ಪನ್ನಗಳು, ಮಾಗಡಿ ಕುದೂರು ರೇಷ್ಮೆ ಸೀರೆಗಳು, ನರ್ಸರಿ ಗಿಡಗಳು ಹಾಗೂ ಇನ್ನಿತರ ಗ್ರಾಮೀಣ ವಸ್ತುಗಳನ್ನು ಮಾರಾಟ ಮಾಡ​ಲಿ​ದ್ದಾ​ರೆ.

ರಾಮನಗರ ಜಿ.ಪಂ., ರಾಮನಗರ ತಾ.ಪಂ. ಹಾಗೂ ಜಾನಪದ ಲೋಕದ ಸಹಯೋಗದೊಂದಿಗೆ ಸಂಜೀವಿನಿ- ಕೆಎಸ್‌ಆರ್‌ಎಲ…ಪಿಎಸ್‌ ಯ ಯೋಜನೆಯಡಿ ರಚನೆಗೊಂಡಿರುವ ಮಹಿಳಾ ಸ್ವ-ಸಹಾಯ ಸಂಘದವರಿಂದ ಸಂಜೀವಿನಿ ಗ್ರಾಮೀಣ ಸಂತೆಯನ್ನು ಆಗಸ್ವ್‌ 20 ಮತ್ತು 21 ರಂದು ಜಾನಪದ ಲೋಕದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5.30ರವೆರೆಗೆ ಆಯೋಜಿಸಲಾಗಿದೆ.

ಜಿ.ಪಂ.ಸಿಇಒ ದಿಗ್ವಿ​ಜಯ್‌ ಬೋಡ್ಕೆ ಸಂತೆಗೆ ಚಾಲನೆ ನೀಡ​ಲಿ​ದ್ದಾರೆ. ಜಿ.ಪಂ ಯೋಜನಾ ನಿರ್ದೇ​ಶಕ ಚಿಕ್ಕ​ಸು​ಬ್ಬಯ್ಯ, ತಾ.ಪಂ. ಇಒ ಪ್ರದೀಪ್‌ ಭಾಗ​ವ​ಹಿ​ಸ​ಲಿ​ದ್ದಾ​ರೆ.

ಸಂಜೀ​ವಿನಿ ಗ್ರಾಮೀಣ ಸಂತೆ​ಯಲ್ಲಿ ನೋಂದಾ​ಯಿತ ರೈತರು ತರ​ಕಾರಿ, ಸೊಪ್ಪು, ಹಣ್ಣು​ಗ​ಳನ್ನು ಹಾಗೂ ಮಹಿಳಾ ಸ್ವ ಸಹಾಯ ಸಂಘ​ಗಳು ಮೌಲ್ಯ​ವ​ರ್ಧಿತ ಉತ್ಪ​ನ್ನ​ಗಳು ಮಧ್ಯ​ವ​ರ್ತಿ​ಗ​ಳಿ​ಲ್ಲದೇ ನೇರ​ವಾಗಿ ಮಾರಾಟ ಮಾಡ​ಬ​ಹು​ದಾ​ಗಿದೆ. ಇದೊಂದು ವಿಭಿನ್ನ ಪ್ರಯೋ​ಗ​ವಾ​ಗಿದ್ದು, ಭಾನುವಾರದ ಸಂತೆಗೆ ಉತ್ತಮ ಸ್ಪಂದನೆ ದೊರೆಯುವ ವಿಶ್ವಾ​ಸ​ವಿದೆ.

- ನಂಜುಂಡ​ಸ್ವಾಮಿ, ಸದ​ಸ್ಯರು, ತೆನೆ ರೈತ ಉತ್ಪಾ​ದ​ಕರ ಕಂಪ​ನಿ.

Latest Videos
Follow Us:
Download App:
  • android
  • ios