ರಾಜ್ಯದ ಗೃಹ ಸಚಿವ ಪರಮೇಶ್ವರ ಮನೆ ಮುಂದೆ ದರೋಡೆ

Robbery near Home minister Dr G Parameshwar Sadashiv Nagar house
Highlights

ಭದ್ರತೆ ವಿಚಾರದಲ್ಲಿ ಮತ್ತೆ ಪ್ರಶ್ನೆ ಎದುರಾಗಿದೆ. ಗೃಹ ಸಚಿವರನ್ನು ನೋಡಲು ಬಂದ ವ್ಯಕ್ತಿಯೇ ದರೋಡೆಗೆ ಗುರಿಯಾಗಿದ್ದಾರೆ.  ಅದು ಗೃಹ ಸಚಿವರ ಮನೆ ಮುಂದೆಯೇ!

ಬೆಂಗಳೂರು[ಜು.11] ಗೃಹ ಸಚಿವ ಡಾ.ಜಿ.ಪರಮೇಶ್ವರ ಮನೆ ಮುಂದೆಯೇ ದರೋಡೆ ನಡೆದಿದೆ. ಗೃಹಸಚಿವ ಪರಮೇಶ್ವರ ಸದಾಶಿವನಗರ ನಿವಾಸದ ಮುಂದೆಯೇ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಲಾಗಿದೆ.

ಕಳೆದ ಜುಲೈ 6 ರಾತ್ರಿ 9.30 ರ ವೇಳೆ ನಡೆದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಗೃಹಮಂತ್ರಿಗಳ ಸ್ವಕ್ಷೇತ್ರ ಕೊರಟಗೆರೆಯಿಂದ ಬಂದಿದ್ದ ರಘು ಮನೆಯಿಂದ ಹೊರಬಂದು ಮೆಜೆಸ್ಟಿಕ್'ಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿ ನಿಂತಿದ್ದರು. ಈ ವೇಳೆ ಡಿಯೋ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಚಾಕು ತೋರಿಸಿ ದರೋಡೆ ಹಣ ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು.

ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದಾಶಿವ ನಗರದಲ್ಲಿ ರಾಜಕಾರಣಿಗಳು ಮತ್ತು ಸಿನಿಮಾ ನಟರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿಯೇ ಈ ರೀತಿ ನಡೆದರೆ ನಗರದ ಭದ್ರತೆ ಯಾವ ಮಟ್ಟದಲ್ಲಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

"

loader