Asianet Suvarna News Asianet Suvarna News

River Rafting: ದುಬಾರೆಯಲ್ಲಿ ಸಂಭ್ರಮಿಸಿದ ಪತ್ರಕರ್ತರು

ಹಲವು ವರ್ಷಗಳಿಂದ ಕೊರೊನಾ, ಮಳೆ ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ರಿವರ್ ರಾರಯಫ್ಟಿಂಗ್ ಇದೀಗ ಚೇತರಿಸಿಕೊಳ್ಳುತ್ತಿ ಎಲ್ಲ ಅಗತ್ಯಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಜ್ಜಕಾಗಿದೆ

River Rafting in Dubare: Celebrated Journalistsrav
Author
Mangalore, First Published Jul 25, 2022, 12:40 PM IST

ಮಡಿಕೇರಿ (ಜ.25} :  ಕೊಡಗು ಪ್ರೆಸ್‌ಕ್ಲಬ್‌, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದುಬಾರೆ ರಿವರ್‌ ರಾರ‍ಯಫ್ಟಿಂಗ್‌ ಅಸೋಸಿಯೇಷನ್‌ ವತಿಯಿಂದ ಕೊಡಗಿನ ಪತ್ರಕರ್ತರಿಗೆ ದುಬಾರೆ ರಿವರ್‌ ರಾರ‍ಯಫ್ಟಿಂಗ್‌ ನಡೆಯಿತು.f ಕಾವೇರಿ ನದಿಯಲ್ಲಿ 7 ಕಿ.ಮೀ. ದೂರ ನಡೆದ ರಾರ‍ಯಫ್ಟಿಂಗ್‌ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 63 ಪತ್ರಕರ್ತರು ಪಾಲ್ಗೊಂಡಿದ್ದರು.

ಕೊಡಗು ಪ್ರೆಸ್‌ ಕ್ಲಬ್‌(Kodagu Prress Club) ಉಪಾಧ್ಯಕ್ಷ ಚೀಯಂಡಿ ತೇಜಸ್‌(Cheeyandi Tejas) ಪಾಪಯ್ಯ ಸಂಚಾಲಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದುಬಾರೆ ರಿವರ್‌ ರಾರ‍ಯಫ್ಟಿಂಗ್‌ ಅಸೋಸಿಯೇಷನ್‌ ಅಧ್ಯಕ್ಷ ವಿಜು ಚಂಗಪ್ಪ(Viju Chengappa), ದುಬಾರೆಯಲ್ಲಿ ಸಾಕಾನೆ ಶಿಬಿರದತ್ತ ತೆರಳಲು ನೀರು ಇದ್ದ ಸಮಯದಲ್ಲಿ ಮಾತ್ರ ಮೋಟಾರ್‌ ಬೋಟ್‌ ಬಳಸಲಾಗುತ್ತಿದೆ. ಬೇರೆ ಸಮಯದಲ್ಲಿ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಹಾಗೂ ಸ್ಥಳೀಯ ರಿಗೆ ಅನುಕೂಲವಾಗಲಿದೆ ಎಂದರು.

20 ವರ್ಷಗಳಿಂದ ದುಬಾರೆಯಲ್ಲಿ ರಾರ‍ಯಫ್ಟಿಂಗ್‌ ನಡೆಸಿಕೊಂಡು ಬರಲಾಗುತ್ತಿದೆ.  ಹಲವು ಬಾರಿ ಪ್ರಕೃತಿ ವಿಕೋಪ(Natural disaster), ಕೊರೋನಾ(Corna)ದ ಹರಡಿ ರಾಜ್ಯಾದ್ಯಂತ ಕರ್ಫ್ಯೂ ವಿಧಿಸಿದ್ದ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು ಬಳಿಕ  ರಾರ‍ಯಫ್ಟಿಂಗ್‌ ಸ್ಥಗಿತದಿಂದಾದ ನಷ್ಟದ ಬಳಿಕ ಈಗ ಚೇತರಿಕೆ ಕಾಣುತ್ತಿದ್ದೇವೆ. ರಾರ‍ಯಫ್ಟಿಂಗ್‌ ಸಮಯದಲ್ಲಿ ನುರಿತ ಗೈಡ್‌ಗಳಿಂದ ಪ್ರವಾಸಿಗರಿಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ ಲೈಫ್‌ ಜಾಕೆಟ್‌, ಹೆಲ್ಮೆಟ್‌ ಸೇರಿದಂತೆ ಅಗತ್ಯವಿರುವಂಹ ಎಲ್ಲ ಜೀವರಕ್ಷಕಗಳನ್ನು ಧರಿಸುವಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್‌. ಸವಿತಾ ರೈ(B.R.Savita Rai) ಮಾತನಾಡಿದರು. ಕೊಡಗು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್‌, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್‌ ಕುಮಾರ್‌, ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯ ಸುನಿಲ್‌ ಪೊನ್ನೆಟ್ಟಿ, ದುಬಾರೆ ರಾರ‍ಯಫ್ಟಿಂಗ್‌ ಅಸೋಸಿಯೇಷನ್‌ ನಿರ್ದೇಶಕರಾದ ಶಿವರಾಮು, ವಿಜು ಗಣಪತಿ, ಪ್ರಫುಲ್ಲ ಮತ್ತಿತರರು ಇದ್ದರು.

Follow Us:
Download App:
  • android
  • ios