ಸಾರಾ ಬಳಗದಿಂದ ಕೋವಿಡ್ ಸೆಂಟರ್ ಆರಂಭ : 1 ಲಕ್ಷ ವೇತನ ನೀಡಿ ವೈದ್ಯರ ನೇಮಕ
ಕೆ.ಆರ್.ನಗರ ಶಾಸಕ ಸಾ ರಾ ಮಹೇಶ್ ಟೀಂ ಕೆ.ಆರ್ ನಗರ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಿದ್ದು, ತಲಾ ಒಂದು ಲಕ್ಷ ರು. ವೇತನ ನೀಡಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಮೈಸೂರು (ಮೇ.02) : ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾವಿರಾರು ಪ್ರಕರಣಗಳು ವರದಿಯಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೆ.ಆರ್ ನಗರ ಶಾಸಕ ತಮ್ಮ ಕ್ಷೇತ್ರದಲ್ಲಿ ಕೊರೋನಾ ತಡೆಯಲು ಕ್ರಮ ಕೈಗೊಂಡಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಶಾಸಕ ಸಾ ರಾ ಮಹೇಶ್ ಕೆ.ಆರ್. ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಿ ಮೂರು ಜನ ವೈದ್ಯರ ನಿಯೋಜನೆ ಮಾಡಿದ್ದಾಗಿ ಹೇಳಿದ್ದಾರೆ.
ಶತಕ ದಾಟಿ ಆವರಿಸಿದೆ ಸೋಂಕು : ಬೆಚ್ಚಿ ಬಿದ್ದ ಗ್ರಾಮದಲ್ಲಿ ಶವಸಂಸ್ಕಾರ ಮಾಡುವವರೂ ಇಲ್ಲ ...
ಮೂವರು ವೈದ್ಯರ ನೇಮಕ ಮಾಡಿದ್ದು, ಮೂವರಿಗೂ ತಲಾ ಒಂದು ಲಕ್ಷ ರು. ವೇತನ ನಿಗದಿ ಮಾಡಿದ್ದು, ಸಾರಾ ಸ್ನೇಹ ಬಳಗದಿಂದ ಈ ಸಂಬಳ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಮುಂದಿನ ವಾರ 200 ಬೆಡ್ ಗಳ ಸುಸಜ್ಜಿತ ಕೋವಿಡ್ ಸೆಂಟರ್ ಆರಂಭ ಮಾಡುತ್ತೇವೆ. ಸಾರಾ ಸ್ನೇಹ ಬಳಗದಿಂದ ಆರಂಭ ಮಾಡಲಿದ್ದು, ಅದನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona