Asianet Suvarna News Asianet Suvarna News

ಸಾ.ರಾ. ಮಹೇಶ್‌ ಜನಸೇವೆ ಮುಂದಿಟ್ಟು ಮತಯಾಚನೆ

ತಮ್ಮ ತಂದೆಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ನಿರತಂತರ ಜನಸೇವೆಯನ್ನು ಮುಂದಿಟ್ಟು ಕೊಂಡು ಮತಯಾಚಿಸುತ್ತಿರುವುದಾಗಿ ಶಾಸಕ ಸಾ.ರಾ. ಮಹೇಶ್‌ ಪುತ್ರ ಡಾ. ಧನುಷ್‌ ತಿಳಿಸಿದರು.

Sa Ra Mahesh Campaign in His constituency snr
Author
First Published Apr 24, 2023, 9:08 AM IST

 ಭೇರ್ಯ : ತಮ್ಮ ತಂದೆಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ನಿರತಂತರ ಜನಸೇವೆಯನ್ನು ಮುಂದಿಟ್ಟು ಕೊಂಡು ಮತಯಾಚಿಸುತ್ತಿರುವುದಾಗಿ ಶಾಸಕ ಸಾ.ರಾ. ಮಹೇಶ್‌ ಪುತ್ರ ಡಾ. ಧನುಷ್‌ ತಿಳಿಸಿದರು.

ಹೊಸ ಅಗ್ರಹಾರದಲ್ಲಿ ಶ್ರೀ ಪಟ್ಲದಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಪಟ್ಲದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮತಯಾಚಿಸಿದರು.

ಅತೀ ಸೂಕ್ಷ್ಮಾತಿ ಸೂಕ್ಷ್ಮ ಸಮಾಜಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸೂಕ್ಷ್ಮ ಸಮಾಜಗಳ ಗ್ರಾಮಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಸಮುದಾಯ ಭವನಗಳು, ವಿವಿಧ ದೇವಸ್ಥಾನವನ್ನು ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಯಾವುದೇ ಜಾತಿಭೇದವಿಲ್ಲದೆ 19 ವರ್ಷ ನಿರಂತರವಾಗಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಣೆ, ಶೈಕ್ಷಣಿಕ ಹಿಂದುಳಿದವರಿಗೆ ನೆರವು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಅನುದಾನ ನೀಡಿದ್ದಾರೆ. ಅಲ್ಲದೆ ಹದಿನೈದು ವರ್ಷಗಳ ಶಾಸಕತ್ವದ ಅವಧಿಯಲ್ಲಿ . 4 ಸಾವಿರ ಕೋಟಿ ಅನುದಾನ ತಂದಿದ್ದಾರೆ, ರೈತರ ಜೀವನನಾಡಿ ಚುಂಚನಕಟ್ಟೆಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಿಸುವಲ್ಲಿಯಶಸ್ವಿಯಾಗಿದ್ದಾರೆ. ಈ ಬಾರಿ ಅಧಿಕ ಮತಗಳಿಂದ ಅವರನ್ನು ಗೆಲ್ಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಎಂದು ಅವರು ಮನವಿ ಮಾಡಿದರು.

ಗ್ರಾಪಂ ಮಾಜಿ ಸದಸ್ಯೆ ಜಯಮ್ಮ, ಜೆಡಿಎಸ್‌ ಯುವ ಮುಖಂಡ ಚಂದು, ಚಿಕ್ಕವಡ್ಡರಗುಡಿ ಸಾಗರ್‌, ಡೈರಿ ಮಹೇಶ್‌, ಡೈರಿ ರಾಜೇಗೌಡ, ವಾಲ್ಮೀಕಿ ಸಂಘದ ಅಧ್ಯಕ್ಷ ರಾಘವೇಂದ್ರ, ದೇವೆಂದ್ರ, ಪ್ರಭಾಕರ್‌, ಗಾರೆ ಸಂಘದ ಅಧ್ಯಕ್ಷ ನಾರಾಯಣ, ನಾಗರಾಜ ನಾಯಕ, ಶಶಿಧರ್‌, ಮಧುಕುಮಾರ್‌ ಮೊದಲಾದವರು ಇದ್ದರು.

ನಮ್ಮದು ಅಭಿವೃದ್ಧಿ ಮಂತ್ರ

 ಸಾಲಿಗ್ರಾಮ :  ನಮ್ಮದು ಏನಿದ್ದರೂ ಅಭಿವೃದ್ಧಿ ಮಂತ್ರವೇ ಹೊರತು ಬೇರೊಬ್ಬರ ಹಾಗೆ ಕಾಲಿಡಿದು ಎರಡು ಬಾರಿ ಸೋತಿದ್ದೇನೆ, ನನ್ನನ್ನು ಉಳಿಸಿ ಎಂದು ಕೇಳುತ್ತಾ ತಮ್ಮ ಸೋಲನ್ನು ತಾವೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಪರೋಕ್ಷವಾಗಿ (ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌) ವಿರುದ್ಧ ವಾಗ್ದಾಳಿ ನಡೆಸಿದರು.

ಸಾಲಿಗ್ರಾಮ ಪಟ್ಟಣದಲ್ಲಿ ಪಂಚರತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ 2018ರಲ್ಲಿ ಸ್ಪರ್ಧಿಸಿ ಒಮ್ಮೆ ಸೋತಿದ್ದರು. ಆದರೆ ಅವರೇ ಎರಡು ಬಾರಿ ಸೋತಿದ್ದೇನೆ ಎಂದು ಹೇಳುತ್ತಾ 2023ರ ಚುನಾವಣೆಯ ಸೋಲನ್ನು ಕೂಡ ಒಪ್ಪಿಕೊಂಡಿದ್ದಾರೆ ಎಂದರು.

ನಿಮ್ಮನ್ನು ಸಾಲಿಗ್ರಾಮ ಕ್ಷೇತ್ರದಿಂದ ಎರಡು ಬಾರಿ ಜಿಪಂ ಸದಸ್ಯನಾಗಿ ಆಯ್ಕೆ ಮಾಡಿದ್ದರು. ಜಿಪಂ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದೀರಿ. ಸಾಲಿಗ್ರಾಮ ಕ್ಷೇತ್ರಕ್ಕೆ ಎಷ್ಟುಅನುದಾನ ತಂದು ಅಭಿವೃದ್ಧಿ ಮಾಡಿದ್ದೀರಿ? 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂದು ಕೂಡ ಯಾವುದೇ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲ್ಲಿಲ್ಲ ಎಂದು ಕುಟುಕಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 25,000 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಿದರು. ರಾಜ್ಯದಲ್ಲಿ ಜೆಡಿಎಸ್‌ ಪರ ಮತದಾರರ ಒಲವಿದ್ದು ಈ ಬಾರಿಯೂ ಕುಮಾರಣ್ಣ ಮುಖ್ಯಮಂತ್ರಿ ಆಗಲಿದ್ದಾರೆ. ಪಂಚರತ್ನ ಯೋಜನೆ ಜಾರಿಗೆ ತರಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಮಾತನಾಡಿ, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾತ್ಯತೀತವಾಗಿ ಸಮಗ್ರ ಅಭಿವೃದ್ಧಿ ಮಾಡುತ್ತಾ ಬಂದಿರುವ ಶಾಸಕ ಸಾ.ರಾ. ಮಹೇಶ್‌ ಅವರು ಕೆ.ಆರ್‌. ನಗರ ಪಟ್ಟಣದಲ್ಲಿ ಅತ್ಯಾಧುನಿಕ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಸ್ಥಳ ಮತ್ತು ಅನುದಾನ ತಂದು ನೂತನ ಭವನವನ್ನು ನಿರ್ಮಿಸಲು ಶಾಸಕರೇ ಕಾರಣ. ಇಂತಹ ಜನನಾಯಕರನ್ನು ಅತಿ ಹೆಚ್ಚಿನ ಮತಗಳಿಂದ ಜಯಗಳಿಸಬೇಕು ಎಂದರು.

Follow Us:
Download App:
  • android
  • ios