Asianet Suvarna News Asianet Suvarna News

ನಿವೃತ್ತ ಶಿಕ್ಷಕನಿಂದ ದಯಾಮರಣಕ್ಕೆ ಪತ್ರ

ನಿವೃತ್ತ ಶಿಕ್ಷಕರೋರ್ವರು ತಮಗೆ ದಯಾ ಮರಣ ಕರುಣಿಸಬೇಕು ಎಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಜೀವನ ನಡೆಸುವುದು ಕಷ್ಟವಾಗಿದ್ದು ಈ ನಿಟ್ಟಿನಲ್ಲಿ ಮರಣ ಕಲ್ಪಿಸಲು ಕೋರಿದ್ದಾರೆ.

retired Teacher Letter To President For Mercy Death
Author
Bengaluru, First Published Sep 7, 2020, 7:06 AM IST

ರಾಯಚೂರು (ಸೆ.07): ಇಲ್ಲಿನ ಎನ್‌ಜಿಒ ಶಾಲೆ ನಿವೃತ್ತ ಶಿಕ್ಷಕ ಸಂಗಯ್ಯ ಸೊಪ್ಪಿಮಠ ರಾಷ್ಟ್ರಪತಿಗೆ ದಯಾಮರಣ ಪತ್ರ ಬರೆದಿದ್ದು, ‘ಸರ್ಕಾರದ ತಾರತಮ್ಯ ಮತ್ತು ವಿಳಂಬ ಧೋರಣೆಯಿಂದ ನನಗೆ ಈ ಪರಿಸ್ಥಿತಿ ತಲೆದೂರಿದೆ. 

ಪಿಂಚಣಿ ಇಲ್ಲದೇ ಅಸಮರ್ಥವಾಗಿ ಬದುಕುವ ಅರ್ಹತೆ ಇಲ್ಲ ಎಂಬ ಕಾರಣಕ್ಕೆ ದಯಾಮಯರಾದ ತಾವುಗಳು ನನ್ನ ಸೇವೆ ಪರಿಗಣಿಸಿ ಪಿಂಚಣಿ ದೊರಕಿಸಲು ಸರ್ಕಾರಕ್ಕೆ ಆದೇಶ ಮಾಡಬೇಕು ಎಂದು ಕೋರುತ್ತೇನೆ. 

ಸಾಧ್ಯವಾಗದೇ ಇದ್ದಲ್ಲಿ ಕೊನೆ ಪಕ್ಷ ದಯಾಮರಣ ದಯಪಾಲಿಸಿ ಅಸಮರ್ಥ ಬದುಕಿಗೆ ದಾರಿದೀಪವಾಗಲು ಕೋರುತ್ತೇನೆ’ ಎಂದಿದ್ದಾರೆ.

ಇಲ್ಲಿನ ಶಿಕ್ಷಕರು ಪಿಎಂ ಮೋದಿಗಿಂತಲೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ!

ಬರೆದ ದಯಾಮರಣ ಪತ್ರದ ಕೊನೆ ಸಾಲುಗಳಾಗಿವೆ. ಅನುದಾನಿತ ಶಾಲೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಪಿಂಚಣಿ ಸೇರಿ ಹಲವು ರೀತಿಯ ಸವಲತ್ತುಗಳು ಸಿಗುತ್ತಿಲ್ಲ. 

ಪಿಂಚಣಿ ಇಲ್ಲದೇ ಇಳಿವಯಸ್ಸಿನಲ್ಲಿ ಜೀವ ನಿರ್ವಹಣೆ ಕಷ್ಟಸಾಧ್ಯವಾಗಿದ್ದು ಪಿಂಚಣಿ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಆದೇಶ ನೀಡುವಂತೆ ನಿವೃತ್ತ ಶಿಕ್ಷಕ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow Us:
Download App:
  • android
  • ios