ಕೋಲಾರ [ಆ.28]: ಶಾಸಕ ಕೆ.ರಮೇಶ್‌ ಕುಮಾರ್‌ ಅವರು ಮಂಗಳವಾರ ದಲಿತರ ಜೊತೆ ಸಹಪಂಕ್ತಿ ಭೋಜನ ಮಾಡಿ, ದಲಿತ ಮಹಿಳೆಯ ಕೈತುತ್ತು ಸೇವಿಸುವ ಮೂಲಕ ಸಮಾನತೆಯ ಸಂದೇಶ ಸಾರಿದ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. 

ಕಲ್ಲೂರು ಗ್ರಾಮದಲ್ಲಿ ಭಾರತ ಗೃಹಪ್ರವೇಶ ಸಮಿತಿ ‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದಡೆಗೆ’ ಕಾರ್ಯಕ್ರಮದಡಿಯಲ್ಲಿ ಕೆ.ಕೆ.ಮಂಜುನಾಥರೆಡ್ಡಿ ಅವರ ಮನೆಯಲ್ಲಿ ದಲಿತರ ಪ್ರವೇಶ, ಸಹಪಂಕ್ತಿ ಭೋಜನವನ್ನು ಹಮ್ಮಿಕೊಂಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ ಕಾರ್ಯಕ್ರಮದಲ್ಲಿ ರಮೇಶ್‌ ಕುಮಾರ್‌ ಅವರು ನೆಲದ ಮೇಲೆ ಕುಳಿತು ದಲಿತರೊಂದಿಗೆ ಊಟ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಮನುಷ್ಯರಾಗಿ ಬದುಕುವುದರ ಜೊತೆಗೆ ನಾಗರಿಕರಾಗಿ ಬದುಕಲು ಮುಂದಾಗಬೇಕು, ನುಡಿಯುವ ಮಾತು ಮಾಡುವ ಕೆಲಸಕ್ಕೆ ಅಂತರ ಇರಬಾರದು ಎಂದು ತಿಳಿಸಿದರು.