ಉಡುಪಿ(ಮೇ 19): ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಕಳೆದ 53 ದಿನಗಳಿಂದ ಮುಚ್ಚಿರುವ ಸಲೂನುಗಳು ಸೋಮವಾರ ಷರತ್ತುಬದ್ಧವಾಗಿ ತೆರೆದುಕೊಂಡಿವೆ. ಮುಂಗಡವಾಗಿ ಕರೆ ಮಾಡಿ ಬಂದ ಗ್ರಾಹಕರಿಗೆ ಮಾತ್ರ ಕ್ಷೌರ ಮಾಡಲಾಯಿತು. ಜಿಲ್ಲೆಯಲ್ಲಿ ಕೆಲಸ ಮಡುತ್ತಿದ್ದ ಉತ್ತರಪ್ರದೇಶ, ದೆಹಲಿಯ ಕ್ಷೌರಿಕರು ಊರಿಗೆ ತೆರಳಿದ್ದರಿಂದ, ಕೆಲವು ಅಂಗಡಿ ಮಾಲೀಕರು ಸ್ಥಳೀಯ ಕ್ಷೌರಿಕರನ್ನು ಬಳಸಿ ಅಂಗಡಿ ತೆರೆದರು.

ಜಿಲ್ಲಾ ಸವಿತಾ ಸಮಾಜದ ನಿಯೋಗ ಇತ್ತೀಚೆಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಕ್ಷೌರದಂಡಗಿ ತೆರೆಯಲು ಅನುಮತಿ ಕೋರಿದ್ದಾಗ ಜಿಲ್ಲಾಧಿಕಾರಿ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಸೆಲೂನ್‌ ತೆರೆಯಲು ತಿಳಿಸಿದ್ದರು.

ಇಂದಿನಿಂದ ಶಿವಮೊಗ್ಗದಿಂದ ಹೊರ ಜಿಲ್ಲೆಗಳಿಗೆ KSRTC ಬಸ್ ಸೇವೆ ಆರಂಭ

ಜಿಲ್ಲಾಡಳಿತ ಮುಂಗಡ ಫೋನ್‌ ಮಾಡಿ ಸಮಯವನ್ನು ನಿಗದಿಗೊಳಿಸಿ ಬಂದ ಗ್ರಾಹಕರಿಗೆ ಮಾತ್ರ ಕ್ಷಾೌರ ಮಾಡಬೇಕು. ಸೆಲೂನಿನಲ್ಲಿ ಗ್ರಾಹಕರನ್ನು ಕುಳ್ಳಿರಿಸಿ ಕಾಯಿಸುವಂತಿಲ್ಲ, ಎಸಿ ಬಳಸುವಂತಿಲ್ಲ, ಕ್ಷಾೌರಿಕ ಮತ್ತು ಗ್ರಾಹಕರ ನಡುವೆ 2 ಅಡಿ ಅಂತರ ಕಾಯಬೇಕು, ಕೇವಲ ಇಬ್ಬರು ಗ್ರಾಹಕರಿಗೆ ಮಾತ್ರ 6 ಅಡಿ ಅಂತರದಲ್ಲಿ ಸೇವೆ ನೀಡಬೇಕು.

ಹೊರರಾಜ್ಯದಿಂದ ಬಂದವರಿಂದಲೇ ಶಿವಮೊಗ್ಗ ಜಿಲ್ಲೆಯ ಜನರ ನೆಮ್ಮದಿಗೆ ಭಂಗ: ಸಚಿವ ಈಶ್ವರಪ್ಪ

ಕ್ಷಾೌರಿಕರು ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಬಳಸಬೇಕು, ಪ್ರತಿ ಗ್ರಾಹಕರ ಕೈಗೆ ಸ್ಯಾನಿಟೈಸರ್‌ ನೀಡಬೇಕು, ಕ್ಷಾೌರಕ್ಕೆ ಬಳಸುವ ಬಟ್ಟೆಮತ್ತು ಅಂಗಡಿಯಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಪಾಡಬೇಕು, ಒಮ್ಮೆ ಬಳಸಿದ ಬಟ್ಟೆಯನ್ನು ಒಗೆಯದೇ ಪುನಃ ಬಳಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.