ಬೆಂಗಳೂರಲ್ಲಿ ಮೊದಲ ಬಾರಿ ದಾಖಲೆ ಪ್ರಮಾಣದ ಸೋಂಕಿತರು ಪತ್ತೆ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿರಾರು ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ದಿನದಿನಕ್ಕೂ ಸೋಂಕಿನ ಹಾವಳಿ ಹೆಚ್ಚಾಗಿದೆ.

Recorded Number Of Corona Cases Found In Bengaluru

ಬೆಂಗಳೂರು(ಆ.16):  ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮೂರು ಸಾವಿರ ಸಂಖ್ಯೆ ದಾಟಿರುವ ಕೋರೋನಾ ಸೋಂಕು ದಾಖಲೆಯ 3,495 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ. 

ಇದರಿಂದ ನಗರದಲ್ಲಿ ಈ ವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 87,680ಕ್ಕೆ, ಇದರಲ್ಲಿ ಶನಿವಾರ ಬಿಡುಗಡೆಯಾದವರ ಸಂಖ್ಯೆ 51,426ಕ್ಕೆ (ಶನಿವಾರ ಬಿಡುಗಡೆಯಾದ 2034 ಮಂದಿ ಸೇರಿ) ಏರಿಕೆಯಾಗಿದೆ. ಉಳಿದ 34,858 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..! ... 

ಉಳಿದಂತೆ ಶನಿವಾರ ಬಳ್ಳಾರಿಯಲ್ಲಿ 759, ಮೈಸೂರು 635, ಬೆಳಗಾವಿ 358, ದಾವಣಗೆರೆ 327, ದಕ್ಷಿಣ ಕನ್ನಡ 271, ಉಡುಪಿ 241, ಧಾರವಾಡ 239, ವಿಜಯಪುರ 232, ಕಲಬುರಗಿ 189, ಕೊಪ್ಪಳ 178, ಬಾಗಲಕೋಟೆ 168, ತುಮಕೂರು 161, ರಾಯಚೂರು 155, ಹಾಸನ 154, ಬೆಂಗಳೂರು ಗ್ರಾಮಾಂತರ 152, ಗದಗ 142, ಶಿವಮೊಗ್ಗ 133 ಜನರು ಪತ್ತೆಯಾಗಿದ್ದಾರೆ.

ಇನ್ನು ಹಾವೇರಿ 116, ಬೀದರ್‌ 113, ಮಂಡ್ಯ 84, ಚಿಕ್ಕಮಗಳೂರು 79, ಉತ್ತರ ಕನ್ನಡ 75, ಯಾದಗಿರಿ 64, ಚಾಮರಾಜನಗರ 64, ಕೋಲಾರ 55, ರಾಮನಗರ 53, ಕೊಡಗು 48, ಚಿಕ್ಕಬಳ್ಳಾಪುರ 44 ಮತ್ತು ಚಿತ್ರದುರ್ಗದಲ್ಲಿ 34 ಮಂದಿಗೆ ಸೋಂಕು ದೃಢಪಟ್ಟಿದೆ.

Latest Videos
Follow Us:
Download App:
  • android
  • ios