ಬಳ್ಳಾರಿ(ಏ.19): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ತೊಂದರೆಗೀಡಾಗಿರುವ ಜನರ ನೆರವಿಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮುಂದೆ ಬಂದಿದ್ದು, ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ ಸಂತ್ರಸ್ತರ ಪಟ್ಟಿ ಮಾಡಿರುವ ಅವರು 2 ಸಾವಿರಕ್ಕೂ ಹೆಚ್ಚು ಪಡಿತರ ಕಿಟ್‌ ವಿತರಿಸಲು ತೀರ್ಮಾನಿಸಿದ್ದಾರೆ.

ನಗರದ ಸೇವಾ ಭಾರತಿ ಸಂಸ್ಥೆಯಲ್ಲಿ ಪಡಿತರ ಕಿಟ್‌ಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ಇಂದಿನಿಂದ(ಭಾನುವಾರ) ಪಡಿತರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಕೋವಿಡ್‌-19 ಜಿಲ್ಲಾ ಆಹಾರ ವಿತರಣಾ ಉಸ್ತುವಾರಿ ಅಧಿಕಾರಿ ರಾಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪಡಿತರ ಕಿಟ್‌ಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಆಹಾರದ ಕಿಟ್‌ ಕೇಳಿದ ಬಡ ಮಹಿಳೆಗೆ ಮನಸೋ ಇಚ್ಛೆ ಥಳಿಸಿದ ಪಾಪಿಗಳು..!

ಜಿಲ್ಲೆಯಾದ್ಯಂತ ತೀವ್ರ ತೊಂದರೆಯಲ್ಲಿರುವ ಜನರಿಗೆ ವಿತರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿರುವುದು ಸಂತಸ ತಂದಿದೆ. ತಮಗೆ ಪಾಸ್‌, ಅನುಮತಿ ಸೇರಿದಂತೆ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅವರು ತಿಳಿಸಿದರು.