ಮಕ್ಕಳ ಚಿಕಿತ್ಸೆಗೆ ‘ಡಾರ್ಕ್ ವನ್‌ ಅಲೈಟ್‌’ ವೇಷ ತೊಟ್ಟರವಿ ಕಟಪಾಡಿ

  • ‘ಡಾರ್ಕ್ ಒನ್‌ ಅಲೈಟ್‌’ ಎಂಬ ಹಾಲಿವುಡ್‌ ಸಿನಿಮಾದ ವೇಷ ಧರಿಸಿದ ರವಿ ಕಟಪಾಡಿ
  • ಅನಾರೋಗ್ಯ ಪೀಡಿತ 6 ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
  • ಇಂದು ಉಡುಪಿ ಸುತ್ತಮುತ್ತ ವೇಷ ಪ್ರದರ್ಶನ ನಡೆಸಲಿದ್ದಾರೆ.
Ravi katapadi wear Dark alight costume this Krishnashtami snr

  ಉಡುಪಿ (ಆ.31):  ಮಾನವೀಯತೆಗೆ ಮತ್ತೊಂದು ಹೆಸರು ರವಿ ಕಟಪಾಡಿ. ಪ್ರತಿವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭ ವೈವಿಧ್ಯಮಯ ಫ್ಯಾಂಟಸಿ ವೇಷಗಳನ್ನು ಧರಿಸಿ ಸಂಗ್ರಹಿಸಿದ ಹಣದಲ್ಲಿ ಅಸಹಾಯಕ ಮಕ್ಕಳಿಗೆ ಲಕ್ಷಗಟ್ಟಲೆ ರು. ನಗದು ಸಹಾಯ ಮಾಡುತ್ತಾರೆ.

ಅದರಂತೆ ಈ ಬಾರಿಯೂ ‘ಡಾರ್ಕ್ ಒನ್‌ ಅಲೈಟ್‌’ ಎಂಬ ಹಾಲಿವುಡ್‌ ಸಿನಿಮಾದ ವೇಷ ಧರಿಸಿ ಅನಾರೋಗ್ಯ ಪೀಡಿತ 6 ಮಕ್ಕಳ ನೆರವಿಗೆ ಮುಂದಾಗಿದ್ದಾರೆ. ಇತರ ವೇಷಧಾರಿಗಳಿಗೆ ಈ ಬಾರಿ ಕೋವಿಡ್‌ನಿಂದಾಗಿ ಅನುಮತಿ ಇಲ್ಲದಿದ್ದರೂ, ಜಿಲ್ಲಾಧಿಕಾರಿ ಅವರು ರವಿ ಅವರ ಮಾನವೀಯ ಉದ್ದೇಶದ ಕಾರಣಕ್ಕೆ ವಿಶೇಷ ಅನುಮತಿ ನೀಡಿದ್ದಾರೆ.

ಕೆಬಿಸಿಯಲ್ಲಿ ಗೆದ್ದ 12.50 ಲಕ್ಷ ಬಡ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದ ದಿನಗೂಲಿ ಕಾರ್ಮಿಕ..!

ಸೋಮವಾರ ಈ ವೇಷ ಧರಿಸಿ ಮಲ್ಪೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರದರ್ಶನ ನಡೆಸಿ ಹಣ ಸಂಗ್ರಹಿಸಿದ್ದಾರೆ. ಮಂಗಳವಾರ ಉಡುಪಿ ಸುತ್ತಮುತ್ತ ವೇಷ ಪ್ರದರ್ಶನ ನಡೆಸಲಿದ್ದಾರೆ.

ಕಳೆದ ಆರು ವರ್ಷದಲ್ಲಿ ವೇಷ ಧರಿಸಿ 72 ಲಕ್ಷ ರುಪಾಯಿ ಸಂಗ್ರಹಿಸಿ 60ಕ್ಕೂ ಹೆಚ್ಚು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದಾರೆ.

Latest Videos
Follow Us:
Download App:
  • android
  • ios