Asianet Suvarna News Asianet Suvarna News

Karnataka Rains: ಇತಿ​ಹಾ​ಸ​ದ​ಲ್ಲೇ ಮೊದಲು, ತುಂಗಭದ್ರಾ ಡ್ಯಾಂಗೆ ದಾಖಲೆ ನೀರು..!

*  22 ವರ್ಷಗಳ ಬಳಿಕ ಅತಿ​ಹೆಚ್ಚು ನೀರು
*  ಹೆಚ್ಚುತ್ತಲೇ ಇದೆ ಒಳಹರಿವು
*  ಹಿಂಗಾರು ಬೆಳೆಗಿಲ್ಲ ನೀರಿನ ಸಮಸ್ಯೆ
 

Record Water in Tungabhadra Dam Due to Untimely Rain in Karnataka grg
Author
Bengaluru, First Published Nov 26, 2021, 10:38 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.26):  ರಾಜ್ಯ​ದಲ್ಲಿ ಸುರಿದ ಅಕಾ​ಲಿಕ ಮಳೆಗೆ(Untimely Rain)  ಕೆರೆ-ಕಟ್ಟೆ​ಗಳು, ಹೊಳೆ-ನದಿ​ಗ​ಳೆಲ್ಲ ತುಂಬಿ ಹರಿ​ಯು​ತ್ತಿದ್ದು, ತುಂಗ​ಭದ್ರಾ ಜಲಾ​ಶ​ಯದ(Tungabhadra Dam) ಇತಿ​ಹಾ​ಸ​ದ​ಲ್ಲಿಯೇ ಮೊದಲ ಬಾರಿ ದಾಖ​ಲೆಯ ನೀರು ಹರಿದು ಬಂದಿ​ದೆ.

ನವೆಂಬರ್‌ ತಿಂಗಳಲ್ಲಿಯೂ ಒಳಹರಿವು(Inflow) ಹೆಚ್ಚುತ್ತಲೇ ಸಾಗಿದೆ. ತುಂಗಭದ್ರಾ ಜಲಾಶಯವು ದಾಖಲೆ ನೀರು(Water) ಬಳಕೆಗೆ ಪ್ರಸಕ್ತ ವರ್ಷ ಸಾಕ್ಷಿಯಾಗಲಿದೆ. ಬಚಾವತ್‌ ತೀರ್ಪು ಪ್ರಕಾರ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಮೀರಿಯೂ ನೀರು ಬಳಸಲು ಜಲಾಶಯಕ್ಕೆ ಮತ್ತೊಮ್ಮೆ ಅವಕಾಶ ದೊರೆಯಲಿದೆ.

ತುಂಗಭದ್ರಾ ಜಲಾಶಯ ನಿರ್ಮಾಣವಾದ ಸಂದ​ರ್ಭ​ದಲ್ಲಿ ಆಂಧ್ರ(Andhra Pradesh), ಕರ್ನಾಟಕ(Karnataka) ರಾಜ್ಯ​ಗಳು ಜಲಾಶಯದಿಂದ ಮುಂಗಾರು ಮತ್ತು ಹಿಂಗಾರು ಸಮ​ಯ​ದ​ಲ್ಲಿ 212 ಟಿಎಂಸಿ ನೀರು ಬಳಕೆಗೆ ಹಂಚಿಕೆ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷ ನವೆಂಬರ್‌ನಲ್ಲೂ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ದಾಖಲೆ ಮೀರಿ ನೀರು ಬಳಕೆಗೆ ಸಾಕ್ಷಿಯಾಗಲಿದೆ.

Vijayanagara| ಟಿಬಿ ಡ್ಯಾಂನಿಂದ 40 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

1978, 79-79, 80 ಹಾಗೂ 80, 81ನೇ ವರ್ಷದ ಅವಧಿಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಲೂ ನವೆಂಬರ್‌ನಲ್ಲಿ ಹೀಗೆ ನೀರು ಹರಿದು ಬಂದಿದ್ದರಿಂದ ಜಲಾಶಯದ ನೀರು ಬಳಕೆ ಪ್ರಮಾಣ ಅಧಿಕವಾಗಿತ್ತು. ಇದರಲ್ಲಿ 1978, 79ರಲ್ಲಿ 216 ಟಿಎಂಸಿ ನೀರನ್ನು ಜಲಾಶಯದಿಂದ ಬಳಕೆ ಮಾಡಿಕೊಳ್ಳುವ ಮೂಲಕ ದಾಖಲೆಯಾಗಿತ್ತು. ಸಾಮಾನ್ಯವಾಗಿ ಜಲಾಶಯದಿಂದ ಬಳಕೆ ಮಾಡಿಕೊಳ್ಳಲು ಹಂಚಿಕೆಯಾಗಿರುವುದೇ 212 ಟಿಎಂಸಿ ನೀರು ಮಾತ್ರ ಎನ್ನು​ವುದು ಇಲ್ಲಿ ಗಮ​ನಾ​ರ್ಹ. ಅದರಲ್ಲೂ ಜಲಾಶಯದಲ್ಲಿ ಹೂಳು(Silt) ತುಂಬಿರುವುದರಿಂದ ಈಗ ಪ್ರತಿ ವರ್ಷ 160-180 ಟಿಎಂಸಿ ವರೆಗೆ ಮಾತ್ರ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.

ಮುಂಗಾರು(Monsoon) ಅಬ್ಬರಿಸಿದರೂ ತುಂಗಭದ್ರಾ ಜಲಾಶಯದಲ್ಲಿ ಕೇವಲ 100.855 ಟಿಎಂಸಿ ನೀರು ಮಾತ್ರ ಸಂಗ್ರಹವಾಗುತ್ತದೆ. ಜಲಾ​ಶ​ಯದ ಸಾಮರ್ಥ್ಯ 134 ಟಿಎಂಸಿ ಇದೆ. ಈ ಪೈಕಿ 34 ಟಿಎಂಸಿ ಹೂಳು ತುಂಬಿದೆ. ಸಾಮಾನ್ಯವಾಗಿ ಹಿಂಗಾರು ವೇಳೆಗೆ ಜಲಾಶಯದಲ್ಲಿ 70-80 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿರುತ್ತಿತ್ತು. ಆದರೆ, ಈ ವರ್ಷ ನವೆಂಬರ್‌ ತಿಂಗಳಲ್ಲಿಯೂ ಜಲಾಶಯ ಭರ್ತಿಯಾಗಿರುವುದು ಸಂತ​ಸದ ವಿಚಾ​ರ.

100 ಟಿಎಂಸಿ ಬಳಕೆ:

ಈಗಾಗಲೇ ಜಲಾಶಯದಲ್ಲಿ ಆಂಧ್ರ, ತೆಲಂಗಾಣ(Telangana0, ಕರ್ನಾ​ಟಕ ರಾಜ್ಯಗಳು ಸೇರಿ 100 ಟಿಎಂಸಿಗೂ ಅಧಿಕ ನೀರು ಬಳಕೆ ಮಾಡಿವೆ. ಈಗ ಜಲಾಶಯದಲ್ಲಿ 100.855 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ ಭರ್ತಿಯಾಗಿರುವುದರಿಂದ ಸೋಮವಾರದ ಮಾಹಿತಿಯ ಪ್ರಕಾರ 1,08,000 ಕ್ಯುಸೆಕ್‌ ನೀರನ್ನು ನದಿಯ ಮೂಲಕ ಹೊರಗೆ ಬಿಡಲಾಗಿದೆ. ಈಗಾಗಲೇ ಈ ರೀತಿಯಾಗಿ 70-80 ಟಿಎಂಸಿ ನೀರು ಹರಿದು ಹೋಗಿದೆ. ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಾಲು​ವೆ​ಗಳ ಮೂಲ​ಕವೇ ನೀರು ಬಳ​ಸಿ​ಕೊ​ಳ್ಳ​ಲಾ​ಗು​ತ್ತಿದೆ. ಇದೆಲ್ಲ ಲೆಕ್ಕಾ​ಚಾ​ರಕ್ಕೆ ಪರಿ​ಗ​ಣ​ನೆಗೆ ಬಂದಲ್ಲಿ ಪ್ರಸಕ್ತ ವರ್ಷದಲ್ಲಿ ಹಿಂದಿನ ಎಲ್ಲ ದಾಖಲೆಯನ್ನು ಮುರಿದು ನೀರು ಬಳಕೆಯ ದಾಖಲೆ ನಿರ್ಮಾ​ಣ​ವಾ​ಗ​ಲಿದೆ ಎನ್ನುತ್ತಾರೆ ತುಂಗ​ಭದ್ರಾ ಜಲಾ​ಶ​ಯದ ಹಿರಿಯ ಅಧಿಕಾರಿಗಳು. ಪ್ರಸಕ್ತ ವರ್ಷ ಒಂದು ಅಂದಾಜಿನ ಪ್ರಕಾರ 225 ಟಿಎಂಸಿಗೂ ಅಧಿಕ ನೀರು ಬಳಕೆಯಾಗುತ್ತದೆ ಎನ್ನಲಾಗುತ್ತದೆ. ಈ ಪ್ರಮಾಣ ಅಧಿಕವಾದರೂ ಅಚ್ಚರಿ ಇಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.

Karnataka Rains: ಅಕಾಲಿಕ ಮಳೆಯಿಂದ ವಿಸ್ಮಯ, ಬತ್ತಿ ಹೋಗಿದ್ದ 3 ನದಿಗಳ ಪುನರ್ಜನ್ಮ!

ಹಿಂಗಾರು ಬೆಳೆಗೆ ಸಮೃದ್ಧ ನೀರು:

ಪ್ರಸಕ್ತ ವರ್ಷ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಮುಂಗಾರು ಬೆಳೆಗೂ ಹೆಚ್ಚು ನೀರು ಹರಿ​ದಿದೆ. ಹಿಂಗಾರು ಬೆಳೆಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ಹಿಂಗಾರು ಬೆಳೆಗೆ ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಮಧ್ಯೆ ಅಂತ್ಯಕ್ಕೆ ಬಿಡಲಾಗುತ್ತದೆ. ಪ್ರಸಕ್ತ ವರ್ಷ ಜಲಾಶಯ ಭರ್ತಿಯಾಗಿರುವುದರಿಂದ ನೀರಿನ ಸಮಸ್ಯೆಯಾಗುವುದಿಲ್ಲ. ರೈತರು(Farmers) ಹಿಂಗಾರಿಯಲ್ಲಿಯೂ ಆತಂಕವಿಲ್ಲದೆ ಬೆಳೆ(Crop) ತೆಗೆಯಬಹುದು.

ಜಲಾಶಯದಲ್ಲಿ ಪ್ರಸಕ್ತ ವರ್ಷ ನವೆಂಬರ್‌ ತಿಂಗಳಲ್ಲಿಯೂ ಸಾಕಷ್ಟು ನೀರು ಲಭ್ಯ​ವಿದೆ. ಜಲಾಶಯ ಭರ್ತಿಯಾಗಿರುವುದರಿಂದ ನದಿಯ ಮೂಲಕ ನೀರು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಪ್ರಸಕ್ತ ವರ್ಷ ಜಲಾಶಯದ ಈ ವರ್ಷದ ಬಳಕೆಯ ಪ್ರಮಾಣ ದಾಖಲೆಯಾಗುವುದರಲ್ಲಿ ಅನುಮಾನ ಇಲ್ಲ ಅಂತ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ. 

ಜಲಾಶಯಕ್ಕೆ ನವೆಂಬರ್‌ ತಿಂಗಳಲ್ಲಿಯೂ ಆಗಾಧ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಬಳಕೆಯಲ್ಲಿ ಹಿಂದಿನ ಎಲ್ಲ ದಾಖಲೆಯನ್ನು ಮೀರುವ ಸಾಧ್ಯತೆ ಇದೆ. ಹಂಚಿಕೆಯ ಪ್ರಮಾಣವನ್ನು ಮೀರಿಯೂ ಬಳಕೆಗೆ ನೀರು ಲಭ್ಯವಾಗಲಿದೆ ಎಂದು ಎಇಇ ಕಾಡಾ ಮುನಿರಾಬಾದ್‌ ಬಸಪ್ಪ ಜಾನಕರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios