Asianet Suvarna News Asianet Suvarna News

ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ: ಶಿವಾನಂದ ಜಾಮದಾರ

ಲಿಂಗಾಯತ ಹೋರಾಟ ರಾಜಕೀಯ ರಹಿತ, ಯಾವುದೇ ಪಕ್ಷ ಬಂದರೂ ಇದು ನಿಲ್ಲದು. ಇದಕ್ಕೆ ಪಕ್ಷ ಸಂಬಂಧವಿಲ್ಲ| ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಬಸವಭೂಷಣ ಪ್ರಶಸ್ತಿ ಸ್ವೀಕರಿಸಿದ ಜಾಮದಾರ| ನಮ್ಮ ಲಿಂಗಾಯತ ಹೋರಾಟಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದರೂ ಲಿಂಗಾಯತ ಮಹಾಸಭಾಕ್ಕೆ ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ|

Retired IAS Officer Shivanand Jamadar Talks Over Lingayat Strugle
Author
Bengaluru, First Published Jan 11, 2020, 11:32 AM IST
  • Facebook
  • Twitter
  • Whatsapp

ಅಥಣಿ(ಜ.11): ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಇದು ರಾಜಕೀಯ ರಹಿತ. ಯಾವುದೇ ಪಕ್ಷ ಬಂದರೂ ಇದು ನಿಲ್ಲದು. ಇದಕ್ಕೆ ಪಕ್ಷ ಸಂಬಂಧವಿಲ್ಲ ಎಂದು ಲಿಂಗಾಯತ ಚಳವಳಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದ್ದಾರೆ. 

ಅಥಣಿಯ ಮೋಟಗಿ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ನಡೆದ ಬಸವಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಲಿಂಗಾಯತ ಹೋರಾಟಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದರೂ ಲಿಂಗಾಯತ ಮಹಾಸಭಾಕ್ಕೆ ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಯಾವ ಕಾಲಕ್ಕೂ ಈ ಹೋರಾಟ ನಿಲ್ಲುವುದಿಲ್ಲ. ಇದು ರಾಜಕೀಯ ರಹಿತವಾಗಿದೆ. ಯಾವುದೇ ಪಕ್ಷ ಬಂದರೂ ಇದು ನಿಲ್ಲದು. ಇದಕ್ಕೆ ಪಕ್ಷ ಸಂಬಂಧವಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾಗತಿಕ ಲಿಂಗಾಯತ ಸಭಾ ತಾತ್ವಿಕ ಹೋರಾಟ ಮಾಡುತ್ತಿದೆ. ಇಲ್ಲಿ ರಾಜಕಾರಣಕ್ಕೆ ಅವಕಾಶ ಇಲ್ಲ. ಲಿಂಗಾಯತ ಸ್ವತಂತ್ರ ಧರ್ಮ. ಇದಕ್ಕೆ ಸರ್ಕಾರದ ಮಾನ್ಯತೆ ಸಿಗಬೇಕು ಎಂದು ಆಗ್ರಹಿಸಿದರು. ಬಸವಣ್ಣವರು ತಮ್ಮ ಅನುಭವ ಮಂಟಪದ ಮೂಲಕ ಪ್ರಥಮ ಬಾರಿಗೆ ಪ್ರಜಾಸತಾತ್ಮಕ ವ್ಯವಸ್ಥೆಯ ಕಲ್ಪನೆ ನೀಡಿದರು. ಮಾನವ ಹಕ್ಕುಗಳ ಅರಿವು ಮೂಡಿಸಿರುವ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ ಎಂದ ಅವರು, ಶರಣರ ವಚನಗಳು ಜನರಲ್ಲಿ ಇಂದು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿಲ್ಲ. ಕಾರಣ ಸಮಾಜ ಚಿಂತಕರಾದಿಯಾಗಿ ಮಠಾಧೀಶರವರೆಗೆ ನುಡಿದಂತೆ ನಡೆ ಇಲ್ಲವಾಗಿದೆ. ಇದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು. 

ಸುಮಾರು 98 ವರ್ಷಗಳ ಹಿಂದೆ ವಚನ ಸಾಹಿತ್ಯ ಬೆಳಕಿಗೆ ಬಂತು. ಅದಕ್ಕಿಂತ ಪೂರ್ವದಲ್ಲಿ ಶೂನ್ಯ ಸಂಪಾದನೆ ಎಂಬ ಗ್ರಂಥಗಳು ಇದ್ದವು. ಅದರಲ್ಲಿ ಕೆಲವು ವಚನಗಳನ್ನು ತಪ್ಪಾಗಿ ಮುದ್ರಿಸಿದ್ದರು ಎಂದು ಹೇಳಿದ ಅವರು, 1922 ರಲ್ಲಿ ಪ್ರಥಮ ಬಾರಿಗೆ ವಚನಗಳನ್ನು ಜಾಗೃತಿ ಮೂಡಿಸಿ ಬೆಳಕು ಚೆಲ್ಲಿದ ಕೀರ್ತಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಅದಾದ ನಂತರ 1963 ರಲ್ಲಿ 1993, ಹಾಗೂ 2016 ರಲ್ಲಿ ಕರ್ನಾಟಕ ಸರ್ಕಾರ ವಚನ ಸಾಹಿತ್ಯ ಮುದ್ರಿಸಿದೆ ಎಂದು ಹೇಳಿದರು. 

ಈಗ ಸಾಕಷ್ಟು ಜಾಗೃತಿ ಮೂಡುತ್ತಿದೆ. ವಿಶ್ವದ ಎಲ್ಲ ಕಡೆ ಪಸರಿಸುತ್ತಿದೆ. ಇಂದು ಕರ್ನಾಟಕ ಮಹಾರಾಷ್ಟ್ರ ಆಂಧ್ರ ಸೇರಿ ಸುಮಾರು 7 ಸಾವಿರ ಮೂರ್ತಿಗಳ ಬಸವಣ್ಣನ ಮೂರ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಯಾಗಿವೆ ಎಂದು ಹೇಳಿದರು. ನಮ್ಮ ಪಾರ್ಲಿಮಂಟ್‌ದಲ್ಲಿ ಬಸವಣ್ಣನವರ ಮೂರ್ತಿ ಇದೆ. ಅಲ್ಲದೆ ಅನುಭವ ಮಂಟದ ಚಿತ್ರ ಇದೆ. ಯಾರು ಎಷ್ಟೇ ಅಡ್ಡಿ ಮಾಡಿದರೂ ವಚನ ಸಾಹಿತ್ಯ ಪ್ರಚಾರ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. 

ಇನ್ನೋರ್ವ ಪ್ರಶಸ್ತಿ ಪಡೆದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ಯಾವ ಕಾಲಕ್ಕೂ ನಿಲ್ಲದು. ಇದಕ್ಕಾಗಿ ಸಾಕಷ್ಟು ದಾಖಲೆಗಳನ್ನು ಡಾ.ಶಿವಾನಂದ ಜಾಮದಾರ ಅವರು ಸಂಗ್ರಹ ಮಾಡಿದ್ದಾರೆ. ಅವರ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ಹೇಳಿದರು. ನೆರೆ ಮಹಾರಾಷ್ಟ್ರದಲ್ಲಿ ಪಂಚಾಯತ್ ಪ್ರಭಾವ ಇತ್ತು. ಅಲ್ಲಿ ನಾವು ಮನೆ ಮನೆಗೆ ಹೋಗಿ ಶರಣ ಮತ್ತು ಬಸವಣ್ಣವರ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿದ್ದೆವು. ಅಲ್ಲಿ ಯಶಸ್ವಿ ಕೂಡ ಕಂಡೆವು ಎಂದು ಹೇಳಿದರು. 

ಲಿಂಗಾಯತ ಧರ್ಮಕ್ಕೆ ಸರ್ಕಾರದ ಮಾನ್ಯತೆ ಸಿಗಲಿ ಬಿಡಲಿ ಇದು ಸ್ವತಂತ್ರ ಧರ್ಮ. ಸರ್ಕಾರದ ಮಾನ್ಯತೆ ಅವಶ್ಯಕತೆ. ಏಕೆಂದರೆ ಇದು ಜಾಗತಿಕ ಧರ್ಮ ಸ್ಥಾನಮಾನ ಸಿಗುವುದು ಎಂದು ಗದಗದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು. 

ಇಂದು ಡಾ.ಶಿವಾನಂದ ಜಾಮದಾರ ಅವರು ನಡೆಸುತ್ತಿರುವ ಲಿಂಗಾಯತ ಧರ್ಮ ಹೋ ರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಶ್ರೀಗಳು, ಲಿಂಗಾಯತ ಮಹಾಸಭಾಕ್ಕೆ ಸದಸ್ಯರಾಗ ಬೇಕೆಂದು ಕರೆ ನೀಡಿದರು. ಕೆಲವು ಮಠಾಧೀಶರು ಕೆಲವು ಮೂಢನಂಬಿಕೆಯಿಂದ ಸಮಾಜದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು.

ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ವಹಿಸಿದ್ದರು. ಸಭೆಯ ಪಾವನ ಸಾನ್ನಿಧ್ಯವನ್ನು ಗದುಗಿನ ಡಾ.ತೋಟಂದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆ ಮೇಲೆ ಪ್ರಕಾಶ ಕಂತ್ತಳ್ಳಿ, ಕೃಷ್ಣಮೂರ್ತಿ, ಅರುಣ ಯಲಗು ದ್ರಿ, ಬಿ.ಎಲ್.ಪಾಟೀಲ, ಮಹಾಂತ ದೇವರು ವಿರಕ್ತಮಠ ಶೇಗುಣಸಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios