ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಮತದಾನ ಮಾಡಿದ ಕೋಲಾರ ಜೆಡಿಎಸ್​ ಶಾಸಕ ಕೆ. ಶ್ರೀನಿವಾಸ ಗೌಡ ಮನೆ ಎದುರು ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ​ (ಜೂ.10): ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಮತದಾನ ಮಾಡಿದ ಕೋಲಾರ ಜೆಡಿಎಸ್​ ಶಾಸಕ ಕೆ. ಶ್ರೀನಿವಾಸ ಗೌಡ ಮನೆ ಎದುರು ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಗುರುವಾರದಿಂದಲೂ ನಡೆದ ಸಾಕಷ್ಟು ಬೆಳವಣಿಗೆಗಳ ನಡುವೆಯೂ ಶ್ರೀನಿವಾಸಗೌಡರನ್ನು ಜೆಡಿಎಸ್​ ಪಕ್ಷಕ್ಕೆ ಮತ ನೀಡುವಂತೆ ಸಾಕಷ್ಟು ಮನವೊಲಿಸುವ ಕೆಲಸ ಮಾಡಲಾಯಿತಾದರೂ ಅಂತಿಮವಾಗಿ ಶ್ರೀನಿವಾಸ ಗೌಡರು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಗೂ ಎರಡನೇ ಪ್ರಾಶಸ್ತ್ಯದ ಮತವನ್ನು ಹಾಕಿದ್ದಾರೆ. 

ಇದನ್ನು ಖಂಡಿಸಿದ ಕೋಲಾರ ಜೆಡಿಎಸ್​ ಕಾರ್ಯಕರ್ತರು ವಿಧಾನಪರಿಷತ್​ ಸದಸ್ಯ ಗೋವಿಂದರಾಜು ನೇತೃತ್ವದಲ್ಲಿ ಶ್ರೀನಿವಾಸಗೌಡರ ಮನೆ ಎದುರು ಪ್ರತಿಭಟನೆ ಮಾಡಿದ್ದಾರೆ. ಕೋಲಾರ ಜೆಡಿಎಸ್​ ಕಾರ್ಯಕರ್ತರು ಹಾಗೂ ಮುಖಂಡರ ಶ್ರಮದಿಂದ ಗೆದ್ದು ಬಂದಿರುವ ಶ್ರೀನಿವಾಸಗೌಡರು ನಂಬಿಕೆ ದ್ರೋಹ ಮಾಡಿದ್ದಾರೆ, ಅವರು ಕಾಂಗ್ರೇಸ್​ ಪಕ್ಷದಲ್ಲಿ ಟಿಕೆಟ್​ ನೀಡದೆ ಹೋದಾಗ ವರಿಷ್ಠರ ಕೈಕಾಲು ಹಿಡಿದು ಟಿಕೆಟ್​ ಕೊಡಿಸಿದ್ದು ನಾವು ಆದರೆ ಇಂದು ಎಲ್ಲರಿಗೂ ದ್ರೋಹ ಮಾಡಿರುವ ಶ್ರೀನಿವಾಸಗೌಡರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ ಸೇರಿಕೊಳ್ಳಲಿ ಎಂದು ಜೆಡಿಎಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. 

Kolar: ವೇತನ ಹೆಚ್ಚಳಕ್ಕಾಗಿ ಮುಂದುವರೆದ ಹೊಂಡಾ ಕಾರ್ಮಿಕರ ಪ್ರತಿಭಟನೆ

ಇದೇ ವೇಳೆ ಶ್ರೀನಿವಾಸಗೌಡರ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಈಬಾರಿ ಶ್ರೀನಿವಾಸಗೌಡರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು. ಪ್ರತಿಭಟನೆ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಶ್ರೀನಿವಾಸಗೌಡ ಮನೆಯ ಎದುರು ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಇಂಚರಾ ಗೋವಿಂದರಾಜು, ಇಂತಹ ಕೆಟ್ಟ ಪ್ರವೃತ್ತಿ ಯಾರು ಮಾಡಬಾರದು. ಇಂತಹ ನೀಚ ಜನರಿಗೆ ಯಾರು ಮತ ಹಾಕಬಾರದು. 

Kolar: ಮಾನವೀಯತೆ ಮರೆತ ಅಧಿಕಾರಿಗಳು: ರೈತ ಮಹಿಳೆಯ ಗೋಳು ಆ ದೇವರಿಗೆ ಪ್ರೀತಿ!

ಇವರ ಪರ ಕೆಲಸ ಮಾಡಿದಕ್ಕೆ ಸಾಕಷ್ಟು ಬಾರಿ ಮನೆಯಲ್ಲಿ ಕಣ್ಣೀರು ಹಾಕಿದ್ದೀನಿ. ವಾರದ ಹಿಂದೆ ಭೇಟಿ ಮಾಡಿ ಮೋಸ ಮಾಡಬೇಡಿ ಎಂದು ಶಾಸಕರನ್ನು ಮನವಿ ಮಾಡಿಕೊಂಡೆ. ಇವರ ನಡೆಯಿಂದ ನಮೆಗಲ್ಲಾ ಬಹಳಷ್ಟು ನೋವಾಗಿದೆ. ದೇವೇಗೌಡರು, ಕುಮಾರಸ್ವಾಮಿ ಇಬ್ಬರು ಕರೆ ಮಾಡಿ ಮಾತನಾಡಿದ್ದಾರೆ. ಇದುವರೆಗೂ ಎಲ್ಲೂ ಶಾಸಕರ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡಿಲ್ಲ. ಕುಂಟು ನೆಪ ಇಟ್ಕೊಂಡು ಬೇರೆ ಪಕ್ಷದವರನ್ನು ಖುಷಿ ಪಡಿಸುತ್ತಿದ್ದಾರೆ. ಕೋಲಾರದ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಅಂತ ಆಕ್ರೋಶ ಹೊರ ಹಾಕಿದರು.