ಸಾಲಿಗ್ರಾಮ (ನ.13): 2020-2021 ನೇ ಸಾಲಿನ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡುವಳಿ ನಿಯಮ 211(2)ರ ಮೇರೆಗೆ ವಿಧಾನಸಭಾ ಸಭಾಧ್ಯಕ್ಷರು ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರನ್ನಾಗಿ ಶಾಸಕ ಸಾ.ರಾ. ಮಹೇಶ್‌ ಅವರನ್ನು ನೇಮಕ ಮಾಡಿದ್ದು, ಈ ಸಮಿತಿಯಲ್ಲಿ 15 ವಿಧಾನಸಭೆ, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಇದ್ದಾರೆ. 

ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಾ.ರಾ. ಮಹೇಶ್‌ ಅವರನ್ನು ತಾಲೂಕು ಜೆಡಿಎಸ್‌ ಅಧ್ಯಕ್ಷ ಚಂದ್ರಶೇಖರ್‌ ಅಭಿನಂದಿಸಿದರು.

ಆಂಧ್ರದ ಹೆಣ್ಣಿಗಾಗಿ ದಲಿತ ಅಧಿಕಾರಿ ಎತ್ತಂಗಡಿ : ರೋಹಿಣಿ ವಿರುದ್ಧ ಸಾರಾ ಆಕ್ರೋಶ .

ಜೆಡಿಎಸ್‌ ವಕ್ತಾರರು ಕೆ.ಎಲ್ ರಮೇಶ್‌, ಕಾರ್ಯದರ್ಶಿ ಧನಂಜಯ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಪ್ಪಳಿ ಸೋಮು, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾಗೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ನಟರಾಜ, ದಿನೇಶ್‌, ಎಸ್‌.ಆರ್‌. ಪ್ರಕಾಶ್‌, ಮಂಜುನಾಥ, ಸತೀಶ್‌, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್‌, ಘಟಕದ ಅಧ್ಯಕ್ಷ ತಿಮ್ಮೇಗೌಡ, ಲಾಲೂಸಾಬ್‌, ಅಯಾಜ್, ಅನಂತರಾಜು ಅಭಿನಂದಿಸಿದ್ದಾರೆ.