Asianet Suvarna News Asianet Suvarna News

Kodagu News: ವಿಶೇಷಚೇತನರಿಗೆ ತೊಡಕಾಗಿರುವ ಸರ್ಕಾರದ ಮಾನದಂಡ ನಿರ್ಬಂಧ

ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಆದರೆ ಸರ್ಕಾರದ ಕೆಲ ಮಾನದಂಡಗಳು ಫಲಾನುಭವಿಗಳು ಯೋಜನೆ ಫಲ ಪಡೆಯಲು ತೊಡಕಾಗುತ್ತಿರುವುದು ಕಂಡು ಬಂದಿದೆ.

Restrictions on government standards that are difficult for the Handicapped rav
Author
First Published Jan 20, 2023, 7:27 AM IST

ಎಂ.ಬಿ. ವಿನ್ಸೆಂಟ್‌

ಸುಂಟಿಕೊಪ್ಪ (ಜ.20) : ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಆದರೆ ಸರ್ಕಾರದ ಕೆಲ ಮಾನದಂಡಗಳು ಫಲಾನುಭವಿಗಳು ಯೋಜನೆ ಫಲ ಪಡೆಯಲು ತೊಡಕಾಗುತ್ತಿರುವುದು ಕಂಡು ಬಂದಿದೆ.

ದುರಾದೃಷ್ಟಕರ ವಿಚಾ​ರ​ವಂದರೆ ಶೇ.75ರಷ್ಟುವಿಕ​ಲ​ಚೇ​ತ​ನ​ರಿಗೆ ಯಂತ್ರಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ನೀಡಲಾಗುತ್ತಿದ್ದು ಕೊಡಗಿಗೆ ಕೇವಲ 5 ದ್ವಿಚಕ್ರ ವಾಹನ ಅನುದಾನ ಲಭ್ಯವಿದೆ. ಸೇವಾಸಿಂಧು ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಕೂಡ ನೀಡಲಾಗುತ್ತಿದ್ದು, ಇದನ್ನು ಪಡೆಯುವಲ್ಲಿ ಫಲಾನುಭವಿಗಳು ಹರಸಾಹಸ ಪಡುತ್ತಿರುವುದು ಜಿಲ್ಲಾಡಳಿತಕ್ಕೂ ಗೊತ್ತು. ವಿಕಲಚೇತನರ ಇಲಾಖೆಗೂ ತಿಳಿದಿದೆ. ಆದರೂ ಫಲಾ​ನು​ಭ​ವಿ​ಗ​ಳನ್ನು ಯೋಜ​ನೆ​ಗಳು ತಲ​ಪು​ತ್ತಿ​ಲ್ಲ.

'ಕರ್ನಾಟಕದ ಕಾಶ್ಮೀರ' ಮಡಿಕೇರಿ ರಸ್ತೆಗಳು ಗುಂಡಿಮಯ; ದುರಸ್ತಿ ಭಾಗ್ಯ ಎಂದು?

ಇತ್ತೀಚೆಗೆ ವಿಕಲಚೇತನ ಸಂಸ್ಥೆಯೊಂದರಲ್ಲಿ ಕೃತಕಕಾಲು ಅಳವಡಿಕೆ ಶಿಬಿರದಲ್ಲಿ 26 ಮಂದಿ ಕಾಲು ಅಳವಡಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಯಂತ್ರ ಚಾಲಿತ ವಾಹನದ ಅವಶ್ಯಕತೆ ಇದೆ. ಆದರೆ, ಇವರಲ್ಲಿ ಕೇವಲ 5 ಮಂದಿ ಫಲಾನುಭವಿಗಳನ್ನು ಮಾತ್ರ ಆರಿ​ಸು​ವು​ದಿ​ದ್ದರೆ ಯಾವ ಮಾನ​ದಂಡ ಬಳ​ಸ​ಬೇಕು ಎಂಬು​ದಕ್ಕೆ ಇಲಾ​ಖಾ​ಧಿ​ಕಾ​ರಿ​ಗಳು ಉತ್ತ​ರಿ​ಸ​ಬೇಕಿದೆ.

ವಿಶೇಷ ಚೇತನರ ಹೆಣ್ಣುಮಕ್ಕಳಿಗೆ ಅದರಲ್ಲೂ ಶ್ರವಣದೋಷವಿರುವವರಿಗೆ ಟೈಲರಿಂಗ್‌ ವೃತ್ತಿ ಕಲಿತು ಸರ್ಟಿಫಿಕೆಟ್‌ ಪಡೆ​ದು​ಕೊಂಡರೆ ವಿಶೇಷ ಚೇತನ ಇಲಾಖೆಯಿಂದ ಉಚಿತವಾಗಿ ಟೈಲರಿಂಗ್‌ ಯಂತ್ರ ನೀಡಲಾಗುತ್ತದೆ. ಈ ಯೋಜನೆಯ ಫಲ ಪಡೆಯಬೇಕಾದರೆ. ಫಲಾನುಭವಿ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕೆಂಬ ಶರತ್ತು ಇದೆ.

ಆದರೆ, ಈ ಪ್ರಯೋ​ಜ​ನಕ್ಕೆ ಅರ್ಹ​ರಾ​ದ ಪ್ರಾಥಮಿಕ ಶಿಕ್ಷಣ ಹಾಗೂ 8ನೇ ತರಗತಿ ಪಾಸಾದ ಅನೇಕ ಮಹಿಳೆಯರು ಟೈಲರಿಂಗ್‌ ವೃತ್ತಿ ತರಬೇತಿ ಪಡೆದವರು ಇದ್ದಾರೆ, ಅವರು ಸರ್ಕಾರದ ಅವೈ​ಜ್ಞಾ​ನಿಕ ಶರ​ತ್ತು​ಗ​ಳಿಂದಾಗಿ ಸವ​ಲ​ತ್ತು​ಗ​ಳಿಂದ ವಂಚಿ​ತ​ರಾ​ಗು​ತ್ತಿ​ದ್ದಾ​ರೆ. ದ್ವಿಚಕ್ರ ವಾಹನ ಪಡೆಯಬೇಕಾದರೆ ವಿಶೇಷ ಚೇತನರು ಆದಾಯ ಮಿತಿ ನಿಗದಿಗೊಳಿಸಿದ್ದು ಸಹ ಸರಿಯಾದ ಕ್ರಮವಲ್ಲ. ಇದರಿಂದ ನೊಂದ ವಿಶೇಷಚೇತನರು ಸರ್ಕಾರದ ಸೌಲಭ್ಯ ಪಡೆ​ಯಲು ಅನಾ​ನು​ಕೂ​ಲ​ವಾ​ಗು​ತ್ತ​ದೆ.

ಶೇ.75 ಅಂಗನ್ಯೂನತೆ ಇದ್ದರೆ ಮಾತ್ರ ಆರ್ಹ ಮಾಸಾಶನ ನೀಡುವ ಕ್ರಮವು ಸರಿಯಲ್ಲ ಜಿಲ್ಲಾ ಸರ್ಕಾರಿ ಆಸ್ಪ​ತ್ರೆ​ಯಲ್ಲಿ ವೈದ್ಯರು ವಿಶೇಷಚೇತನರನ್ನು ಪರೀಕ್ಷಿಸಿ ದೃಢೀಕರಣ ಪತ್ರ ನೀಡುವುದಲ್ಲದೆ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ವೈದ್ಯರು ವಿಶೇಷಚೇತರನ್ನು ಪರಿಶೀಲಿಸಿ ಸರ್ಟಿಫಿಕೇಟ್‌ ನೀಡಬೇಕೆಂದು ನೊಂದವರು ಆಗ್ರಹಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ತಲ​ಪು​ವಿಕೆ ಇಲ್ಲ:

ಇಲಾಖೆಯಲ್ಲಿ ತಾಲೂಕು ಮಟ್ಟದ ಪೂರ್ಣ ಪ್ರಮಾಣದಲ್ಲಿ ಕಚೇರಿಯಾಗಲಿ ಸಹಾಯಕ ನಿರ್ದೇಶಕಾಗಲಿ ಇಲ್ಲದಿರುವುದು ಜಿಲ್ಲಾ ಕಚೇರಿಯ ಮೇಲೆ ಒತ್ತಡ ಬೀಳಲು ಸರ್ಕಾರದ ಉದ್ದೇಶಗಳು ವಿಫಲವಾಗಲು ಕಾರಣವಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮ ಸಭೆಗಳಲ್ಲಿ ರಾಜಕೀಯ ಮೇಲಾಟ ಮತ್ತು ವೈಯಕ್ತಿಕ ಆರೋಪ ಮತ್ತು ಪ್ರತ್ಯಾರೋಪಗಳನ್ನು ಬದಿಗಿಟ್ಟು ಮಾನ​ವೀ​ಯತೆ ದೃಷ್ಟಿ​ಯಿಂದ ಈ ಕುರಿತು ಗಂಭೀರ ಚರ್ಚೆ ನಡೆಸಿ ಕೆಲವು ಜಲ್ವಂತ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯನೀಡುವುದು ಅತ್ಯವಶ್ಯಕವಾಗಿದೆ.

ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯಿತಿಗಳಿದ್ದು ಸರಿಸುಮಾರು 75 ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರನ್ನು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವತಂತ್ರರಾಗಿಸಿ ಮುಖ್ಯವಾಹಿನಿಗೆ ತರಲು ಸರ್ಕಾರ ವಿಶೇಷ ಸಹಾಯಕರನ್ನು ನೇಮಿಸಿದೆ. ಇವರಿಗೆ ಪ್ರತಿ ಪಂಚಾಯಿತಿಯ ವಾರ್ಡ್‌ವಾರ್‌ ಅಂಕಿ ಅಂಶಗಳಿದ್ದು ಹೋಬಳಿ ಮಟ್ಟದ ಅಥವಾ ಪಂಚಾಯಿತಿ ಮಟ್ಟದ ವಿಶೇಷ ಗ್ರಾಮ ಸಭೆ ನಡೆದಾಗ ಯಾರಿಗೆ ಯಾವುದು ಆದ್ಯತೆ ಎಂಬುದು ಅತ್ಯಂತ ನಿಖರವಾಗಿ ಹೇಳಲು ಸಾಧ್ಯವಿದೆ. ಆದರೂ ಸರ್ಕಾರದ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಯಕ್ಷ ಪ್ರಶ್ನೆಗೆ ಉತ್ತರಿಸುವ ಧರ್ಮರಾಯ ಯಾರೆಂಬುದನ್ನು ಕಾದು ನೋಡಬೇಕಾಗಿದೆ.

BIG-3 Impact: ಕಷ್ಟದಲ್ಲಿದ್ದ ತಾಯಿ ಮಗನಿಗೆ ನೆರವಾದ ಕನ್ನಡದ ಜನತೆ: ದಾನಿಗಳಿಂದ ಭರಪೂರ ಧನಸಹಾಯ

ವಿಶೇಷ ಚೇತನರ ಕಚೇರಿಯೇ ಅವರಿಗೆ ಸಹಾಯ ಮಾಡಲು ಪೂರಕವಾಗಿಲ್ಲ. ಸಮಸ್ಯೆ ಹೇಳಿಕೊಳ್ಳಲು ಬೇಕಿರುವ ಕಟ್ಟಡವೇ ಸೌಲಭ್ಯರಹಿತವಾಗಿದೆ. ಮೊದಲು ಅದನ್ನು ಬದಲಾವಣೆ ಮಾಡಬೇಕಿದೆ. ವಿಶೇಷಚೇತನರು ಜಿಲ್ಲಾಧಿಕಾರಿಗಳ ಕಚೇರಿಗೂ ತೆರಳಕ್ಕಾಗದ ಪರಿಸ್ಥಿತಿ ಇದೆ. ಹೊಸ ಕಾನೂನನ್ವಯ ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ವಿಶೇಷಚೇತನರಿಗೆ ಪೂರಕವಾದ ಸೌಲಭ್ಯ ಒದಗಿಸಬೇಕು. ಆದರೆ ಇಲ್ಲಿ ಎಲ್ಲಿಯೂ ಅಂತಹ ವ್ಯವಸ್ಥೆಗಳೇ ಇಲ್ಲ. ಟೆಟೆಕ್ಟ್ ಫೆä್ರೕರಿಂಗ್‌ ಕೂಡ ಇಲ್ಲ. ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಕಾಳಜಿವಹಿಸುವ ಅವಶ್ಯಕತೆಯಿದೆ.

ಡಾ. ದೀಪ ವಿ., ಅಸೋಸಿಯೇಟ್‌ ಪ್ರೊಫೆಸರ್‌, ಮೆಡಿಕಲ್‌ ಕಾಲೇಜ್‌, ಮಡಿಕೇರಿ.

Follow Us:
Download App:
  • android
  • ios