Bagalkot : ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಿ ಇಲ್ಲವೇ ರಾಜಿನಾಮೆ ನೀಡಿ: ಟಿರಕಿ
ಕೆಎಚ್‌ಡಿಸಿ ನಿಗಮದ ಅಧ್ಯಕ್ಷರಾಗಿ, ಕ್ಷೇತ್ರದ ಶಾಸಕರಾಗಿ ಜವಾಬ್ದಾರಿ ವಹಿಸಿರುವ ಸಿದ್ದು ಸವದಿ ಬೇಜವಾಬ್ದಾರಿಯುತ ಮಾತುಗಳಿಂದ ನೇಕಾರ ಸಮುದಾಯವನ್ನು ಅವಮಾನಿಸಿದ್ದಲ್ಲದೆ, ತಮ್ಮ ನಿಸ್ಸಹಾಯಕತೆ ಹೊರಹಾಕಿರುವುದನ್ನು ರಾಜ್ಯ ನೇಕಾರ ಸೇವಾ ಸಂಘ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ.
ರಬಕವಿ-ಬನಹಟ್ಟಿ (ನ.14): ಕೆಎಚ್‌ಡಿಸಿ ನಿಗಮದ ಅಧ್ಯಕ್ಷರಾಗಿ, ಕ್ಷೇತ್ರದ ಶಾಸಕರಾಗಿ ಜವಾಬ್ದಾರಿ ವಹಿಸಿರುವ ಸಿದ್ದು ಸವದಿ ಬೇಜವಾಬ್ದಾರಿಯುತ ಮಾತುಗಳಿಂದ ನೇಕಾರ ಸಮುದಾಯವನ್ನು ಅವಮಾನಿಸಿದ್ದಲ್ಲದೆ, ತಮ್ಮ ನಿಸ್ಸಹಾಯಕತೆ ಹೊರಹಾಕಿರುವುದನ್ನು ರಾಜ್ಯ ನೇಕಾರ ಸೇವಾ ಸಂಘ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ. ಅಲ್ಲದೇ, ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ನಿಗಮ ಅಧ್ಯಕ್ಷ ಹಾಗು ಶಾಸಕ ಸ್ಥಾನಕ್ಕೆ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ನೇಕಾರ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಎಚ್ಚರಿಕೆ ನೀಡಿದರು.
ಬನಹಟ್ಟಿಯಲ್ಲಿ ಕೆಎಚ್‌ಡಿಸಿ ಪ್ರಧಾನ ಕಚೇರಿಯಲ್ಲಿ ನೇಕಾರ ಸಂಘಟನೆಯೊಂದಿಗೆ ಮಾತನಾಡಿದ ಅವರು, ನೇಕಾರರು ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಶಾಸಕರು ನಿನ್ನೆ ನಡೆದ ಹೋರಾಟದಲ್ಲಿನ ನೇಕಾರರು ಯಾವ ಪಕ್ಷದಿಂದ ಅಥವಾ ಯಾರ ಮನೆಗೆ ಮತ ಕೇಳುವ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಲಿ. ಬದಲಾಗಿ ತಮ್ಮ ಅಶಕ್ತತೆಯನ್ನು ಈ ರೀತಿ ಹೊರಹಾಕುವುದು ಸರಿಯಲ್ಲ. ಹೋರಾಟ ಮಾಡುವವರು ನೇಕಾರರೇ ಅಲ್ಲವೆಂದು ಹೇಳುತ್ತಿರುವುದು ಅಸಂಬದ್ಧ ಮಾತು. ಹೋರಾಟಗಾರರ ಮನೆಗಳಿಗೆ ತೆರಳಿ ವೀಕ್ಷಣೆ ಮಾಡಲಿ. ಬದಲಾಗಿ ಹತಾಶ ಭಾವದಿಂದ ಸರ್ಕಾರದ ಜನಪ್ರತಿನಿಯಾಗಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ನೇಕಾರರಿಗೆ ದೊರಕಬೇಕಾದ ನ್ಯಾಯಯುತ ಹಕ್ಕುಗಳನ್ನು ಒದಗಿಸುವ ನಿಟ್ಟಿನಲ್ಲಿ ನೇಕಾರ ಪರ ಕಾರ್ಯ ನಡೆಸಬೇಕಿತ್ತು. ಆದರೆ, ನೇಕಾರರು ನಮ್ಮ ವಿರೋಧಿಗಳೆಂದು ಅರಿತು ಮಾತನಾಡುತ್ತಿರುವುದು ಸರಿಯಲ್ಲ ಎಂದು ಟಿರಕಿ ಶಾಸಕರನ್ನು ಟೀಕಿಸಿದರು.
ಶೀಘ್ರವೇ ಕೆಎಚ್‌ಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಅಧ್ಯಕ್ಷರೂ ಆಗಮಿಸಿ, ಇಲ್ಲಿನ ಸುಮಾರು 500 ಫಲಾನುಭವಿಗಳು ವಾಸ ಮಾಡುತ್ತಿರುವ ಮನೆಗಳಿಗೆ ಸಿಟಿಎಸ್ ಉತಾರೆ ಹಂಚಿಕೆಯೊಂದಿಗೆ ಹಲವಾರು ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಕೆಎಚ್‌ಡಿಸಿ ನಿಗಮ ಅಧೋಗತಿಯತ್ತ ಸಾಗಿತ್ತು. ಕಳೆದೆರಡು ವರ್ಷಗಳಲ್ಲಿ ಈ ನಿಗಮದ ಅಧ್ಯಕ್ಷನಾದಾಗಿನಿಂದ ನೇಕಾರರಿಗೆ ಮಜೂರಿ ಹೆಚ್ಚಳ, ಪೂರ್ಣ ಪ್ರಮಾಣದ ನೇಯ್ಗೆ ವ್ಯವಸ್ಥೆ ಸೇರಿ ಇತರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಉತಾರ ನೀಡುವ ಬಗ್ಗೆ ಶಾಸಕನಾದ ನನ್ನ ಕೈಯಲ್ಲಿಲ್ಲ. ವಿನಾಕಾರಣ ನನ್ನನ್ನೇ ಗುರಿಯನ್ನಾಗಿಸಿ ವ್ಯವಸ್ಥಿತ ಷಡ್ಯಂತ್ರ ಅರಿವಾಗುತ್ತದೆ. ನಿಗಮದ ಅಧ್ಯಕ್ಷನಾದ ಮಾತ್ರಕ್ಕೆ ಮನೆಗಳ ಹಂಚಿಕೆ ಕಾರ್ಯವಾಗದು. ಸರ್ಕಾರ ಮಟ್ಟದಲ್ಲಿ ಈ ಕುರಿತು ಸಕ್ರಮ ಮನೆಗಳ ಕಾರ್ಯ ಪ್ರಗತಿ ಹಂತದಲ್ಲಿದೆ.
—-ಸಿದ್ದು ಸವದಿ, ಶಾಸಕರು ಹಾಗೂ ಅಧ್ಯಕ್ಷರು, ಕೆಎಚ್‌ಡಿಸಿ ನಿಗಮ
ಮಹಿಳಾ ದೌರ್ಜನ್ಯ
ಬೆಂಗಳೂರು ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರ ಗರ್ಭಪಾತಕ್ಕೆ ಕಾರಣವಾಗಿರುವ ಬಿಜೆಪಿ ಶಾಸಕ ಸಿದ್ದು ಸವದಿ ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಂತ್ರಸ್ತೆಗೆ ಐದು ಕೋಟಿ ರು. ಪರಿಹಾರ ಕೊಡಿಸುವಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಬಿ. ಪುಷ್ಪಾ ಅಮರನಾಥ್ ನೇತೃತ್ವದ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
ಮಹಿಳಾ ದೌರ್ಜನ್ಯ : ಬಿಜೆಪಿ ಶಾಸಕರೋರ್ವರ ರಾಜೀನಾಮೆಗೆ ಒತ್ತಡ .
ದೂರು ಸಲ್ಲಿಕೆ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್, ‘ಈ ಭ್ರೂಣ ಹತ್ಯೆಗೆ ಕಾರಣರಾದ ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಆಕೆಗೆ ಆಗಿರುವ ಸಮಸ್ಯೆ ಹಾಗೂ ನಷ್ಟಕ್ಕೆ ಶಾಸಕರಿಂದ 5 ಕೋಟಿ ರು. ಪರಿಹಾರ ಕೊಡಿಸುವಂತೆ ಮಹಿಳಾ ಆಯೋಗಕ್ಕೆ ಹಾಗೂ ಡಿಜಿಪಿಗೆ ದೂರು ನೀಡಲಾಗಿದೆ, ಈ ಮೂಲಕ ಸರ್ಕಾರಕ್ಕೂ ಆಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.
ಶಾಸಕಿಯರಾದ ರೂಪಾ ಶಶಿಧರ್, ಸೌಮ್ಯಾರೆಡ್ಡಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಸದಸ್ಯೆ ವೀಣಾ ಕಾಶಪ್ಪನವರ್ ಮತ್ತಿತರರಿದ್ದರು.