ಕನಿಷ್ಠ ವೇತನ ಮಂಡಳಿಯ ಶಿಫಾರಸಿನಂತೆ ಸಂಬಳ ನೀಡುತ್ತಿಲ್ಲ : ಕಾರ್ಮಿಕ ಮುಖಂಡ ಸುಜಿತ್‌

ಕೈಗಾರಿಕೆಗಳ ಕೆಲ ಆಡಳಿತ ಮಂಡಳಿಗಳು ಕನಿಷ್ಠ ವೇತನ ಮಂಡಳಿಯ ಶಿಫಾರಸಿನಂತೆ ಸಂಬಳವನ್ನು ನೀಡುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಸುಜಿತ್‌ ನಾಯಕ ತಿಳಿಸಿದರು.

Salaries are not being paid as recommended by the Minimum Wage Board: Labor leader Sujith snr

  ತುಮಕೂರು :  ಕೈಗಾರಿಕೆಗಳ ಕೆಲ ಆಡಳಿತ ಮಂಡಳಿಗಳು ಕನಿಷ್ಠ ವೇತನ ಮಂಡಳಿಯ ಶಿಫಾರಸಿನಂತೆ ಸಂಬಳವನ್ನು ನೀಡುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಸುಜಿತ್‌ ನಾಯಕ ತಿಳಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಮಿಕರಿಗೆ ಕನಿಷ್ಠ ವೇತನ ಮಂಡಳಿ 2017ರಲ್ಲಿ 11,300 ರು.ಗಳನ್ನು ನಿಗದಿಪಡಿಸಿತ್ತು, ಇದರ ವಿರುದ್ಧ ರಾಜ್ಯದ 930ಕ್ಕೂ ಹೆಚ್ಚು ಕೈಗಾರಿಕೆಗಳ ಆಡಳಿತ ಮಂಡಳಿಗಳು ಹೈಕೋರ್ಚ್‌ನಲ್ಲಿ ಪ್ರಶ್ನಿಸಿದ್ದವು, ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿ ಕನಿಷ್ಠ ವೇತನ ಮಂಡಳಿಯ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಆದರೂ ಸಹ ಕೆಲವು ಕೈಗಾರಿಕೆಗಳ ಆಡಳಿತ ಮಂಡಳಿಗಳು ಕನಿಷ್ಠ ವೇತನ ಮಂಡಳಿಯ ಶಿಫಾರಸಿನಂತೆ ಸಂಬಳವನ್ನು ನೀಡುತ್ತಿಲ್ಲ, ಅಂತರಸನಹಳ್ಳಿ ಫಿಟ್‌ ವೀಲ್‌ ಅಂಡ್‌ ಪೋಜಿಂರ್‍ಗ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ 232 ಕಾರ್ಮಿಕರು ಕನಿಷ್ಠ ವೇತನಕ್ಕಾಗಿ ಕಾರ್ಮಿಕ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು ಎಂದರು.

ಈ ಅರ್ಜಿಯನ್ನು ವಿಚಾರಣೆಯನ್ನು 61 ಬಾರಿ ನಡೆಸಿರುವ ಕಾರ್ಮಿಕರ ನ್ಯಾಯ ಮಂಡಳಿ, ಕನಿಷ್ಠ ವೇತನ ಮಂಡಳಿಯ ಶಿಫಾರಸ್ಸಿನಂತೆ ಫಿಟ್‌ ವ್ಹೀಲ್‌ ಅಂಡ್‌ ಫೆäಜಿಂರ್‍ಗ್‌ ಕಂಪೆನಿಯ 232 ಕಾರ್ಮಿಕರಿಗೆ 5,28,67,943 ಕೋಟಿ ರು. ಪಾವತಿಸುವಂತೆ 3 ಗುತ್ತಿಗೆ ಸಂಸ್ಥೆಗಳಿಗೆ ಆದೇಶ ನೀಡಿದೆ. ಕನಿಷ್ಠ ವೇತನ ಮಂಡಳಿಯು ಸರ್ಕಾರದ ಭಾಗವಾಗಿದ್ದು, ಈ ಮಂಡಳಿ ಹೆಚ್ಚಳ ಮಾಡಿರುವ ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸು ವಿರೋಧಿಸಿ ಹೈಕೋರ್ಚ್‌ ಮೊರೆ ಹೋಗಿದ್ದ ಸಂಸ್ಥೆಗಳಿಗೆ ಶೇ.6.5 ಬಡ್ಡಿಯೊಂದಿಗೆ ವೇತನ ಪಾವತಿಸಲು ನ್ಯಾ.ರಘು ದೀಕ್ಷಿತ್‌ ಭಟ್‌ ಅವರು ಆದೇಶ ನೀಡಿದ್ದರು. ಈ ಆದೇಶದ ಮೇರೆಗೆ ಫಿಟ್‌ ವ್ಹೀಲ್‌ ಟೊಲ್ಸ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಪೂರೈಸುತ್ತಿರುವ ನಯನ ಎಂಟರ್‌ ಪ್ರೈಸೆಸ್‌ 2,11,50,797, ಸ್ವಚ್ಛ ಎಂಟರ್‌ ಪ್ರೈಸೆಸ್‌ 1,93,32,860, ಬೃಂದಾವನ ಎಂಟರ್‌ ಪ್ರೈಸೆಸ್‌ 1,23,84,286 ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿದೆ ಎಂದರು.

ಕನಿಷ್ಠ ವೇತನ ಮಂಡಳಿ ಆದೇಶದಂತೆ ಫಿಟ್‌ ವೀಲ್‌ ಸಂಸ್ಥೆ ಕನಿಷ್ಥ ವೇತನ ಕೊಡುತ್ತಿಲ್ಲ ಎಂದು 22 ಕಾರ್ಮಿಕರು ಕಾರ್ಮಿಕರ ನ್ಯಾಯ ಮಂಡಳಿ ಮೊರೆ ಹೋಗಿದ್ದರಿಂದ ಎಲ್ಲ ಕಾರ್ಮಿಕರಿಗೆ ನ್ಯಾಯ ಸಿಕ್ಕಂತಾಗಿದೆ, ಸಿಐಟಿಯು ಸಂಪೂರ್ಣ ಬೆಂಬಲ ನೀಡಿದ್ದರಿಂದ ಇಂದು ಕಾರ್ಮಿಕ ದೊಡ್ಡ ಮೊತ್ತದ ಸಂಬಳ ದೊರೆಯುವಂತಾಗಿದೆ. ಈ ಹೋರಾಟದಲ್ಲಿ ಭಾಗಿಯಾದ 22 ಕಾರ್ಮಿಕರನ್ನು ಸಂಸ್ಥೆಯು ಕೆಲಸದಿಂದ ಹೊರಗಿಟ್ಟಿದೆ, ಜಿಲ್ಲೆಯ ಬೇರೆ ಕೈಗಾರಿಕಾ ವಲಯದಲ್ಲಿ ಕನಿಷ್ಠ ವೇತನ ಕೊಡದೇ 12 ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಕಾರ್ಮಿಕ ನ್ಯಾಯ ಮಂಡಳಿಯ ಮೂಲಕ ಕನಿಷ್ಠ ವೇತನ ಪಡೆದುಕೊಳ್ಳಬಹುದಾಗಿದೆ ಎಂದರು.

ಈ ವೇಳೆ ಭೀಮರಾಜು , ಶಿವರಾಜ್‌, ಸತೀಶ್‌ ಇತರರಿದ್ದರು.

Latest Videos
Follow Us:
Download App:
  • android
  • ios