Asianet Suvarna News Asianet Suvarna News

ಆಟವಾಡಿಸುವ ನೆಪದಲ್ಲಿ ಕರೆದೊಯ್ದು ಮೂರೂವರೆ ವರ್ಷದ ಮಗು ಮೇಲೆ ಅತ್ಯಾಚಾರ!

ಆಟವಾಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದ| ಮೂರೂವರೆ ವರ್ಷದ ಮಗು ಮೇಲೆ ಅತ್ಯಾಚಾರ| ವರಾಹಸಂದ್ರ ಗ್ರಾಮದ ಬಾಲಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ.

rape On three And Half Year Baby At Mandya
Author
Bangalore, First Published Aug 22, 2019, 8:22 AM IST
  • Facebook
  • Twitter
  • Whatsapp

ನಾಗಮಂಗಲ[ಆ.22]: ಆಟವಾಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಮೂರೂವರೆ ವರ್ಷದ ಮಗುವಿನ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ವರಾಹಸಂದ್ರ ಗ್ರಾಮದಲ್ಲಿ ಆ.17ರಂದು ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಳಗಂಚಿ ಗ್ರಾಮದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ವರಾಹಸಂದ್ರ ಗ್ರಾಮದ ಬಾಲಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ. ಬಾಳಗಂಚಿ ಗ್ರಾಮದ ಬಾಲಕಿಯನ್ನು ವರಾಹಸಂದ್ರ ಗ್ರಾಮಕ್ಕೆ ಕರೆತಂದು ಬಾಲಕಿಯ ಸೋದರತ್ತೆ ಸಾಕಿಕೊಂಡಿದ್ದರು.

ಪ್ರತಿನಿತ್ಯದಂತೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ತಿನ್ನಲು ಕಡಲೆಕಾಯಿಕೊಟ್ಟು ಆಟವಾಡಿಸುವ ನೆಪದಲ್ಲಿ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಬಾಲಕ ಅತ್ಯಾಚಾರವೆಸಗಿದ್ದಾನೆ. ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಮನೆಯ ಪೋಷಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Follow Us:
Download App:
  • android
  • ios