Asianet Suvarna News Asianet Suvarna News

ಕೇರಳದಲ್ಲಿ ಝೀಕಾ, ಕಪ್ಪಾ ವೈರಸ್ : ರಾಜ್ಯ ಬರುವವರಿಗೆ ಟೆಸ್ಟ್ ಕಡ್ಡಾಯ

  • ಕೇರಳದಲ್ಲಿ ಝೀಕಾ ಮತ್ತು ಕಪ್ಪಾ ವೈರಸ್ 
  • ಕೊರೋನಾ ವೈರಸ್  ಪ್ರಕರಣ ಹೆಚ್ಚಳ
  • ರಾಜ್ಯಕ್ಕೆ ಬರುವವರಿಗೆ ಆರ್‌ಟಿಪಿಸಿಅರ್‌ ಟೆಸ್ಟ್ ರಿಪೋರ್ಟ್ ಕಡ್ಡಾಯ
RTPCR test report mandatory for those coming from Kerala to Karnataka snr
Author
Bengaluru, First Published Jul 11, 2021, 2:43 PM IST

ಗುಂಡ್ಲುಪೇಟೆ (ಜು.11): ಕೇರಳದಲ್ಲಿ ಝೀಕಾ ಮತ್ತು ಕಪ್ಪಾ ವೈರಸ್ ಕಂಡು ಬಂದಿರುವ ಹಿನ್ನೆಲೆ ಮತ್ತು ಕೊರೋನಾ ವೈರಸ್ ಹೆಚ್ಚು ಪ್ರಕರಣ ಹಿನ್ನೆಲೆ ರಾಜ್ಯದ ಗಡಿಯ ಬಂಡಿಪುರ ಸಂರಕ್ಷಿತ ಅರಣ್ಯದೊಳಗೆ ಮೂಲೆಹೊಳೆಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. 

ಕೇರಳ ರಾಜ್ಯದಿಂದ ಬರುವ ಪ್ರತಿಯೊಬ್ಬರ ಆರ್‌ಟಿಸಿಪಿಆರ್‌ ಟೆಸ್ಟ್ ವರದಿ ನೋಡಿಯೇ ರಾಜ್ಯದ ಒಳಗೆ ಬಿಡಲಾಗುತ್ತದೆ. 

ಕೇರಳದಲ್ಲಿ ಝಿಕಾ ವೈರಸ್ ಮತ್ತೆ ಪತ್ತೆ, ರೋಗದ ಲಕ್ಷಣಗಳೇನು ?

ಕೇರಳದಲ್ಲಿ ಕೊರೋನಾ ಸೋಂಕು ಕಡಿಮೆಯಾದಗ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತದ ಸೂಚನೆ ನೀಡಿದ್ದು ಕೇರಳದಿಂದ ಬರುವ ಎಲ್ಲರು ಅರ್‌ಟಿಪಿಸಿಆರ್‌ ಟೆಸ್ಟ್ ತರುವುದು ಕಡ್ಡಾಯ ಮಾಡಲಾಗಿದೆ. 

ಟೆಸ್ಟ್ ಇಲ್ಲದೆ ಬರುವ ಯಾರನ್ನೂ ರಾಜ್ಯದ ಒಳಗೆ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಹಾಗೂ ಆರ್‌ಟಿಪಿಸಿಆರ್‌ ಟೆಸ್ಟ್ ತರದ ಜನರು ರಾಜ್ಯದ ಗಡಿಯೊಳಗೆ ಪ್ರವೇಶ ಇಲ್ಲದಿದ್ದರೆ  ವಾಪಸ್ ಕೇರದತ್ತ ತೆರಳಬೇಕಾಗುತ್ತದೆ. 

ಕೇರಳದಿಂದ ಬರುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ ಹಾಗೂ ಅರ್‌ಟಿಪಿಸಿಅರ್‌ ಟೆಸ್ಟ್  ಕಾರಣ ಅಕ್ರಮ ಪ್ರವೇಶವೂ ಅಗುತ್ತಿದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

Follow Us:
Download App:
  • android
  • ios