Asianet Suvarna News Asianet Suvarna News

ಕಾಮಗಾರಿಗೆ ಹಣ ಬಿಡುಗಡೆ ಮಾಡಿ: ಸಿಎಂ ಸಿದ್ದುಗೆ ಉಗ್ರಪ್ಪ ಮನವಿ

ಮನೆಮನೆಗೆ ಕುಡಿವ ನೀರು ಕಲ್ಪಿಸುವ ಹಿನ್ನಲೆಯಲ್ಲಿ ತುಂಗಭದ್ರಾ ಹಿನ್ನೀರಿನ ಯೋಜನೆಗೆ ಪಾವಗಡ ತಾಲೂಕು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಪ್ರಗತಿಯಲ್ಲಿದ್ದು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಟೆಂಡರ್‌ ಪ್ರಕ್ರಿಯೆಗಳ ಮೂಲಕ ಕಾಮಗಾರಿ ನಡೆಯುತ್ತಿದೆ. ಯೋಜನೆಯ ಹಣ ಬಿಡುಗಡೆಗೊಳಿಸಿ ಕಾಮಗಾರಿ ವೇಗ ಹೆಚ್ಚಿಸುವಂತೆ ಒತ್ತಾಯಿಸಿ ಬುಧವಾರ ಬೆಂಗಳೂರಿನ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಸಂಸದ ಪಾವಗಡದ ವಿ.ಎಸ್‌.ಉಗ್ರಪ್ಪ ಮನವಿ ಸಲ್ಲಿಸಿದರು.

Release money for work: Ugrappa appeals to CM Siddaramaiah snr
Author
First Published Jun 22, 2023, 5:57 AM IST

 ಪಾವಗಡ :  ಮನೆಮನೆಗೆ ಕುಡಿವ ನೀರು ಕಲ್ಪಿಸುವ ಹಿನ್ನಲೆಯಲ್ಲಿ ತುಂಗಭದ್ರಾ ಹಿನ್ನೀರಿನ ಯೋಜನೆಗೆ ಪಾವಗಡ ತಾಲೂಕು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಪ್ರಗತಿಯಲ್ಲಿದ್ದು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಟೆಂಡರ್‌ ಪ್ರಕ್ರಿಯೆಗಳ ಮೂಲಕ ಕಾಮಗಾರಿ ನಡೆಯುತ್ತಿದೆ. ಯೋಜನೆಯ ಹಣ ಬಿಡುಗಡೆಗೊಳಿಸಿ ಕಾಮಗಾರಿ ವೇಗ ಹೆಚ್ಚಿಸುವಂತೆ ಒತ್ತಾಯಿಸಿ ಬುಧವಾರ ಬೆಂಗಳೂರಿನ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಸಂಸದ ಪಾವಗಡದ ವಿ.ಎಸ್‌.ಉಗ್ರಪ್ಪ ಮನವಿ ಸಲ್ಲಿಸಿದರು.

ಈ ವೇಳೆ ಗಡಿ ಭಾಗದ ಪಾವಗಡ ತಾಲೂಕಿನ ಪ್ರಗತಿಗೆ ವಿಶೇಷ ಆಸಕ್ತಿವಹಿಸಬೇಕು. ವಿವಿಧ ಯೋಜನೆ ರೂಪಿಸಿ ಉದ್ಯೋಗ ಮತ್ತು ಉನ್ನತ ಶಿಕ್ಷಣ ತರಬೇತಿ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ವಿರುದ್ಧ ಕಿಡಿ

ಕೊಪ್ಪಳ(ಮೇ.06):  ಹೆಂಡತಿ ರಕ್ಷಣೆ ಮಾಡದ ಮೋದಿ ದೇಶ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಹೇಗೆ ಮಾಡ್ತಾರೆ ಅಂತ ಕಾಂಗ್ರೆಸ್‌ ನಾಯಕ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಎಸ್ ಉಗ್ರಪ್ಪ ಅವರು, ಹೆಂಡತಿ ನೋಡದ ಇವರು ರಾಮ ಭಕ್ತರಾ?.ಅಂಜನಾದ್ರಿಯಲ್ಲಿ ಆಂಜನೇಯ ಹುಟ್ಟಿದ್ದಾನೆ. ಅನ್ಯ ರಾಜ್ಯದವರು ತಮ್ಮ ರಾಜ್ಯದಲ್ಲಿ ಹುಟ್ಟಿದ್ದಾನೆ ಅಂತಾರೆ. ಧೈರ್ಯ ಇದ್ದರೆ ಬೊಮ್ಮಾಯಿ, ಬಿಜೆಪಿ ಅವರು ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಅಂತಾ ಪ್ರತಿಪಾದನೆ ಮಾಡಬೇಕಿತ್ತು. ಅದರ ಬದಲು ಬಜರಂಗದಳ ನಿಷೇಧ ಮಾಡ್ತೀವಿ ಅಂದಾಗ ಆಂಜನೇಯ ಹೆಸರಲ್ಲಿ ಮೋದಿ, ಬೊಮ್ಮಾಯಿ, ಬಿಜೆಪಿ ಭಾವೋದ್ವೇಗದ ಮಾತಾಡ್ತಾರೆ. ಬೆಲೆ ಏರಿಕೆ ಬಗ್ಗೆ ಬಿಜೆಪಿ ಕಿಂಚಿತ್ತೂ ಮಾತಾಡಲ್ಲ ಅಂತ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.

ನಮ್ಮ ತಂದೆ ಜೊತೆಗೆ ಅಂಜನಾದ್ರಿ ಹನುಮ ಭಕ್ತರಿದ್ದಾರೆ, ಯಾರ ಭಯವೂ ಇಲ್ಲ: ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ

Follow Us:
Download App:
  • android
  • ios