ರಾಮನಗರ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆ : ಕ್ಷೇತ್ರಗಳ ಹೆಸರು ಬದಲು
ರಾಮನಗರ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಿ ವ್ಯಾಪ್ತಿ ನಿಗದಿಪಡಿಸಲಾಗಿದೆ.
ರಾಮನಗರ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆ : ಕ್ಷೇತ್ರಗಳ ಹೆಸರು ಬದಲು
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಏ.19): ಕ್ಷೇತ್ರ ಪುನರ್ ವಿಂಗಡಣೆ ಮಾರ್ಗಸೂಚಿಯಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿಯ 24 ಕ್ಷೇತ್ರ ಹಾಗೂ 04 ತಾಲೂಕು ಪಂಚಾಯಿತಿಗಳ 65 ಕ್ಷೇತ್ರಗಳ ವ್ಯಾಪ್ತಿಯನ್ನು ನಿಗದಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಜಿಪಂ ಕ್ಷೇತ್ರಗಳ ಸಂಖ್ಯೆ 22ರಿಂದ 24ಕ್ಕೆ ಹೆಚ್ಚಳವಾಗಿದ್ದರೆ, ಇನ್ನು 16 ಕ್ಷೇತ್ರಗಳ ಕಡಿತದಿಂದ 04 ತಾಪಂ ಕ್ಷೇತ್ರಗಳ ಸಂಖ್ಯೆ 81ರಿಂದ 65ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಪ್ರಮುಖವಾಗಿ 10 ಜಿಪಂ ಕ್ಷೇತ್ರ ಹಾಗೂ 27 ತಾಪಂ ಕ್ಷೇತ್ರಗಳ ಹೆಸರು ಬದಲಾಗಿವೆ. ಉಳಿದ ಕ್ಷೇತ್ರಗಳು ಮೂಲ ಹೆಸರನ್ನೇ ಉಳಿಸಿಕೊಂಡಿವೆ.
ಲಾಳಾಘಟ್ಟಮತ್ತು ಕಾಳಾರಿಕಾವಲ್ ಹೊಸ ಕ್ಷೇತ್ರ:
ಚನ್ನಪಟ್ಟಣ ತಾಲೂಕಿನಲ್ಲಿ 5 ಜಿಪಂ (ಅಕ್ಕೂರು, ಕೋಡಂಬಳ್ಳಿ, ಮಳೂರು, ಹೊಂಗನೂರು, ಬೇವೂರು) ಕ್ಷೇತ್ರಗಳ ಜತೆಗೆ ಲಾಳಾಘಟ್ಟಹಾಗೂ ಮಾಗಡಿ ತಾಲೂಕಿನಲ್ಲಿ 5 ಜಿಪಂ (ಕುದೂರು, ಮಾಡಬಾಳ್, ಸೋಲೂರು, ತಗ್ಗೀಕುಪ್ಪೆ, ತಿಪ್ಪಸಂದ್ರ) ಕ್ಷೇತ್ರಗಳ ಜತೆಗೆ ಕಾಳಾರಿಕಾವಲ್ ಹೊಸ ಕ್ಷೇತ್ರವಾಗಿ ಸೃಷ್ಟಿಯಾಗಿದೆ. ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಹಲವು ಕ್ಷೇತ್ರಗಳು ಮೂಲ ಹೆಸರನ್ನು ಉಳಿಸಿಕೊಂಡಿದ್ದರೆ ಮತ್ತೆ ಕೆಲವು ಕ್ಷೇತ್ರಗಳು ಬೇರೆ ಹೆಸರನ್ನು ಪಡೆದುಕೊಂಡಿವೆ.
HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್ ಸೇರ್ಪಡೆ ...
16 ತಾಪಂ ಕ್ಷೇತ್ರಗಳು ಖೋತಾ:
ರಾಮನಗರ ತಾಪಂ: 14 ತಾಪಂ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳು ಕೈ ತಪ್ಪಿವೆ. ಭೈರಮಂಗಲ, ಉರಗಹಳ್ಳಿ (ಗೋಪಹಳ್ಳಿ ), ಕೊಡಿಯಾಲ ಕರೇನಹಳ್ಳಿ (ಮಂಚನಾಯಕನಹಳ್ಳಿ), ಹೆಜ್ಜಾಲ (ಬನ್ನಿಕುಪ್ಪೆ -ಬಿ), ಹರಿಸಂದ್ರ (ಸುಗ್ಗನಹಳ್ಳಿ), ಕೇತೋಹಳ್ಳಿ (ಮಾಯಗಾನಹಳ್ಳಿ), ದೊಡ್ಡಮಣ್ಣುಗುಡ್ಡೆ (ಬೆಳಗುಂಬ), ಜಾಲಮಂಗಲ,ಕೂಟಗಲ್, ಹುಲಿಕೆರೆ - ಗುನ್ನೂರು (ಕೈಲಾಂಚ), ಕೂನಗಲ್ (ಹುಣಸನಹಳ್ಳಿ), ವಿಭೂತಿಕೆರೆ (ಚನ್ನಮಾನಹಳ್ಳಿ) ಕ್ಷೇತ್ರ ಉಳಿದುಕೊಂಡಿವೆ.
ಚನ್ನಪಟ್ಟಣ ತಾಪಂ:
19 ಸದಸ್ಯರ ಬಲದಿಂದ 15ಕ್ಕೆ ಕುಸಿದಿದೆ. ಅಕ್ಕೂರು, ಸೋಗಾಲ (ಸುಳ್ಳೇರಿ), ಇಗ್ಗಲೂರು, ಕೊಂಡಂಬಳ್ಳಿ, ಬಾಣಂತಹಳ್ಳಿ (ಎಲೆತೋಟದಹಳ್ಳಿ), ಭೂಹಳ್ಳಿ, ಮಳೂರು, ಮಳೂರು ಪಟ್ಟಣ (ಚಕ್ಕೆರೆ), ಹೊಂಗನೂರು, ವಿರೂಪಾಕ್ಷೀಪುರ, ಮಾಕಳಿ (ಬೇವೂರು), ಎಂ.ಬಿ.ಹಳ್ಳಿ, ಮೈಲನಾಯಕನಹಳ್ಳಿ (ತಿಟ್ಟಮಾರನಹಳ್ಳಿ) ಲಾಳಾಘಟ್ಟ(ಕೆಂಗಲ್), ನಾಗವಾರ.
ಕನಕಪುರ ತಾಪಂ: 30 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳು ಮಾಯವಾಗಿವೆ. ಕಲ್ಲಹಳ್ಳಿ (ತುಂಗಣಿ), ಚಿಕ್ಕಮುದವಾಡಿ, ಚಿಕ್ಕಕಲ್ ಬಾಳು (ಕೊಟ್ಟಗಾಳು), ಶಿವನಹಳ್ಳಿ, ಹೊರಳಗಲ್ಲು (ಟಿ.ಬೇಕುಪ್ಪೆ), ವಿರೂಪಸಂದ್ರ (ಚಾಕನಹಳ್ಳಿ), ಸಾತನೂರು, ಸಾಸಲಾಪುರ (ಕಬ್ಬಾಳು), ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ, ನಲ್ಲಹಳ್ಳಿ (ಮರಳೆಬೇಕುಪ್ಪೆ), ಕಚುವನಹಳ್ಳಿ (ಚೂಡಹಳ್ಳಿ), ಕೋಡಿಹಳ್ಳಿ, ಹೂಕುಂದ, ಐ.ಗೊಲ್ಲಹಳ್ಳಿ, ದೊಡ್ಡಮರಳವಾಡಿ, ಕಲ್ಲನಕುಪ್ಪೆ (ಯಲಚವಾಡಿ), ರಸ್ತೆ ಜಕ್ಕಸಂದ್ರ (ಟಿ.ಹೊಸಹಳ್ಳಿ), ಅವರೆಮಾಳರಾಂಪುರ (ಕಗ್ಗಲಹಳ್ಳಿ), ಚೀಲೂರು, ಹುಣಸನಹಳ್ಳಿ (ಬನ್ನಿಮುಕೋಡ್ಲು), ಕೊಳಗೊಂಡನಹಳ್ಳಿ , ಹೊಸದುರ್ಗ ಕೇತ್ರ ಉಳಿದಿವೆ.
ಎಚ್ಡಿಕೆ ಕರ್ಮಭೂಮಿ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಬಿಜೆಪಿ ಭರ್ಜರಿ ಪ್ಲಾನ್! .
ಮಾಗಡಿ ತಾಪಂ: 18 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳು ಉಳಿದಿವೆ. ಕುದೂರು, ಹುಲಿಕಲ್, ಅದರಂಗಿ, ಮಾಡಬಾಳ್, ಅಗಲಕೋಟೆ, ಹಂಚೀಕುಪ್ಪೆ, ಸೋಲೂರು, ಬಾಣವಾಡಿ, ಮೋಟಗೊಂಡನಹಳ್ಳಿ, ಗುಡೇಮಾರನಹಳ್ಳಿ, ನೇತೇನಹಳ್ಳಿ, ಬಿಸ್ಕೂರು, ಚಿಕ್ಕಹಳ್ಳಿ, ನಾರಸಂದ್ರ, ಕಾಳಾರಿಕಾವಲ್ ಕ್ಷೇತ್ರ.
ತಾಲೂಕು ಜಿಪಂ ಕ್ಷೇತ್ರದ ಹಳೇಯ ಹೆಸರು ಜಿಪಂ ಕ್ಷೇತ್ರದ ಹೊಸ ಹೆಸರು
ರಾಮನಗರ ಬೈರಮಂಗಲ ಹೆಜ್ಜಾಲ
ರಾಮನಗರ ಕೂಟಗಲ್ ದೊಡ್ಡಮಣ್ಣುಗುಡ್ಡೆ
ರಾಮನಗರ ಕೈಲಾಂಚ ವಿಭೂತಿಕೆರೆ
ಚನ್ನಪಟ್ಟಣ ಅಕ್ಕೂರು ಸೋಗಾಲ
ಚನ್ನಪಟ್ಟಣ ಬೇವೂರು ಮೈಲನಾಯಕನಹಳ್ಳಿ
ಕನಕಪುರ ತುಂಗಣಿ ಚಿಕ್ಕಮುದವಾಡಿ
ಕನಕಪುರ ಶಿವನಹಳ್ಳಿ ಹೊರಳಗಲ್ಲು
ಕನಕಪುರ ಹೊಸದುರ್ಗ ಕೊಳಗೊಂಡನಹಳ್ಳಿ
ಮಾಗಡಿ ತಗ್ಗೀಕುಪ್ಪೆ ಗುಡೇಮಾರನಹಳ್ಳಿ
ಮಾಗಡಿ ತಿಪ್ಪಸಂದ್ರ ಬಿಸ್ಕೂರು
ಜಿಪಂ ಕ್ಷೇತ್ರ ಬದಲಾವಣೆ ವಿವರ
1.ಚನ್ನಪಟ್ಟಣ ತಾಲೂಕು
ಸೋಗಾಲ ಕ್ಷೇತ್ರ: ಸೋಗಾಲ, ಅಕ್ಕೂರು, ಬಾಣಗಹಳ್ಳಿ, ಸುಳ್ಳೇರಿ, ಇಗ್ಗಲೂರು, ಹಾರೋಕೊಪ್ಪ
ಕೋಡಂಬಳ್ಳಿ ಕ್ಷೇತ್ರ: ಕೋಡಂಬಳ್ಳಿ, ಸಿಂಗರಾಜಿಪುರ, ಎಲೆತೋಟದಹಳ್ಳಿ, ಜೆ.ಬ್ಯಾಡರಹಳ್ಳಿ, ಭೂಹಳ್ಳಿ, ಬಿ.ವಿ.ಹಳ್ಳಿ.
ಮಳೂರು ಕ್ಷೇತ್ರ: ಮಳೂರು, ಮತ್ತಿಕೆರೆ, ಮುದಿಗೆರೆ, ಚಕ್ಕೆರೆ, ಮಳೂರುಪಟ್ಟಣ
ಹೊಂಗನೂರು ಕ್ಷೇತ್ರ: ಹೊಂಗನೂರು, ಕೂಡ್ಲೂರು, ವಿರೂಪಾಕ್ಷಿಪುರ, ನೀಲಸಂದ್ರ
ಮೈಲನಾಯಕನಹಳ್ಳಿ ಕ್ಷೇತ್ರ: ಮೈಲನಾಯಕನಹಳ್ಳಿ, ಬೇವೂರು, ಮಾಕಳಿ, ಎಂ.ಬಿ.ಹಳ್ಳಿ, ಬ್ಯಾಡರಹಳ್ಳಿ, ತಿಟ್ಟಮಾರನಹಳ್ಳಿ.
2.ಮಾಗಡಿ ತಾಲೂಕು-
ಕುದೂರು ಕ್ಷೇತ್ರ: ಕುದೂರು, ಕಣ್ಣೂರು, ಶ್ರೀಗಿರಿಪುರ, ಹುಲಿಕಲ್, ಅದರಂಗಿ, ಮಾದಿಗೊಂಡನಹಳ್ಳಿ
ಮಾಡಬಾಳ್ ಕ್ಷೇತ್ರ: ಮಾಡಬಾಳ್, ಮತ್ತಿಕೆರೆ, ಅಗಲಕೋಟೆ, ಸೀಗೆಕುಪ್ಪೆ, ಹಂಚಿಕುಪ್ಪೆ, ಅಜ್ಜನಹಳ್ಳಿ
ಸೋಲೂರು ಕ್ಷೇತ್ರ: ಸೋಲೂರು, ಲಕ್ಕೇನಹಳ್ಳಿ, ಬಾಣವಾಡಿ, ಬಿಟ್ಟಸಂದ್ರ, ಮೋಟಗೊಂಡನಹಳ್ಳಿ, ಲಕ್ಕೇನಹಳ್ಳಿ
ಗುಡೇಮಾರನಹಳ್ಳಿ ಕ್ಷೇತ್ರ: ಗುಡೇಮಾರನಹಳ್ಳಿ, ತಗ್ಗೀಕುಪ್ಪೆ, ಬೆಳಗುಂಬ, ಬಾಚೇನಹಟ್ಟಿ, ನೇತೇನಹಳ್ಳಿ
ಬಿಸ್ಕೂರು ಕ್ಷೇತ್ರ: ಬಿಸ್ಕೂರು, ತಿಪ್ಪಸಂದ್ರ, ಸಂಕೀಘಟ್ಟ, ಚಿಕ್ಕಹಳ್ಳಿ, ಹುಳ್ಳೇನಹಳ್ಳಿ
ಕಾಳಾರಿಕಾವಲ್ ಕ್ಷೇತ್ರ: ಕಾಳಾರಿಕಾವಲ್ , ನಾರಸಂದ್ರ, ಚಿಕ್ಕಮುದಿಗೆರೆ, ಸಾತನೂರು, ಕಲ್ಯಾ