ಪಾವಗಡ (ಆ.27): ಕೊರೋನಾ ತಡೆಗೆ ಜನಜಾಗೃತಿ ಹಾಗೂ ಸ್ವಚ್ಛತೆಗೆ ಮುಂದಾದ ಇಲ್ಲಿನ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಜಪಾನಂದಶ್ರೀಗಳು ಮಂಗಳವಾರ ಪಟ್ಟಣದ ಹೊಸ ಬಸ್‌ ನಿಲ್ದಾಣದ ವ್ಯಾಪ್ತಿ ಮತ್ತು ಅಂಗಡಿಗಳ ಬಳಿ ಕ್ರಿಮಿನಾಶಕ ಔಷಧಿ ಸಿಂಪಡಣೆಗೆ ಚಾಲನೆ ನೀಡಿ ಅರಿವು ಮೂಡಿಸಿದರು.

ಬಳಿಕ ಇಲ್ಲಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಸ್ವಾಮಿ ಜಪಾನಂದಶ್ರೀಗಳು, ಬೆಂಗಳೂರು ಇಸ್ಫೋಸಿಸ್‌ ಪೌಂಡೇಷನ್‌ ಮತ್ತು ರಾಮಕೃಷ್ಣ ಸೇವಾಶ್ರಮದಿಂದ ಹಲವಾರು ರೀತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೊರೋನಾ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಕ್ರಿಮಿನಾಶಕ ಔಷಧಿ ಸಿಂಪಡಣೆ, ಮಹಾಮಾರಿಯಿಂದ ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸಿ ಸಾವಿರಾರು ಮಂದಿಗೆ ಅಕ್ಕಿ, ಬೇಳೆ ಇತರೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಲಾಗಿದೆ ಎಂದರು.

ಫೇಸ್‌ ಮಾಸ್ಕ್‌ v/s ಫೇಸ್‌ ಶೀಲ್ಡ್‌; ಯಾರು ಹಿತವರು ಮಗುವೇ ಈ ಇಬ್ಬರೊಳಗೆ!.

ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಿನ್ನೆಲೆಯಲ್ಲಿ ಭಗವತ್ಸೇವೆಯೆಂಬ ಧ್ಯೇಯ ವಾಕ್ಯದೊಂದಿಗೆ ಸದಾ ಶ್ರದ್ಧಾಭಕ್ತಿಯಿಂದ ಜನಪರ ಕಾರ್ಯ ಯೋಜನೆಗಳು ಕೈಗೆತ್ತಿಕೊಳ್ಳಲಾಗಿದೆ. ರಾಮಕೃಷ್ಣ ಸೇವಾಶ್ರಮ ಹಾಗೂ ಇಸ್ಫೋಸಿಸ್‌ ಫೌಂಡೇಷನ್‌ ಸಹಯೋಗದಲ್ಲಿ ಕಳೆದ ಆರು ತಿಂಗಳಿನಿಂದಲೂ ನಾನಾ ವಿಧವಾದ ಸೇವಾ ಯೋಜನೆಗಳ ಮೂಲಕ ನಿರ್ಗತಿಕ, ಬಡವ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಖಾಸಗಿ ಬಸ್‌ ಡ್ರೈವರ್‌, ಕ್ಲಿನರ್‌ ಹಾಗೂ ಏಜೆಂಟರ್‌ಗಳು ಸೇರಿದಂತೆ ಚಿಂದಿ ಆಯುವವರು, ಹೀಗೆ ಸಮಾಜದ ಅತ್ಯಂತ ನಿಕೃಷ್ಟಸ್ಥಾನದಲ್ಲಿರುವವರನ್ನು ಗುರುತಿಸಿ ಸಂದರ್ಭನುಸಾರ ಸಹಾಯಹಸ್ತ ನೀಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ ಇದೆ ಎಂದರು.

ಅಲ್ಲದೇ ಸಂಕಷ್ಟದಲ್ಲಿದ್ದವರಿಗೆ ಮೂರಕ್ಕಿಂತ ಹೆಚ್ಚು ಬಾರಿ ಈ ರೀತಿಯ ಸಹಾಯ ಕಲ್ಲಿಸಿದ್ದು ಇದರ ಜತೆಗೆ ಇಂದು ನೂರಕ್ಕಿಂತ ಹೆಚ್ಚು ಖಾಸಗಿ ಬಸ್‌ ಚಾಲಕರುಗಳಿಗೆ ಆಹಾರ ಪದಾರ್ಥಗಳ ಕಿಟ್‌ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್‌ ನಿಯಮದೊಂದಿಗೆ ಕಿಟ್‌ ಪಡೆದಿರುವುದು ಸಂತಸ ತಂದಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಕೊಪ್ಪಳ: ಕೊರೋನಾ ರೋಗಿಗಳಿಗೆ ನೆರೆಹೊರೆಯವರು ಧೈರ್ಯತುಂಬಿ, ಗವಿ​ಶ್ರೀ.

ಇದೇ ವೇಳೆ ಸ್ವಾಮಿ ಜಪಾನಂದಜೀ ಮಹಾರಾಜ್‌ ಹಾಗೂ ಕರುನಾಡ ತಾಯಿ ಸುಧಾಮೂರ್ತಿ ಅವರು ಸಂಕಷ್ಟದಲ್ಲಿರುವ ಜಿಲ್ಲೆಯ ಮೂರು ತಾಲೂಕಿನ ಜನತೆಗೆ ಸಹಾಯಸ್ತರಾಗಿ ಸೇವೆ ಕಲ್ಪಿಸಿದ್ದು ಪಟ್ಟಣ ಹಾಗೂ ಬ್ಯಾಂಕ್‌ ಸುತ್ತಮುತ್ತ ಪರಿಸರ ನೈರ್ಮಲ್ಯೀಕರಣ, ಔಷಧಿ ಸಿಂಪಡಣೆ ಮತ್ತು ಕೊರೋನಾ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತರಾದ ಸ್ವಾಮೀಜಿ ಅವರ ಕಾರ್ಯ ಅಪಾರವಾಗಿದೆ ಎಂದು ಬಸ್‌ ಚಾಲಕರು, ಏಜೆಂಟರು ಇತರೆ ವಲಯಗಳ ಕಾರ್ಮಿಕರು ಸ್ವಾಮೀಜಿ ಸೇವೆ ಕೊಂಡಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕ ವಿ.ಮಂಜುನಾಥ್‌, ಆಶ್ರಮದ ಕಾನೂನು ಸಲಹೆಗಾರ ವಕೀಲ ಎಂ.ಭಗವಂತಪ್ಪ, ಪುರುಷೋತ್ತಮರೆಡ್ಡಿ ಇದ್ದರು.