Asianet Suvarna News Asianet Suvarna News

ಹಳಬರನ್ನು ಕೈ ಬಿಟ್ಟು ಹೊಸಬರಿಗೆ ಮಾತ್ರ ಅವಕಾಶ ನೀಡಿ

  • ಗುಜರಾತ್‌ನಲ್ಲಿ ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ 
  • ಅದೇ ಮಾದರಿಯಲ್ಲೇ ಸಚಿವ ಸಂಪುಟ ಆಗಬೇಕು ಎಂಬುದು ಅನೇಕ ಶಾಸಕರ ಅಪೇಕ್ಷೆ
Renukacharya Demands For new faces for karnataka cabinet   snr
Author
Bengaluru, First Published Sep 19, 2021, 7:35 AM IST
  • Facebook
  • Twitter
  • Whatsapp

ದಾವಣಗೆರೆ (ಸೆ.19): ಗುಜರಾತ್‌ನಲ್ಲಿ ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಅದೇ ಮಾದರಿಯಲ್ಲೇ ಸಚಿವ ಸಂಪುಟ ಆಗಬೇಕು ಎಂಬುದು ಅನೇಕ ಶಾಸಕರ ಅಪೇಕ್ಷೆಯಾಗಿದೆ ಎಂದು ಹೊನ್ನಾಳಿ ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ ಮಾದರಿಯಲ್ಲಿ ಸಚಿವ ಸಂಪುಟ ರಚನೆ ನಮ್ಮ ರಾಜ್ಯದಲ್ಲೂ ಆಗಬೇಕೆಂಬುದು ಎಲ್ಲಾ ಶಾಸಕರ ಅಪೇಕ್ಷೆಯಾಗಿದೆ. 

ಬಿಜೆಪಿಯಲ್ಲಿ ಮಹತ್ವ ಬೆಳವಣಿಗೆ: ಮತ್ತೊಮ್ಮೆ ಬೊಮ್ಮಾಯಿ ಸಚಿವ ಸಂಪುಟಕ್ಕೆ ಸರ್ಜರಿ ಆಗುತ್ತಾ?

ಈ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡುವಷ್ಟುದೊಡ್ಡವನು ನಾನಲ್ಲ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕೆಂಬುದು ನಾನೂ ಸೇರಿದಂತೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರ ಅಭಿಪ್ರಾಯವಾಗಿದೆ. 

ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕೆಂಬುದು ಪಕ್ಷದ ವರಿಷ್ಟರಿಗೆ ಬಿಟ್ಟವಿಚಾರ. ನಮ್ಮ ಜಿಲ್ಲೆಗೊಂದು ಸಚಿವ ಸ್ಥಾನ ಸಿಗಲೆಂಬುದು ನಮ್ಮೆಲ್ಲರ ಆಸೆ, ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios