Asianet Suvarna News Asianet Suvarna News

ಮೂಡಿಗೆರೆಯ ಎಂ.ಜಿ.ರಸ್ತೆ ಅಗಲೀಕರಣಕ್ಕೆ ಜನರಿಂದ ಒತ್ತಾಯ, ಜಾಗ ಬಿಟ್ಟು ಕೊಡಲು ಕಟ್ಟಡ ಮಾಲೀಕರಿಗೆ ವಾರದ ಗಡುವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಎಂ.ಜಿ.ರಸ್ತೆ ಅಗಲೀಕರಣದ ಸಭೆ, ಜಾಗ ಬಿಟ್ಟುಕೊಡಲು ಕಟ್ಟಡ ಮಾಲೀಕರಿಗೆ ವಾರದ ಗಡುವು 

Road widening spree  in Mudigere gow
Author
First Published Dec 20, 2022, 8:03 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು(ಡಿ.20): ಕಳೆದ ಅನೇಕ ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆ ಅಗಲೀಕರಣಕ್ಕೆ ಜನರಿಂದ ಒತ್ತಾಯವಿದ್ದ ಹಿನ್ನಲೆಯಲ್ಲಿ ರಸ್ತೆ ವಿಸ್ತರಣೆಗೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಕಟ್ಟಡ ಮಾಲೀಕರ ಸಭೆ ನಡೆಯಿತು. ರಸ್ತೆ ಅಗಲೀಕರಣದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. 

ಸಭೆಯಲ್ಲಿ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪ:
ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು, ಸಂಘಟನೆ ಮುಖಂಡರು ಎಂ.ಜಿ.ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಅತಿರೇಕಕ್ಕೇರಿದೆ. ಪಾದಾಚಾರಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ರಸ್ತೆ ಅಗಲೀಕರಣವಾದರೆ ವ್ಯಾಪಾರವೂ ಹೆಚ್ಚುತ್ತದೆ. ಅಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು . ಎಂ.ಜಿ.ರಸ್ತೆಯ ಸ್ಥಿತಿಯೇ ತತ್ಕೋಳ ರಸ್ತೆಗೂ ಆಗಿದೆ. ಅದನ್ನೂ ಅಗಲೀಕರಣ ಮಾಡಬೇಕೆಂದು ಹೇಳಿ ಪಟ್ಟಣ ಪಂಚಾಯಿತಿ ಯಾರ ಮಾತಿಗೂ ಮಣಯದೇ ಕಟ್ಟಡ ಮಾಲೀಕರ ಸಹಕಾರ ಪಡೆದು ದಿಟ್ಟ ನಿರ್ಧಾರ ಕೈಗೊಂಡು ಶೀಘ್ರದಲ್ಲೇ ರಸ್ತೆ ಅಗಲೀಕರಣ ಮಾಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದರು.

Chikkamagaluru: ಅಸ್ಸಾಂ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ

ಎಂ. ಜಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ: 
ಕೆಲ ಮುಖಂಡರು ರಸ್ತೆ ಅಗಲೀಕರಣ ಮಾಡದಿದ್ದರೆ ಎಂ.ಜಿ.ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಎಂ.ಜಿ.ರಸ್ತೆಯ ಕಟ್ಟಡ ಮಾಲೀಕ ಎಂ.ಎನ್. ಪ್ರಸನ್ನಕುಮಾರ್ ಮಾತನಾಡಿ, ಅಗಲೀಕರಣದ ಬಗ್ಗೆ ವರ್ತಕರ ವಿರೋಧವಿಲ್ಲ. ಆದರೆ ಕಟ್ಟಡದ ಡ್ಯಾಮೇಜಿಗೆ ನಷ್ಟಪರಿಹಾರ ನೀಡಿದಲ್ಲಿ ಕಟ್ಟಡ ತೆರವುಗೊಳಿಸಲು ನಮ್ಮ ಅಡ್ಡಿಯಿಲ್ಲ. ಕಟ್ಟಡ ಮಾಲೀಕರಿಗೆ ಇದುವರೆಗೆ ಸಭೆಗೆ ಬರಲು ಆಹ್ವಾನವಾಗಲಿ ಅಥವಾ ಕಟ್ಟಡ ತೆರೆವುಗೊಳಿಸಲು ನೋಟೀಸಾಗಲಿ ನೀಡಿರುವುದಿಲ್ಲ. ಏಕಾಏಕಿ ಸಭೆ ಕರೆಯಲಾಗಿದೆ ಎಂದು ಆರೋಪಿಸಿದರು.

Chikkamagaluru: ಸ್ಮಶಾನದ ಮಂಜೂರು ಜಾಗ ಒತ್ತುವರಿ ಆರೋಪ, ಮೂಡಿಗೆರೆ ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ.ಧರ್ಮಪಾಲ್ ಮಾತನಾಡಿ ಎಂ.ಜಿ.ರಸ್ತೆ ತೀರಾ ಕಿರಿದಾಗಿದೆ. ಇದರಿಂದ ಸಾರ್ವಜನಿಕರು ದಿನನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ.ಪಂ.ಸದ್ಯದಲ್ಲೇ ಪುರಸಭೆಯಾಗಿ ಮೇಲ್ದರ್ಜೆಗೇರಲಿದೆ. ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಒತ್ತಾಯವಿದೆ. ಪಟ್ಟಣದ ಸೌಂದರ್ಯ ಮತ್ತು ನಾಗರಿಕರ ಮತ್ತು ವರ್ತಕರ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ಎಲ್ಲರೂ ಸಹಕರಿಸಬೇಕು. ಈ ವಾರ ಪ.ಪಂ.ಯಲ್ಲಿ ನಿರ್ಣಯ ಕೈಗೊಂಡು 10 ಅಡಿ ವಿಸ್ತರಣೆಗೆ ಜಿಲ್ಲಾಧಿಕಾರಿಗಳಿಗೆ ವರದಿ ಕಳಿಸಲಾಗುವುದು. ಅಷ್ಟರೊಳಗೆ ವರ್ತಕರು ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಮನವಿ ಮಾಡಿದರು.

Follow Us:
Download App:
  • android
  • ios