Asianet Suvarna News Asianet Suvarna News

ವಿಜಯಪುರ: ಕೊರೋನಾ ಮಧ್ಯೆಯೂ ಅದ್ಧೂರಿ ಜಾತ್ರೋತ್ಸವ

ಸರ್ಕಾರ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯ ಮಾಡಿದ್ದರೂ ಜಾತ್ರೆಯಲ್ಲಿ ಪಾಲನೆಯಾದ ನಿಯಮ|ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದ ಸಿದ್ದಲಿಂಗೇಶ್ವರ ಜಾತ್ರೆ| ರಥೋತ್ಸವದಲ್ಲಿ ಪಾಲ್ಗೊಂಡಿದ್ದರು ಕಲಬುರಗಿ, ರಾಯಚೂರು, ಬೀದರ್‌, ಗದಗ, ಬಾಗಲಕೋಟೆ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು| 

Rathotsava Held at Vijayapura During Coronavirus grg
Author
Bengaluru, First Published Apr 19, 2021, 2:53 PM IST

ವಿಜಯಪುರ(ಏ.19): ರೂಪಾಂತರಿ ಕೊರೋನಾ ಅಟ್ಟಹಾಸದ ಮಧ್ಯೆಯೂ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಕ್ಕಳಮೇಲಿ ಗ್ರಾಮದ ಸಿದ್ದಲಿಂಗೇಶ್ವರ ಜಾತ್ರೋತ್ಸವ ಶನಿವಾರ ಅದ್ಧೂರಿಯಾಗಿ ನಡೆದಿದೆ.

ರಥೋತ್ಸವದಲ್ಲಿ ಕಲಬುರಗಿ, ರಾಯಚೂರು, ಬೀದರ್‌, ಗದಗ, ಬಾಗಲಕೋಟೆ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸರ್ಕಾರ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯ ಮಾಡಿದ್ದರೂ ಜಾತ್ರೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. ಈಚೆಗೆ ವಿಜಯಪುರ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಕೇಸ್‌ಗಳು ವರದಿಯಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಕೊರೋನಾ ಕಾಟ: ಲಾಕ್‌ಡೌನ್‌ನಿಂದ ಪ್ರಯೋಜನವಿಲ್ಲ ಎಂದ ಬಿಜೆಪಿ ಸಂಸದ

ನನ್ನ ಗಮನಕ್ಕೆ ಭಾನುವಾರ ಬಂದಿದ್ದು, ಜಾತ್ರೆಯಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ, ಮುಂದಾಳತ್ವ ಯಾರು ವಹಿಸಿದ್ದಾರೆಂದು ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ತಾಪಂ ಮುಖ್ಯಾಧಿಕಾರಿಗೆ ಗ್ರಾಮಕ್ಕೆ ಹೋಗಲು ತಿಳಿಸಿದ್ದು ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರಗಿಸಲು ಹೇಳಿದೇನೆ. ಮುಂದೆ ಯಾವ ಯಾವ ಗ್ರಾಮಗಳಲ್ಲಿ ಯಾವಾಗ ಜಾತ್ರೆಗಳು, ಮದುವೆಗಳು, ಸಮಾರಂಭಗಳು ಇವೆ. ಎಲ್ಲ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಂದಗಿ ತಹಸೀಲ್ದಾರ್‌ ಸಂಜುಕುಮಾರ ದಾಸರ ತಿಳಿಸಿದ್ದಾರೆ.
 

Follow Us:
Download App:
  • android
  • ios