Asianet Suvarna News Asianet Suvarna News

ಜಾರಕಿಹೊಳಿ ಸ್ವಾಗತಕ್ಕೆ ಮಧುವಣಗಿತ್ತಿಯಂತೆ ಶೃಂಗಾರಗೊಂಡ ಕರದಂಟು ನಗರಿ

ನೂತನ ಸಚಿವರ ಸ್ವಾ ಗತಕ್ಕೆ ಗೋಕಾಕ ಸಜ್ಜು| ಇಂದು ಸಚಿವ ರಮೇಶ್ ಗೋಕಾಕ ನಗರಕ್ಕೆ ಆಗಮನ | ಬೃಹತ್ ಅಭಿನಂದನಾ ಸಮಾರಂಭ|30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ|

Ramesh Jarakiholi Will Be Come to Gokak After Minister Take Oath
Author
Bengaluru, First Published Feb 9, 2020, 10:14 AM IST

ಭೀಮಶಿ ಭರಮಣ್ಣವರ 

ಗೋಕಾಕ(ಫೆ.09): ಅಂದುಕೊಂಡಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ರಮೇಶ ಜಾರಕಿಹೊಳಿ ಅವರು ತವರು ಕ್ಷೇತ್ರಕ್ಕೆ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. 

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದ್ದರೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂ ದ ಮತ್ತು ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಂದು ನೀಡಲಾಗಿದ್ದ ಅನರ್ಹತೆಯ ಕಳಂಕವನ್ನು ಕ್ಷೇತ್ರ ಜನರು ಗೆಲ್ಲಿಸುವ ಮೂಲಕ ಅಳಿಸಿ ಹಾಕಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಮೂಲಕ ಜನತೆಯ ತೀರ್ಪಿನ ಮುಂದೆ ಎಲ್ಲ ತೀರ್ಪುಗಳು ಶೂನ್ಯ ಎಂಬುವುದು ಮತ್ತೊಮ್ಮೆ ಸಾಬೀತುಪಡಿಸಿತು. ಪ್ರಚಾರದ ಸಂದರ್ಭದಲ್ಲಿಯೂ ಕ್ಷೇತ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನೇತೃತ್ವದ ಬಿಜೆಪಿ ಸರ್ಕಾರದ ರಚನೆಯಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರದ ಕುರಿತು ಬಣ್ಣಿಸಿದ್ದರು. ಮಾತ್ರವಲ್ಲ, ಇಲ್ಲಿ ನೆರೆದಿರುವ ಜನರನ್ನು ನೋಡಿದರೆ ರಮೇಶ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೋ ಏನೋ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಹೇಳುವ ಮೂಲಕ ಗೆದ್ದು ಸಚಿವರಾಗುತ್ತಾರೆ ಎಂಬುವುದರಲ್ಲಿ ಅನುಮಾನ ಇಲ್ಲ ಎಂದು ಭವಿಷ್ಯ ನುಡಿದಿದ್ದರು. 

ಈಗ ಆ ಭವಿಷ್ಯ ನಿಜವಾಗಿದೆ. ಅಕ್ಷರಶಃ ಸಿಎಂ ಯಡಿಯೂರಪ್ಪ ಮಾತಿನಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ರಮೇಶ ಜಾರಕಿಹೊಳಿ ಅವರು ಪ್ರಥಮ ಬಾರಿಗೆ ಸಚಿವರಾಗಿ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರನ್ನು ಸ್ವಾಗತಿಸಲು ಇಡೀ ಗೋಕಾಕ ನಗರ ಮಧುವಣಗಿತ್ತಿಯಂತೆ ಶೃಂಗಾರ ಗೊಂಡಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ಎರಡು ಬಾರಿ ಸಚಿವರಾಗಿದ್ದ ಅವರು, ಈಗ ಬಿಜೆಪಿಯಿಂದ ಸಚಿವರಾಗಿದ್ದಾರೆ. ಇದುವರೆಗೆ ಕ್ಷೇತ್ರದಲ್ಲಿ ಕಮಲವೇ ಅರಳಿಲಿಲ್ಲ. ಇವರ ಗೆಲುವಿನ ಮೂಲಕ ಕ್ಷೇತ್ರ ಕೂಡ ಕಮಲಮಯವಾಗಿದೆ. ಮೂರನೇ ಬಾರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಥಮ ಬಾರಿಗೆ ಫೆ.9ರ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ನೇರವಾಗಿ ಗೋಕಾಕ ನಗರಕ್ಕೆ ಆಗಮಿಸಲಿದ್ದಾರೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಪಕ್ಷ ಭೇದವಿಲ್ಲದೆ ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತ ಬಂದಿರುವ ಸಚಿವ ರಮೇಶ ಜಾರಕಿಹೊಳಿ ಅವರು ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವುದಕ್ಕೆ ಕ್ಷೇತ್ರದ ಜನರಲ್ಲಿ ಸಂತೋಷ ಮನೆ ಮಾಡಿದೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ ನಿರೀಕ್ಷಿಸುತ್ತಿದ್ದು ಸಚಿವ ಸ್ಥಾನದಿಂದ ಎಲ್ಲ ಅಭಿವೃದ್ಧಿ ಕಾರ್ಯಗಳು ಸುಗಮವಾಗಲಿವೆ ಎಂದು ಭೀಮಗೌಡ ಪೋಲಿಸಗೌಡ ತಿಳಿಸಿದ್ದಾರೆ. 

ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಶಾಸಕರಾಗಿದ್ದರು. ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿ ಸಂಪುಟ ದರ್ಜೆಯ ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಥಮ ಬಾರಿಗೆ ಗೋಕಾಕ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಖುಷಿಯಾಗಿದೆ. ಜನರ ಒಂದು ಆಶಯ ಬಿಜೆಪಿಯ ಮೇಲಿತ್ತು. ಅದರಂತೆ ರಮೇಶ ಜಾರಕಿಹೊಳಿ ಬಿಜೆಪಿಯಿಂದ ಶಾಸಕರಾಗಿದ್ದು ಜನರ ಆಸೆ ಇಮ್ಮಡಿಯಾಯಿತು. ಸದ್ಯ ಸಂಪುಟ ದರ್ಜೆಯ ಸಚಿವರಾಗಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಯುವ ಧುರೀಣ ಸುರೇಶ ಸನದಿ ತಿಳಿಸಿದ್ದಾರೆ. 

ಕ್ಷೇತ್ರದ ಜನತೆಯ ಆಶಯದಂತೆ ಮೂರನೇ ಬಾರಿಗೆ ರಮೇಶ ಜಾರಕಿಹೊಳಿ ಅವರು ಸಚಿವರಾಗಿದ್ದಾರೆ. ಕ್ಷೇತ್ರದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ದ್ದಾರೆ. ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ್ವ ನಡೆಯಲಿದೆ ಎಂದು  ಯುವ ಧುರೀಣ ಹನಮಂತ ದುರ್ಗನ್ನವರ ಹೇಳಿದ್ದಾರೆ. 

ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸಚಿವರಾಗಿ ರಮೇಶ ಜಾರಕಿಹೊಳಿ ನೇಮಕಗೊಂಡು ಗೋಕಾಕ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಸಂತಸ ನೂರ್ಮಡಿಗೊಳಿಸಿದೆ. ಅವರಿಗೆ ಹಾರ್ದಿಕ ಅಭಿನಂದನೆ.  ಹನಮಂತ ಯಡ್ರಾಂವಿ, ಗ್ರಾಮ ಪಂಚಾಯತಿ ಸದಸ್ಯರು ಚಿಕ್ಕನಂದಿ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹೇಳಿದ್ದಾರೆ.

ಇಂದು ಏನೇನು ಕಾರ್ಯಕ್ರಮ ಇದೆ

ನೂತನ ಸಚಿವ ರಮೇಶ ಜಾರಕಿಹೊಳಿ ಅವರು, ಭಾನುವಾರ ಬೆಳಗ್ಗೆ ಗೋಕಾಕಿಗೆ ಆಗಮಿಸಿದ ಕೂಡಲೇ ಮೊದಲು ತಂದೆ, ತಾಯಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿ, ನಂತರ ಶ್ರೀ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ನಂತರ ಮಧ್ಯಾಹ್ನ 12ರ ಹೊತ್ತಿಗೆ ಶಾಸಕರ ಕಚೇ ರಿ ಮುಂಭಾಗ ನೂತನ ಸಚಿವ ಜಾರಕಿಹೊಳಿಗೆ ಅಭಿಮಾನಿಗಳು, ಕಾರ್ಯಕರ್ತರು ಸುಮಾರು 5 ಕ್ವಿಂಟಾಲ್ ತೂಕದ ಸೇಬು ಹಾರ ಹಾಕಿ ಭರ್ಜರಿಯಾಗಿ ಅಭಿನಂದಿಸಲಿದ್ದಾರೆ. 

ಅಭಿನಂದನಾ ಸಮಾರಂಭದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಅಭಿಮಾನಿಗಳ, ಕಾರ್ಯ ಕರ್ತರ ಅಭಿಮಾನದ ಸತ್ಕಾರಕ್ಕೆ ಸಾಹುಕಾರ ರಮೇಶ ಜಾರಕಿಹೊಳಿ ಅವರನ್ನು ಸ್ವಾಗತಿಸಲು ಎಲ್ಲೆಡೆ ಕಟೌಟ್‌ಗಳು ನಗರಾದ್ಯಂತ ರಾರಾ ಜಿಸುತ್ತಿವೆ. ಬಸವೇಶ್ವರ ವೃತ್ತ ಸೇರಿದಂತೆ ಇನ್ನೂ ಹಲವಾರು ವೃತ್ತಗಳನ್ನು ಶೃಂಗರಿಸಲಾಗಿದೆ.

Follow Us:
Download App:
  • android
  • ios