ಮೈಸೂರು (ಅ.28): ಕೊರೋನಾ ಮಹಾಮಾರಿ ಸಂಕಷ್ಟದ ನಡುವೆಯೂ ಜರುಗಿದ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಯು ಮಂಗಳವಾರ ಜಳಕ ಮಾಡಿ ಪೌಷ್ಟಿಕ ಆಹಾರ ಸೇವಿಸಿ ವಿಶ್ರಾಂತಿಯಲ್ಲಿದ್ದವು.

ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯು, ಕುಮ್ಕಿ ಆನೆಗಳಾಗಿ ಸಾಗಿದ ವಿಜಯ ಮತ್ತು ಕಾವೇರಿ, ನಿಶಾನೆ ಆನೆ ಗೋಪಿ ಹಾಗೂ ನೌಫತ್‌ ಆನೆ ವಿಕ್ರಮ ಅರಮನೆ ಆವರಣದ ಆನೆ ಬಿಡಾರದಲ್ಲಿ ಫುಲ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದವು. ಕಳೆದ 25 ದಿನಗಳಿಂದ ಮೈಸೂರು ಅರಮನೆ ಆವರಣದಲ್ಲಿ ಬಿಡು ಬಿಟ್ಟಿರುವ ಗಜಪಡೆಯು ಅ.28 ರಂದು ನಾಡಿನಿಂದ ಕಾಡಿಗೆ ವಾಪಸ್‌ ಹೋಗಲು ಸಿದ್ಧವಾಗಿವೆ. ಅಭಿಮನ್ಯು ಆನೆಯು ಮತ್ತಿಗೋಡು ಆನೆ ಶಿಬಿರಕ್ಕೆ, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಯು ದುಬಾರೆ ಆನೆ ಶಿಬಿರಕ್ಕೆ ಹೋಗಲಿವೆ.

ಹರಕೆ ಹೊತ್ತು 9 ದಿನವೂ ಕುಟುಂಬದ ಜೊತೆ ಪಲ್ಲಕ್ಕಿ ಎಳೆದ ರೋಹಿಣಿ ಸಿಂಧೂರಿ

ಮಾವುತರಿಗೆ ಗೌರವ ಧನ ವಿತರಣೆ:  ಜಂಬೂಸವಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗಳಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ತಲಾ 10 ಸಾವಿರ ರು. ಗೌರವಧನ ವಿತರಿಸಿದ್ದಾರೆ. 

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' .

ಸಚಿವರು ಮೈಸೂರು ಅರಮನೆ ಆವರಣದಲ್ಲಿ ಶ್ರೀಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಪೂಜೆ ಸಲ್ಲಿಸಿ ಕಬ್ಬು, ಹಣ್ಣು, ಬೆಲ್ಲ ನೀಡಿದರು.